ವಾಹನಗಳನ್ನು ನಾವು ಹೇಗೆ ಬೇಕೋ ಹಾಗೆ ಚಲಾಯಿಸುತ್ತೆವೆ. ನಾವು ನಮ್ಮ ಮತ್ತು ಇತರರ ಸುರಕ್ಷತೆ ಬಗ್ಗೆ ಸ್ವಲ್ಪವೂ ಚಿಂತಿಸದೆ ವಾಹನ ಚಲಾಯಿಸುತ್ತೇವೆ. ಅದು ನಮಗೂ ಕ್ಷೇಮವಲ್ಲಾ ಇತರರಿಗೂ ಕ್ಷೇಮವಲ್ಲಾ. ಈ ರೀತಿಯಾಗಿ ವಾಹನ ಚಲಾಯಿಸಿದರೆ ಅಪಘಾತಗಳು ಸಂಭವಿಸುವುದು ಸಹಜ. ಅಪಘಾತಗಳು ಸಂಭವಿಸಿದಾಗ ಕೆಲ ವಾಹನಗಳಿಗೆ ವಿಮೆ ಮಾಡಿಸಿರುತ್ತಾರೆ. ಅದು ಅಪಘಾತದ ಸಂದರ್ಭ ಸನ್ನಿವೇಶ ಎಲ್ಲವೂ ವಿಮೆ ನಿಬಂಧನೆಯಲ್ಲಿ ಸೇರಿರುತ್ತದೆ. ಎಷ್ಟೋ ಜನರು ಆ ನಿಬಂಧನೆಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸಿರುವುದಿಲ್ಲ. ಇದ್ಕಕೆ ಸಂಬಂಧಿಸಿದಂತೆ ವಿಮಾ ಕಂಪನಿಗಳು (Insurance Payment Restrictions) ಮತ್ತು ಸಾರಿಗೆ ಇಲಾಖೆಯು ಕೆಲ ನಿಬಂಧನೆಗಳನ್ನು ಜಾರಿಗೆ ತಂದಿದೆ ಅವುಗಳೆಂದರೆ
- ಆಟೋ ರಿಕ್ಷಾಗಳಲ್ಲಿ ಸಂಚರಿಸುವ ಪ್ರಯಾಣಿಕರು, ಸರ್ಕಾರ ಅನುಮತಿ ನೀಡಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಯಾವುದೇ ವಿಮೆಯ ವ್ಯಾಪ್ತಿಗೆ ಒಳಪಡುವುದಿಲ್ಲ.
- ಮೇಲಿನ ನಿಬಂಧನೆಯು ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವವರಿಗೂ ಅನ್ವಯವಾಗುತ್ತದೆ.
- ಹೆಲೈಟ್ (ಶಿರಸ್ತ್ರಾಣ) ಧರಿಸದೇ ದ್ವಿಚಕ್ರ ವಾಹನ ಚಲಾಯಿಸುವವರೂ ಕೂಡ ವಿಮೆಯ ವ್ಯಾಪ್ತಿಗೆ ಒಳಪಡುವುದಿಲ್ಲ.
- ರಾಂಗ್ ಸೈಡ್ ನಲ್ಲಿ ವಾಹನ ಚಲಾಯಿಸುತ್ತಾ, ಅಪಘಾತ ಸಂಭವಿಸಿದಲ್ಲಿ ಆ ವಾಹನ ಚಾಲಕನಿಗೆ ಯಾವುದೇ ಪರಿಹಾರ ದೊರೆಯುವುದಿಲ್ಲ ಹಾಗೂ ಅಪಘಾತ ಸಂದರ್ಭದಲ್ಲಿ ಸರಿಯಾದ ದಾರಿಯಲ್ಲಿ ಚಲಾಯಿಸುತ್ತಿದ್ದ ಚಾಲಕನಿಗೆ ಯಾವುದೇ ಕೇಸ್ ಬೀಳುವುದಿಲ್ಲ.
- ಕುಡಿದು ವಾಹನ ಚಲಾಯಿಸಿದವರಿಗೆ, ಯಾವುದೇ ವಿಮೆ ದೊರೆಯುವುದಿಲ್ಲ ಮತ್ತು ಅಪಘಾತದಿಂದ ಆದ ಯಾವುದೇ ನಷ್ಟಕ್ಕೆ ಪರಿಹಾರ ದೊರೆಯುವುದಿಲ್ಲ.
- ರಾಂಗ್ ಸೈಡ್‌ನಲ್ಲಿ ಚಲಾಯಿಸುತ್ತಿರುವಾಗ ಅಪಘಾತ ಸಂಭವಿಸಿದಲ್ಲಿ, ಅಪಘಾತದಿಂದ ಗಾಯಗೊಂಡ ವ್ಯಕ್ತಿಗೆ 20 ಲಕ್ಷರೂ.ಗಳ ಪರಿಹಾರ ಕೊಡಬೇಕಾಗುತ್ತದೆ ಅಥವಾ ಅವರ ಆಸ್ತಿಯಿಂದ ಮುಟ್ಟುಗೋಲು ಮಾಡಿಕೊಳ್ಳಲಾಗುತ್ತದೆ. ಪರಿಹಾರ ನೀಡಲು ಅಶಕ್ತರಾದರೆ ಅಂತಹವರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
- ಮೇಲಿನ ನಿಭಂದನೆ ಮೊಬೈಲ್‌ನಲ್ಲಿ ಮಾತಾಡುತ್ತಾ ವಾಹನ ಚಲಾಯಿಸುವಾಗ ಅಪಘಾತ ಮಾಡಿದವರಿಗೂ ಅನ್ವಯವಾಗುತ್ತದೆ.
- ಮೇಲಿನ ನಿಭಂದನೆಗೊಳಪಟ್ಟ ವಾಹನ ಚಾಲಕರ ಚಾಲನಾ ಪರವಾನಿಗೆ( ಡ್ರೈವಿಂಗ್ ಲೈಸನ್ಸ್) ಯನ್ನು ರದ್ದುಗೊಳಿಸಲಾಗುವುದು.
- ಮೇಲಿನ ನಿಭಂದನೆಗಳ ಪ್ರಕಾರ ಆಫೀಸರ್ ಗಳು ಕ್ರಮ ತೆಗೆದುಕೊಳ್ಳದಿದ್ದಲ್ಲಿ, ಅವರನ್ನು ಮೂರು ವರ್ಷಗಳ ಕಾಲ ಸಸ್ಪೆಂಡ್ ಮಾಡಲಾಗುವುದು.
- ವೇಗದ ಮಿತಿ (ಸ್ಪೀಡ್ ಲಿಮಿಟ್) ಯನ್ನು ಮೀರಿ ಅತ್ಯಂತ ವೇಗವಾಗಿ ಚಲಾಯಿಸುವವರಿಗೆ, ಮೇಲಿನ ಎಲ್ಲಾ ನಿಭಂದನೆಗಳು ಅನ್ವಯವಾಗುವುದು.
- ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುವವರಿಗೆ ಪರಿಹಾರ ದೊರೆಯುವುದಿಲ್ಲ.
- ಈ ಮೇಲಿನ ಎಲ್ಲಾ ವಿಷಯಗಳನ್ನು ಈಗಿನ ಯುವ ಪೀಳಿಗೆಯವರಿಗೆ, ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಸರಿಯಾದ ರೀತಿಯಲ್ಲಿ ತಿಳಿಸಿ ಮತ್ತು ಅರ್ಥ ಮಾಡಿಸಿ.
ಇದನ್ನೂ ಓದಿ: permanent solution to flood : ಮಂಗಳೂರಿನಲ್ಲಿ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ : ವರದಾನವಾಯ್ತು ರಾಜಕಾಲುವೆ ಸಮೀಪದ ತಡೆಗೋಡೆ
ಇದನ್ನೂ ಓದಿ: 5G Network : ವಿಶೇಷತೆಗಳಿಂದ ಕೂಡಿದ 5ಜಿ ನೆಟ್ ವರ್ಕ್
(Know All about Vehicle Accident Insurance Payment Restrictions)