oldest royal bengal tiger : ದೇಶ ಕಂಡ ಅತ್ಯಂತ ಹಿರಿಯ ಹುಲಿಗಳಲ್ಲೊಂದಾದ ‘ರಾಜಾ’ ಇನಿಲ್ಲ

ಪಶ್ಚಿಮ ಬಂಗಾಳ : oldest royal bengal tiger : ಭಾರತದ ಅತ್ಯಂತ ವಯಸ್ಕ ಹುಲಿಗಳಲ್ಲಿ ಒಂದು ಎಂಬ ಕೀರ್ತಿಗೆ ಪಾತ್ರವಾಗಿದ್ದ ರಾಯಲ್​ ಬಂಗಾಳ ಹುಲಿ ‘ರಾಜಾ’ ಸೋಮವಾರ ಮುಂಜಾನೆ ಮೃತಪಟ್ಟಿದೆ. ಮನುಷ್ಯರ ನಿಯಂತ್ರಣದಲ್ಲಿದ್ದ ಈ ಹುಲಿಯು ಪಶ್ಚಿಮ ಬಂಗಾಳದ ಅಲಿಪುರ್ದೌರ್​​​ ಜಿಲ್ಲೆಯ ಜಲ್ದಾಪುರ ಅರಣ್ಯ ಪ್ರದೇಶದಲ್ಲಿರುವ ತನ್ನ ಆಶ್ರಯ ತಾಣಗಳಲ್ಲಿ ವಾಸವಿದ್ದ ರಾಜಾ ಮೃತಪಟ್ಟಿದೆ.


ಮೃತ ಪಟ್ಟ ರಾಜಾ ಯಾವುದೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರಲಿಲ್ಲ. ಆದರೆ ಸೋಮವಾರ ಮುಂಜಾನೆ ಸಾವನ್ನಪ್ಪಿದೆ. ಪಶು ವೈದ್ಯರು ವಯೋ ಸಹಜ ಸಮಸ್ಯೆಗಳಿಂದ ರಾಜಾ ಮೃತಪಟ್ಟಿದೆ ಎಂದು ಹೇಳಿದ್ದಾರೆ ಅಂತಾ ಮುಖ್ಯ ವನ್ಯಜೀವಿ ಸರಂಕ್ಷಣಾಧಿಕಾರಿ ದೇಬಲ್​ ರಾಯ್​ ಮಾಹಿತಿ ನೀಡಿದ್ದಾರೆ. ಮುಂದಿನ ತಿಂಗಳು 23ರಂದು ರಾಜಾ ತನ್ನ 26ನೇ ವರ್ಷದ ಜನ್ಮ ದಿನವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ತನ್ನ 26ನೇ ವರ್ಷದ ಜನ್ಮ ದಿನಕ್ಕೂ ಒಂದು ತಿಂಗಳ ಮುಂಚೆ ಸಾವನ್ನಪ್ಪಿದ್ದಾನೆ. 2008ರಲ್ಲಿ ಈ ಹುಲಿಯು ಮೊಸಳೆ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುವ ಮೂಲಕ ಮರು ಜನ್ಮವನ್ನು ಪಡೆದಿತ್ತು. ಹೀಗಾಗಿ ರಾಜಾ ಮೊಸಳೆ ದಾಳಿಯಿಂದ ಪಾರಾದ ದಿನವನ್ನೇ ಅರಣ್ಯ ಇಲಾಖೆ ಅಧಿಕಾರಿಗಳು ರಾಜಾ ಜನ್ಮ ದಿನವಾಗಿ ಆಚರಿಸಿಕೊಂಡು ಬರ್ತಿದ್ದಾರೆ. ಕಳೆದ ವರ್ಷ ರಾಜಾ 25ನೇ ವರ್ಷದ ಜನ್ಮ ದಿನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆಚರಿಸಿದ್ದರು.


25 ವರ್ಷ 11 ತಿಂಗಳು ಪ್ರಾಯದ ರಾಜಾ ಹುಲಿ ಪಶ್ಚಿಮ ಬಂಗಾಳದ ಅತ್ಯಂತ ಹಿರಿಯ ರಾಯಲ್​ ಬೆಂಗಾಲ್​ ಹುಲಿ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಸೋಮವಾರ ಮುಂಜಾನೆ ಮೂರು ಗಂಟೆ ಸುಮಾರಿಗೆ ಮೃತಪಟ್ಟಿದೆ . ಮೃತಪಟ್ಟ ಹುಲಿಗೆ ಅರಣ್ಯ ಇಲಾಖೆ ಸಿಬ್ಬಂದಿ ಪುಷ್ಪ ನಮನ ಸಲ್ಲಿಸುವ ಮೂಲಕ ಅಂತಿಮ ಕ್ರಿಯೆ ನೆರವೇರಿಸಿದ್ದಾರೆ. ಸಾಮಾನ್ಯವಾಗಿ ಒಂದು ಹುಲಿ 20 ವರ್ಷಗಳ ಕಾಲ ಬದುಕಿರುತ್ತದೆ. ಆದರೆ ರಾಜಾ ಮಾತ್ರ ಬರೋಬ್ಬರಿ 25 ವರ್ಷ 11 ತಿಂಗಳುಗಳ ಕಾಲ ಬದುಕಿ ಇತಿಹಾಸ ನಿರ್ಮಿಸಿದ್ದ.


2008ರಲ್ಲಿ ರಾಜಾ ಹುಲಿ ಮೇಲೆ ಸುಂದರ್​ಬನ್​ ಅರಣ್ಯ ಪ್ರದೇಶದಲ್ಲಿ ಮೊಸಳೆ ದಾಳಿ ಮಾಡಿತ್ತು. ಈ ಸಂದರ್ಭದಲ್ಲಿ ರಾಜಾ ಹುಲಿ ತನ್ನ ಬಲಗಾಲನ್ನು ಕಳೆದುಕೊಂಡಿದ್ದ. ಇದಾದ ಬಳಿಕ ರಾಜಾ ಹುಲಿಯನ್ನು ದಕ್ಷಿಣ ಖಾಯೇಬರಿ ಹುಲಿ ರಕ್ಷಣಾ ಕೇಂದ್ರಕ್ಕೆ ಶಿಫ್ಟ್​ ಮಾಡಿ ಶುಶ್ರೂಷೆ ನೀಡಲಾಗಿತ್ತು .ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ರಾಜಾ ಹುಲಿಗೆ ಕೃತಕ ಕಾಲು ಕೂಡ ಅಳವಡಿಸಲಾಗಿತ್ತು. 2008ರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇದರ ವಯಸ್ಸು 12 ಇರಬಹುದು ಎಂದು ಅಂದಾಜು ಮಾಡಿದ್ದರು. ಅಂದಿನಿಂದ ಮೊಸಳೆ ದಾಳಿಯಿಂದ ರಾಜಾ ಪಾರಾದ ದಿನವನ್ನೇ ಆತನ ಜನ್ಮ ದಿನವೆಂದು ಪರಿಗಣಿಸಲಾಗುತ್ತಿತ್ತು .

ಇದನ್ನು ಓದಿ : Mekedatu DPR debate : ಮೇಕೆದಾಟು ಡಿಪಿಆರ್ ಚರ್ಚೆಗೂ ಅಡ್ಡಿ : ಮತ್ತೆ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು

ಇದನ್ನೂ ಓದಿ : Cute Peacock : ಪ್ಲೀಸ್‌ ನನ್ನ ಫೋಟೋ ತೆಗಿಬೇಡಿ ! ಮುದ್ದಾಗಿ ನುಲಿದ ನವಿಲು !!!

one of the- oldest royal bengal tiger in india raja dies at 25 in north bengal

Comments are closed.