ದಸರಾ ಹಬ್ಬದ (Dasara festival) ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ಮಾರುತಿ ಸುಜುಕಿ ಜಿಮ್ನಿ ಆಲ್ಪಾ ಎಂಟಿ ಮತ್ತು ಆಲ್ಪಾ ಎಟಿ ಕಾರುಗಳ ಮೇಲೆ ಎಕ್ಸ್‌ಚೇಂಜ್ ಆಫರ್ ನೀಡಲಿದ್ದು, ಹಬ್ಬದ ಹಿನ್ನೆಲೆಯಲ್ಲಿ 50000 ರೂಪಾಯಿ ಆಫರ್ ಘೋಷಿಸಿದೆ.
ಮಾರುತಿ ಸುಜುಕಿ ಜಿಮ್ನಿ ಕಾರುಗಳ ಖರೀದಿಯ ಮೇಲೆ 50000ರೂ. ಆಫರ್ ಮಾತ್ರವಲ್ಲದೇ ಎಕ್ಸ್ಚೇಂಜ್ ಬೋನಸ್, ಆಯ್ದ ಮಾದರಿಗಳಲ್ಲಿ ಹೆಚ್ಚುವರಿ ಬೋನಸ್ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಲಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದೆ. ಭಾರತದಲ್ಲಿ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಮಾರುತಿ ಸುಜುಕಿ (Maruti Suzuki) ಕೈಗೆಟುಕುವ ಕಾರುಗಳನ್ನು ನೀಡುತ್ತಿದೆ.

ಮಾರುತಿ ಸುಜುಕಿ ದಸರಾ, ನವರಾತ್ರಿ ಹಬ್ಬದ ವಿಶೇಷ ಕೊಡುಗೆಯಲ್ಲಿ ಜಿಮ್ನಿ ಖರೀದಿ ಮಾಡಬಹುದಾಗಿದೆ. ಅಲ್ಲದೇ ಮಾರುತಿ ಜಿಮ್ನಿ ಕಾರಿನ ಮೇಲೆ 50,000 ರೂಪಾಯಿಗಳ ನಗದು ರಿಯಾಯಿತಿ ಕೊಡುಗೆಯನ್ನು ನೀಡಲಾಗಿದೆ. ಈ ಮೂಲಕ ಗ್ರಾಹಕರು ಜಿಮ್ನಿ ಕಾರನ್ನು ಬುಕ್ ಮಾಡಿದರೆ ಈ ಆಫರ್ ಲಭ್ಯವಾಗಲಿದೆ.
ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) (ಎಕ್ಸ್‌ಶೋರೂಂ) ಬೆಲೆ 12.74 ಲಕ್ಷದಿಂದ ಆರಂಭವಾಗಿದ್ದು, 15.05 ಲಕ್ಷ ರೂ. ಡ್ಯುಯಲ್-ಟೋನ್ ಆಯ್ಕೆಗಳಲ್ಲಿ ಲಭ್ಯವಿದೆ, ನೀಲಿ ಕಪ್ಪು ಛಾವಣಿಯೊಂದಿಗೆ ಕೈನೆಟಿಕ್ ಹಳದಿ ಮತ್ತು ನೀಲಿ ಕಪ್ಪು ಛಾವಣಿಯೊಂದಿಗೆ ಸಿಜ್ಲಿಂಗ್ ಕೆಂಪು, ಇದು ಐದು ಮೊನೊಟೋನ್ ಛಾಯೆಗಳಲ್ಲಿ ಸಿಜ್ಲಿಂಗ್ ರೆಡ್, ಗ್ರಾನೈಟ್ ಗ್ರೇ, ನೆಕ್ಸಾ ಬ್ಲೂ, ಬ್ಲಶ್ ಬ್ಲಾಕ್ ಮತ್ತು ಪರ್ಲ್ ಆರ್ಕ್ಟಿಕ್ ವೈಟ್ನಲ್ಲಿ ಲಭ್ಯವಿದೆ. ಅಲ್ಲದೇ ನಾಲ್ಕು ಆಸನಗಳಲ್ಲಿ ಕಾರು ಲಭ್ಯವಿದೆ.
ಇದನ್ನೂ ಓದಿ : ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಕಾರು ಲೋನ್ ಆಫರ್ ನೀಡುತ್ತಿವೆ ಈ ಬ್ಯಾಂಕ್‌ಗಳು

ಐದು ಬಾಗಿಲನ್ನು ಒಳಗೊಂಡಿರುವ ಜಿಮ್ನಿ 208 ಲೀಟರ್ ಬೂಟ್ ಸ್ಪೇಸ್ ಒಳಗೊಂಡಿದ್ದು, ಹಿಂಬದಿಯ ಆಸನಗಳನ್ನು ಮಡಿಸುವ ಮೂಲಕ ಇದನ್ನು 332 ಲೀಟರ್‌ಗಳಿಗೆ ಹೆಚ್ಚಳ ಮಾಡಬಹುದಾಗಿದೆ. ಮಾರುತಿ ಜಿಮ್ನಿ ತನ್ನ ಶಕ್ತಿಯನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಪಡೆಯಲಿದೆ. ಇದು 105PS ಮತ್ತು 134Nm ಅನ್ನು ಹೊರಹಾಕುತ್ತದೆ. ಈ ಘಟಕವು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್‌ಗೆ ಹೊಂದಿಕೆಯಾಗುತ್ತದೆ ಮತ್ತು 4-ವೀಲ್ ಡ್ರೈವ್‌ಟ್ರೇನ್ (4WD) ನೊಂದಿಗೆ ಪ್ರಮಾಣಿತವಾಗಿ ಬರುತ್ತದೆ.
ಈ ಕೊಡುಗೆಯು ಜಿಮ್ನಿ ಝೀಟಾ ಎಂಟಿ (Jimny Zeta MT) , ಝೀಟಾ ಎಟಿ, ಆಲ್ಫಾ ಎಂಟಿ ಮತ್ತು ಆಲ್ಫಾ ಎಟಿ ಮಾದರಿಗಳಲ್ಲಿಯೂ ಲಭ್ಯವಿರುತ್ತದೆ. ಇದರೊಂದಿಗೆ ಮಾರುತಿ ಜಿಮ್ನಿ ಮಾರಾಟದಲ್ಲಿ ದಾಖಲೆ ಬರೆಯಲು ಸಜ್ಜಾಗಿದೆ. ದಸರಾ ಕೊಡುಗೆಯು ದೇಶಾದ್ಯಂತ ಮಾರುತಿ ಸುಜುಕಿ ನೆಕ್ಸಾ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ. ಆಲ್ಫಾ ಎಂಟಿ ಮತ್ತು ಆಲ್ಫಾ ಎಟಿ ಕಾರುಗಳಿಗೆ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದೆ.
ಇದನ್ನೂ ಓದಿ : ಟಾಟಾ ಕಾರುಗಳಲ್ಲಿ ಇನ್ಮುಂದೆ ಅಲೆಕ್ಸಾ : Tata Nexon, Nexon.Ev, ಹ್ಯಾರಿಯರ್, ಸಫಾರಿ ಕಾರುಗಳಲ್ಲಿ ಹೊಸ ಅನುಭವ
ಆಯ್ದ ಮಾಡೆಲ್‌ಗಳಲ್ಲಿ ಡೀಲರ್‌ಶಿಪ್‌ನಿಂದ ಹೆಚ್ಚುವರಿ 45,000 ರೂ.ಗಳ ರಿಯಾಯಿತಿ ಕೊಡುಗೆಯೂ ಲಭ್ಯವಿದೆ. ಇದರೊಂದಿಗೆ ಮಾರುತಿ ಜಿಮ್ನಿ ಈಗ ಸುಲಭವಾಗಿ ಕೈಗೆಟುಕುವಂತಿದೆ. ಮಾರುತಿ ಸುಜುಕಿ ಜಿಮ್ನಿ 5-ಡೋರ್ ರೂ 12.74 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಟಾಪ್ ಮಾಡೆಲ್ ಬೆಲೆ 15.05 ಲಕ್ಷ (ಎಕ್ಸ್ ಶೋ ರೂಂ). ಮಾರುತಿ ಸುಜುಕಿ 5-ಡೋರ್ 1.5-ಲೀಟರ್, 4-ಸಿಲಿಂಡರ್ K-ಸರಣಿಯ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 103 bhp ಪವರ್ ಮತ್ತು 134.2 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
Maruti Dussehra Offer If you buy a Maruti Suzuki Jimny car you will get Rs 50000, jimny on road price