ಉಚಿತ ಬಸ್‌ ಪ್ರಯಾಣ, ಗೃಹಲಕ್ಷ್ಮೀ ಯೋಜನೆ ಪುರುಷರಿಗೂ ವಿಸ್ತರಣೆ !

ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ (ladies Free Meals) , ಗೃಹಲಕ್ಷ್ಮೀ  ಯೋಜನೆ (Gruha Lakshmi Yoajana) ಯ ಮೂಲಕ ಪ್ರತೀ ತಿಂಗಳು 2000 ರೂಪಾಯಿ ಹಣವನ್ನು ಗೃಹಿಣಿಯರ ಬ್ಯಾಂಕ್‌ ಖಾತೆಗೆ (DBT)  ನೇರವಾಗಿ ಜಮೆ ಮಾಡುತ್ತಿದೆ.

ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆ, ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಮೂಲಕ ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ (ladies Free Meals) , ಗೃಹಲಕ್ಷ್ಮೀ  ಯೋಜನೆ (Gruha Lakshmi Yoajana) ಯ ಮೂಲಕ ಪ್ರತೀ ತಿಂಗಳು 2000 ರೂಪಾಯಿ ಹಣವನ್ನು ಗೃಹಿಣಿಯರ ಬ್ಯಾಂಕ್‌ ಖಾತೆಗೆ (DBT)  ನೇರವಾಗಿ ಜಮೆ ಮಾಡುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕರ್ನಾಟಕ ರಾಜ್ಯದಲ್ಲಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಮೂಲಕ ಕಳೆದ ನಾಲ್ಕು ತಿಂಗಳಿನಿಂದಲೂ ಮಹಿಳೆಯರು ಕರ್ನಾಟಕ ಸರಕಾರದ ನಾಲ್ಕು ನಿಗಮಗಳ ಸರಕಾರಿ ಸಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.

karnataka Gruha Lakshmi And Shakti Scheme Extend To Men Here Is New Updatelahakshmi Yojana extended to men too
Image Credit to Original Source

ಅಷ್ಟೇ ಅಲ್ಲದೇ ಸಪ್ಟೆಂಬರ್‌ ತಿಂಗಳಿನಿಂದ ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈಗಾಗಲೇ ಸಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳಿನಲ್ಲಿ ಗೃಹಿಣಿಯರ ಖಾತೆಗೆ ಎರಡು ತಿಂಗಳ ಹಣ ಈಗಾಗಲೇ ಜಮೆ ಆಗಿದೆ. ಇನ್ನೂ ಕೆಲವರಿಗೆ ಎರಡೂ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಆಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯಡಿ ಸಿಗಲಿದೆ 4000 ರೂ.: ಗೃಹಿಣಿಯರಿಗೆ ದಸರಾ ಕೊಡುಗೆ ಘೋಷಿಸಿದ ರಾಜ್ಯ ಸರಕಾರ

ದಸರಾ ದೀಪಾವಳಿಯ ಹೊತ್ತಲೇ ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯ ಗೃಹಿಣಿಯರಿಗೆ ಗುಡ್‌ನ್ಯೂಸ್‌ ಕೊಟ್ಟಿತ್ತು. ರಾಜ್ಯದಲ್ಲಿನ ಪ್ರತೀ ಮನೆಯ ಯಜಮಾನಿ ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ತಲುಪಿಸಬೇಕು ಅನ್ನೋದು ರಾಜ್ಯ ಸರಕಾರದ ಲೆಕ್ಕಾಚಾರ. ಆದರೆ ಮಹಿಳೆಯರ ಬೆನ್ನಲ್ಲೇ ಇದೀಗ ಪುರುಷರಿಗೂ ಈ ಯೋಜನೆ ಸಿಗುತ್ತಾ ಅನ್ನೋ ಚರ್ಚೆ ಶುರುವಾಗಿದೆ.

ರಾಜ್ಯದಲ್ಲಿ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮೀ ಯೋಜನೆಯನ್ನು ಪುರುಷರಿಗೂ ವಿಸ್ತರಣೆ ಮಾಡುವಂತೆ ಹೋರಾಟ ನಡೆಯುತ್ತಿದೆ. ಕನ್ನಡ ಚಳುವಳಿಗಾರ ವಾಟಾಳ್‌ ನಾಗರಾಜ್‌ ಅವರು ಟಿಕೆಟ್‌ ರಹಿತವಾಗಿ ಬಿಬಿಎಂಪಿ ಬಸ್‌ ಹತ್ತುವ ಮೂಲಕ ವಿನೂತನವಾಗಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಅಲ್ಲದೇ ಗೃಹಿಣಿಯರ ರೀತಿಯಲ್ಲೇ ಮನೆಯ ಯಜಮಾನನಿಗೂ ಯೋಜನೆ ವಿಸ್ತರಿಸುವಂತೆ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ : ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯ ಮೂಲಕ ಮನೆಯ ಯಜಮಾನಿಗೆ ಗೃಹಲಕ್ಷ್ಮೀ ಅಂತಾ ಹಣ ನೀಡುತ್ತಿದೆ. ಮನೆಯ ಯಜಮಾನಿಗೆ ಹಣ ನೀಡಿದ್ದು ಸಂತೋಷ. ಆದರೆ ಮನೆಯ ಯಜಮಾನನ ಪರಿಸ್ಥಿತಿ ಏನು ? ಇದರಿಂದಾಗಿ ಮನೆಯಲ್ಲಿ ಯಜಮಾನಿಯ ಮುಂದೆ ಯಜಮಾನ ತಲೆ ತಗ್ಗಿಸಬೇಕಾಗುತ್ತದೆ.

karnataka Gruha Lakshmi And Shakti Scheme Extend To Men Here Is New Updatelahakshmi Yojana extended to men too
Image Credit to Original Source

ಗಂಡಸರಿಗೆ ನೀವು ಅಪಮಾನ ಮಾಡುತ್ತಿದ್ದೀರಿ. ಗೃಹಿಣಿಯರಿಗೆ ಗೃಹಲಕ್ಷೀ ಯೋಜನೆ ಕೊಡಿ. ಆದರೆ ಅದರ ಜೊತೆಗೆ ಯಜಮಾನನಿಗೂ ಗೃಹಲಕ್ಷ್ಮೀ ಯೋಜನೆಯನ್ನು ವಿಸ್ತರಿಸಬೇಕು ಎಂದು ವಾಟಾಳ್‌ ನಾಗರಾಜ್‌ ಅವರು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಅಂತೆಯೇ ಪುರುಷರಿಗೂ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್‌ ಗ್ಯಾರಂಟಿ ಎಫೆಕ್ಟ್‌ : ಸಿದ್ದರಾಮಯ್ಯ ಕಾಲದಲ್ಲೇ ಅನುದಾನವಿಲ್ಲದೆ ಬಾಗಿಲು ಮುಚ್ಚುತ್ತಿದೆ ಇಂದಿರಾ ಕ್ಯಾಂಟೀನ್‌

ರಾಜ್ಯದಲ್ಲಿನ ಕಾಂಗ್ರೆಸ್‌ ಸರಕಾರ ಬಹುತೇಕ ಗ್ಯಾರಂಟಿ ಯೋಜನೆಯನ್ನು ಮಹಿಳೆಯರನ್ನು ಕೇಂದ್ರಿಕರಿಸಿ ನೀಡಿದೆ. ಆದರೆ ಗೃಹಲಕ್ಷ್ಮೀ ಯೋಜನೆ ಹಾಗೂ ಶಕ್ತಿ ಯೋಜನೆ ಪುರುಷರಿಗೂ ವಿಸ್ತರಣೆ ಮಾಡುವ ಕೂಗು ಕೇಳಿಬಂದಿದೆ. ಮುಂದಿನ ದಿನಗಳಲ್ಲಿ ಈ ಬೇಡಿಕೆಯ ಹೋರಾಟ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯಿದೆ.

karnataka Gruha Lakshmi And Shakti Scheme Extend To Men Here Is New Updatelahakshmi Yojana extended to men too !

Comments are closed.