ಭಾರತದ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ತನ್ನ ಮಿನಿ-ಎಸ್‌ಯುವಿಯ ಹೊಸ ಮಾದರಿ ಎಸ್-ಪ್ರೆಸ್ಸೊ ( SUV for less than 5 lakh 2022) ವನ್ನು ಬಿಡುಗಡೆ ಮಾಡಿದೆ. ಈ ಮಾದರಿಯನ್ನು ನೆಕ್ಸ್ಟ್ ಜನರೇಶನ್ ಕೆ-ಸೀರೀಸ್ 1.0 ಲೀಟರ್ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಐಡಲ್ ಸ್ಟಾರ್ಟ್ ಮತ್ತು ಸ್ಟಾಪ್ ತಂತ್ರಜ್ಞಾನವನ್ನೂ ಬಳಸಲಾಗಿದೆ. ಸಧ್ಯ ಲಭ್ಯವಿರುವ ಮಾಡೆಲ್‌ಗಿಂತ ಹೆಚ್ಚಿನ ಮೈಲೇಜ್ ಸಿಗಲಿದೆ ಎಂದು ಕಂಪನಿ ಹೇಳಿದೆ. ಈಗಿರುವ ಕಾರುಗಳು ಪ್ರತಿ ಲೀಟರ್‌ಗೆ 21.7 ಕಿ.ಮಿ. ಮೈಲೇಜ್ ನೀಡುತ್ತವೆ . ನ್ಯೂ ಎಸ್-ಪ್ರೆಸ್ಸೊದ Vxi (O) ಮತ್ತು Vxi+(O) ಆಟೊ ಗೇರ್ ಶಿಫ್ಟ್ (AGS) ರೂಪಾಂತರಗಳು ಪ್ರತಿ ಲೀಟರ್‌ಗೆ 25.30 ಕಿಮಿ ಮೈಲೇಜ್ ನೀಡುತ್ತದೆ. ಆದರೆ Vxi/Vxi+ MT ಮಾದರಿಯ ಕಾರು ಪ್ರತಿ ಲೀಟರ್‌ಗೆ 24.76 ಕಿ.ಮಿ ಮತ್ತು Std/Lxi MT ಮಾದರಿಯ ಕಾರು ಪ್ರತಿ ಲೀಟರ್‌ಗೆ 24.12 ಕಿಮಿ ನೀಡುತ್ತವೆ. ಇಷ್ಟೇ ಅಲ್ಲದೇ, ಹೊಸ ಮಾದರಿಯ ಎಲ್ಲಾ AGS ರೂಪಾಂತರಗಳು ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ESP ಜೊತೆಗ ಎಲೆಕ್ಟ್ರಿಕಲಿ ಅಡ್ಜೆಸ್ಟೇಬಲ್ ORVM ಗಳನ್ನು ಸಹ ಒಳಗೊಂಡಿದೆ.
ಸುರಕ್ಷತಾ ವೈಶಿಷ್ಟ್ಯಗಳು :
ಸುರಕ್ಷತೆಯ ದೃಷ್ಟಿಯಿಂದ, 2022 ಎಸ್-ಪ್ರೆಸ್ಸೊ ಎರಡು ಏರ್‌ಬ್ಯಾಗ್‌ಗಳು, ಬ್ರೆಕ್‌ಫೋರ್ಸ್ ಕಾರಿನ ಎಲ್ಲಾ ವ್ಹೀಲ್‌ಗಳಿಗೆ ಅನ್ವಯವಾಗುವ EBD ತಂತ್ರಜ್ಞಾನದೊಂದಿಗೆ ಆಂಟಿ–ಲಾಕ್ ಬ್ರೆಕ್ ಸಿಸ್ಟಮ್ (ABS), ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್‌ನೊಂದಿಗೆ ಪ್ರಿ-ಟೆನ್ಷನ್ ಮತ್ತು ಫೋರ್ಸ್ ಲಿಮಿಟರ್ ಫ್ರಂಟ್ ಸೀಟ್ ಬೆಲ್ಟ್‌ಗಳು, ಹೈ-ಸ್ಪೀಡ್ ಅಲರ್ಟ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ಎಸ್–ಪ್ರೆಸ್ಸೋದಲ್ಲಿ ನೀಡಲಾಗಿದೆ. ಈ ಕಾರನ್ನು ಅನೇಕ ಬಹು-ಬಣ್ಣದ ಆಯ್ಕೆಗಳಲ್ಲಿ ಖರೀದಿಬಹುದಾಗಿದೆ.
ಶಕ್ತಿಶಾಲಿ ಇಂಜಿನ್ ಮತ್ತು ಕಮ್ಫರ್ಟ್ ಡಿಸೈನ್ :
ನೆಕ್ಸ್ಟ್ ಜನರೇಷನ್ ಕಾರಾದ ಎಸ್–ಪ್ರೆಸ್ಸೊ K-ಸರಣಿಯ 1.0 ಲೀ ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್ ನಿಂದ ನಿರ್ಮಿತವಾಗಿದೆ. ಈ ಎಂಜಿನ್‌ಗಳು 49kW@5500rpm ನ ಶಕ್ತಿಯನ್ನು ಮತ್ತು 89Nm@3500rpm ನಂತಹ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಎಲ್ಲಾ ಹೊಸ ಎಸ್-ಪ್ರೆಸ್ಸೊ ಚಲಾಯಿಸುವಾಗ ಚೈತನ್ಯ ಮತ್ತು ಶಕ್ತಿಯನ್ನು ನೀಡುತ್ತದೆ. ಇದು ಭಾರತದ ಬಜೆಟ್ ಕಾರ್ ಆಗಿದೆ. ಬೋಲ್ಡ್ ಎಸ್‌ಯುವಿ ತರಹದ ಕಮಾಂಡಿಂಗ್ ಡ್ರೈವ್ ವ್ಯೂ, ಡೈನಾಮಿಕ್ ಸೆಂಟರ್ ಕನ್ಸೋಲ್, ಹೆಚ್ಚಿನ ಕ್ಯಾಬಿನ್ ಸ್ಥಳ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಇರುವ ಹೊರಭಾಗವನ್ನು ಹೊಂದಿದೆ. ಈ ಕಾರನ್ನು ಚಾಲನೆ ಮಾಡುವಾಗ ಹೆಚ್ಚು ಆರಾಮದಾಯಕವಾಗಿರುತ್ತದೆ ಎನ್ನಲಾಗಿದೆ.
ಮಾರುತಿ ಸುಜುಕಿ ಎಸ್–ಪ್ರೆಸ್ಸೊದ ವೇರಿಯಂಟ್ ಮತ್ತು ಅವುಗಳ ಬೆಲೆ :
ನ್ಯೂ ಎಸ್–ಪ್ರೆಸ್ಸೊ ವೇರಿಯಂಟ್ಗಳು | ಬೆಲೆ (ಎಕ್ಸ್–ಶೋ ರೂಂ) |
Std. MT | 4.25 ಲಕ್ಷ |
Lxi MT | 4.95 ಲಕ್ಷ |
Vxi MT | 5.15 ಲಕ್ಷ |
Vxi+ MT | 5.49 ಲಕ್ಷ |
Vxi (O) AGS | 5.65 ಲಕ್ಷ |
Vxi+ (O) AGS | 5.99 ಲಕ್ಷ |
ಇದನ್ನೂ ಓದಿ : Presidential Election 2022 : ರಾಷ್ಟ್ರಪತಿ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಬಳಕೆ ಮಾಡುವುದಿಲ್ಲ ಏಕೆ ಗೊತ್ತಾ?
ಇದನ್ನೂ ಓದಿ : Ola Electric Sportscar : ಭಾರತದಲ್ಲೂ ಪ್ರಾರಂಭವಾಗಲಿರುವ ಓಲಾ ಎಲೆಕ್ಟ್ರಿಕಲ್ ಸ್ಪೋರ್ಟ್ಸ್ ಕಾರ್!
(Maruti Suzuki launches new s-presso affordable SUV for less than 5 lakh)