ಟಾಟಾಗೆ ಠಕ್ಕರ್‌ ಕೊಟ್ಟ ಮಾರುತಿ ಇವಿ : ಒಂದೇ ಚಾರ್ಜ್‌ಗೆ 270 KM ಮೈಲೇಜ್, ಅಗ್ಗದ ಕಾರು ಮಾರುಕಟ್ಟೆಗೆ

ಟಾಟಾ ಮಾತ್ರವಲ್ಲದೇ ಎಂಜಿ ಕಾಮೆಟ್‌ ಇವಿ (MG Comet EV) ಕಾರುಗಳು ಇವಿ ಕಾರುಗಳ ಲೋಕದಲ್ಲಿ ರಾಜನಂತೆ ಮೆರೆಯುತ್ತಿವೆ. ಇವಿ ಮಾರುಕಟ್ಟೆಯನ್ನು ಆಕ್ರಮಿಸುವ ಸಲುವಾಗಿಯೇ ಮಾರುತಿ ಸುಜುಕಿ ಇದಗ ಮೈಕ್ರೋ ಎಲೆಕ್ಟ್ರಿಕ್‌ ಕಾರುಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಭಾರತೀಯ ಆಟೋಮೊಬೈಲ್‌ ಕ್ಷೇತ್ರದಲ್ಲಿ ಮಾರುತಿ ಸುಜುಕಿ ಇದೀಗ ಕ್ರಾಂತಿಯನ್ನೇ ಮಾಡಿದೆ. ಎಲೆಕ್ಟ್ರಿಕ್ ಕಾರುಗಳ (EV) ಜಗತ್ತನ್ನು ಆಳುತ್ತಿರುವ ಟಾಟಾ ಮೋಟಾರ್ಸ್‌ಗೆ ಭರ್ಜರಿ ಟಕ್ಕರ್ ನೀಡಲು ಮಾರುತಿ ಸುಜುಕಿ ಮಾಸ್ಟರ್ ಪ್ಲಾನ್ ಮಾಡಿದೆ. ಮಧ್ಯಮ ವರ್ಗದವರನ್ನೇ ಗುರಿಯನ್ನಾಗಿಸಿಕೊಂಡು ಅತ್ಯಂತ ಅಗ್ಗದ ಬಜೆಟ್‌ನಲ್ಲಿ ಹೊಸ ಎಲೆಕ್ಟ್ರಿಕ್‌ ಕಾರನ್ನು ಬಿಡುಗಡೆ ಮಾಡಲು ಕಂಪೆನಿ ಮುಂದಗಿದೆ.

ಭಾರತೀಯ ಇವಿ ಕಾರು ಮಾರುಕಟ್ಟೆಯಲ್ಲಿ ಸದ್ಯ ಟಾಟಾ ಕಂಪೆನಿಯ ಕಾರುಗಳು ಗ್ರಾಹಕರನ್ನು ಸೆಳೆದಿವೆ. ಅದ್ರಲ್ಲೂ ಅಗ್ಗದ ಕಾರುಗಳಿಂದ ಹಿಡಿದು ದುಬಾರಿ ಇವಿ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿರುವ ಟಾಟಾಗೆ ಇದೀಗ ಮಾರುತಿ ಸುಜುಕಿ ಭರ್ಜರಿ ಪೈಪೋಟಿ ನೀಡುತ್ತಿದೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ತನ್ನ ಮೊದಲ ಪ್ರೀಮಿಯಂ ಇವಿ ಎಸ್‌ಯುವಿ ‘ಇ-ವಿಟಾರಾ’ (e-Vitara) ಕಾರನ್ನು ಮಾರುಕಟ್ಟೆಗೆ ಪರಿಚಯಸಿದ್ದ ಮಾರುತಿ ಸುಜುಕಿ ಇದೀಗ ಸಾಮಾಣ್ಯ ಜನರಿಗಾಗಿಯೇ ಅತ್ಯಂತ ಸಣ್ಣ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಜಪಾನ್‌ ಮೊಬಿಲಿಟಿ ಶೋನಲ್ಲಿ ಮಾರುತಿ ಸುಜುಕಿ ತನ್ನ ಬಹುನಿರೀಕ್ಷಿತ ‘ವಿಷನ್ ಇ-ಸ್ಕೈ’ (Vision e-Sky) ಕಾನ್ಸೆಪ್ಟ್ ಕಾರು ಪರಿಚಯಿಸಿದೆ.

ಟಾಟಾ ಟಿಯಾಗೊ ಇವಿಗೆ ಟಕ್ಕರ್‌ ಕೊಡುತ್ತಾ ಮಾರುತಿ ಇವಿ ವಿಷನ್ ಇ-ಸ್ಕೈ’

ಸದ್ಯದ ಪರಿಸ್ಥಿತಿಯಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಇವಿ ಕಾರುಗಳನ್ನು ಖರೀದಿಸುವುದು ಕಷ್ಟ ಸಾಧ್ಯ. ಇದನ್ನೇ ಗಮನದಲ್ಲಿಟ್ಟುಕೊಂಡು ಟಾಟಾ ಕಂಪೆನಿ ಟಿಯಾಗೋ ಕಾರನ್ನು ಇವಿ ಆವೃತ್ತಿಯಲ್ಲಿ ಬಿಡುಗಡೆ ಮಾಡಿತ್ತು. ಟಾಟಾ ಟಿಯಾಗೋ ಹಾಗೂ ಟಾಟಾ ಪಂಚ್‌ ಕಾರುಗಳು ಸದ್ಯ ಭಾರತ ಇವಿ ಮಾರುಕಟ್ಟೆಯನ್ನೇ ಆಳುತ್ತವೆ.

ಟಾಟಾ ಮಾತ್ರವಲ್ಲದೇ ಎಂಜಿ ಕಾಮೆಟ್‌ ಇವಿ (MG Comet EV) ಕಾರುಗಳು ಇವಿ ಕಾರುಗಳ ಲೋಕದಲ್ಲಿ ರಾಜನಂತೆ ಮೆರೆಯುತ್ತಿವೆ. ಇವಿ ಮಾರುಕಟ್ಟೆಯನ್ನು ಆಕ್ರಮಿಸುವ ಸಲುವಾಗಿಯೇ ಮಾರುತಿ ಸುಜುಕಿ ಇದಗ ಮೈಕ್ರೋ ಎಲೆಕ್ಟ್ರಿಕ್‌ ಕಾರುಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಮಾರುತಿ ವಿಷನ್ ಇ-ಸ್ಕೈ ಇವಿ ಕಾರು : ಏನಿದರ ವೈಶಿಷ್ಟ್ಯ ?

ನೋಡುವುದಕ್ಕೆ ಗಾತ್ರದಲ್ಲಿ ಮಾರುತಿ ಪರಿಚಯಸುತ್ತಿರುವ ಇವಿ ಕಾರು ಅತ್ಯಂತ ಸಣ್ಣದಾಗಿದ್ದರೂ ಕೂಡ, ಫೀಚರ್ಸ್‌ ವಿಚಾರದಲ್ಲಿ ಮಾತ್ರ ಯಾವುದೇ ರಾಜಿ ಮಾಡಿಕೊಂಡಿ್ಲ. ಕಾರಿನಲ್ಲಿ ಅತ್ಯಾಧುಿಕ ಫೂಚರಿಕ್‌ ಡಿಸೈನ್‌, ಡಿಜಿಟಲ್‌ ಕಾಕ್‌ಪಿಟ್‌ ಇನ್ಪೋಟೈನ್ಮೆಂಟ್‌ ಸಿಸ್ಟಮ್ಸ್‌ ಜೊತೆಗೆ ಪ್ರೀಮಿಯಂ ಇಂಟಿರಿಯರ್ ಒಳಗೊಂಡಿದೆ. ಯೂನಿಕ್‌, ಸ್ಮಾರ್ಟ್‌ ಹಾಗೂ ಪಾಸಿಟಿವ್‌ ಥೀಮ್‌ಗಳಲ್ಲಿ ಮಾರುತಿ ಕಂಪೆನಿ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಕೇವಲ ಲುಕ್‌ ಮಾತ್ರವಲ್ಲದೇ ಸುರಕ್ಷತೆಗೆ ಕೂಡ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದ್ದು, ಎಬಿಎಸ್‌ ತಂತ್ರಜ್ಞಾನದ ಜೊತೆಗೆ ಏರ್‌ಬ್ಯಾಗ್‌ ವ್ಯವಸ್ಥೆಯನ್ನೂ ನೀಡಲಾಗಿದೆ.

ಒಂದೇ ಚಾರ್ಜ್‌ 270 ಕಿಲೋ ಮೀಟರ್‌ ಮೈಲೇಜ್‌..!

ಮಾರುತಿ ಸುಜುಕಿ ಪರಿಚಯಿಸಲು ಹೊರಟಿರುವ ಈ ಸಣ್ಣ ಕಾರಿನಲ್ಲಿ ಅಧಿಕ ಸಾಮರ್ಥ್ಯದ ಬ್ಯಾಟರಿಯನ್ನು ಪರಿಚಯಿಸಲಾಗಿದೆ. ಹೀಗಾಗಿ ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 270 ಕಿಲೋ ಮೀಟರ್‌ ಮೈಲೇಜ್‌ ನೀಡುತ್ತಿದೆ. ನಿತ್ಯವೂ ಕಚೇರಿ, ಶಾಪಿಂಗ್‌, ವಿಕೆಂಡ್‌ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ಇನ್ನು ಕಾರಿನಲ್ಲಿ ಅತ್ಯಾಧುನಿಕ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ನೀಡಲಾಗಿದ್ದಯ, ಪೆಟ್ರೋಲ್‌, ಡಿಸೇಲ್‌ ದರ ಏರಿಕೆಯಿಂದ ಕಂಗೆಟ್ಟವರಿಗೆ ಈ ಕಾರು ವರದಾನವಾಗಲಿದೆ.

ಭಾರತಕ್ಕೆ ಯಾವಾಗ ಬರಲಿದೆ ? ಬೆಲೆ ಎಷ್ಟು ?

ಸದ್ಯದ ವರದಿಗಳ ಪ್ರಕಾರ, ಸುಜುಕಿ ವಿಷನ್ ಇ-ಸ್ಕೈ ಆಧಾರಿತ ಈ ಎಲೆಕ್ಟ್ರಿಕ್ ಕಾರಿನ ಉತ್ಪಾದನೆ ಸದ್ಯ ಜಾಗತಿಕವಾಗಿ ಆರಂಭವಾಗಲಿದೆ. ಆರಂಭದಲ್ಲಿ ಜಪಾನ್‌ ಮತ್ತು ಯುರೋಪ್‌ ಮಾರುಕಟ್ಟೆಯಲ್ಲಿ ಬಿಡುಗಡೆ ಆದ ನಂತರದಲ್ಲಿ ಕಾರು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಭಾರತದಲ್ಲಿ ಸದ್ಯ ಅತ್ಯಂತ ಅಗ್ಗದ ಇವಿ ಕಾರು ಇದಾಗಲಿದ್ದು, ಸ್ಥಳೀಯವಾಗಿರುವ ಬ್ಯಾಟರಿ, ಬಿಡಿಭಾಗಗಳನ್ನು ತಯಾರಿಸುವುದರಿಂದ ಬೆಲೆ ಸುಮಾರು 7 ರಿಂದ 9 ಲಕ್ಷ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಈ ಕಾರು ಮಾರುತಿ ಸುಜುಕಿಯ ವ್ಯಾಗನ್ಆರ್ ಇವಿ (WagonR EV) ಹೆಸರಿನಲ್ಲಿ ಬರುವ ಸಾಧ್ಯತೆಯಿದ್ದು, ಮಾರುತಿ ಇವಿ ಲೋಕಕ್ಕೆ ಎಂಟ್ರಿ ಕೊಟ್ಟಿರುವುದು ಟಾಟಾ ಪಾಳದಲ್ಲಿ ತಲ್ಲಣ ಮೂಡಿಸಿದೆ. ಅತ್ಯಂತ ಕಡಿಮೆ ಬೆಲೆ, ಅತ್ಯಾಧುನಿಕ ಸೌಲಭ್ಯ ನೀಡಿದ್ರೆ ಮಾತ್ರ ಮಾರುತಿ ಇವಿ ಸಕ್ಸಸ್‌ ಕಾಣಲಿದೆ. ಇಲ್ಲದೇ ಹೋದ್ರೆ ಟಾಟಾ ಇವಿ ಲೋಕವನ್ನು ಆಳೋದ್ರಲ್ಲಿ ಡೌಟೇ ಇಲ್ಲ.

maruti suzuki vision e sky ev launch tata tiago rival

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »