ಹಬ್ಬದ ಸೀಸನ್ ಇರುವುದರಿಂದ, ವಾಹನ ತಯಾರಕರು ವಿಶೇಷ ಆವೃತ್ತಿಗಳನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಇದಕ್ಕೆ ರೆನಾಲ್ಟ್ (Renault) ಸಹ ಕಿಗರ್ (Kiger), ಟ್ರೈಬರ್(Triber) ಮತ್ತು ಕ್ವಿಡ್ (Kiwd) ಗಳ ಸೀಮಿತ ಆವೃತ್ತಿಗಳನ್ನು ಬಿಡುಗಡೆಮಾಡಿದೆ. ಫ್ರೆಂಚ್ ಆಟೊಮೊಬೈಲ್ ಕಂಪನಿ ರೆನಾಲ್ಟ್ ಕಾರುಗಳಿಗೆ ಹೊರನೋಟಗಳನ್ನು ಮಾತ್ರ ಸ್ವಲ್ಪ ಬದಲಾವಣೆ ಮಾಡಿದೆ. ಸೀಮಿತ ಆವೃತ್ತಿಯ ಕಾರುಗಳ ಬುಕಿಂಗ್ ಸೆಪ್ಟೆಂಬರ್ 2 ರಂದು ಪ್ರಾರಂಭವಾಗಿದೆ.
ಫೆಸ್ಟಿವ್ ಲಿಮಿಟೆಡ್ ಎಡಿಷನ್ (ಹಬ್ಬದ ಸೀಮಿತ ಆವೃತ್ತಿ) ಗೆ ಮೂರು ಕಾರುಗಳಿಗೆ ಹೊಸದಾಗಿ ಹೊರವಿನ್ಯಾಸವನ್ನು ನೀಡಿದೆ. ಹೊರಭಾಗವು ಹೊಸ ಡ್ಯುಯಲ್-ಟೋನ್ ಬಣ್ಣದಿಂದ ನಿರೂಪಿಸಿದೆ. ಕಾರಿನ ದೇಹವು ಬಿಳಿ ಮತ್ತು ಮೇಲ್ಛಾವಣಿಯು ಕಪ್ಪು ಬಣ್ಣದಲ್ಲಿದೆ. ಕಾರುಗಳು ಮುಂಭಾಗದ ಗ್ರಿಲ್, ಹೆಡ್‌ಲ್ಯಾಂಪ್/ಡಿಆರ್‌ಎಲ್ ಸರೌಂಡ್ ಮತ್ತು ಸೈಡ್ ಡೋರ್ ಡಿಕಾಲ್‌ಗಳಲ್ಲಿ ಕೆಂಪು ಪಟ್ಟಿಯನ್ನು ಪಡೆದುಕೊಂಡಿದೆ. ರೆನಾಲ್ಟ್ ಕಿಗರ್ ಫೆಸ್ಟಿವ್ ಲಿಮಿಟೆಡ್ ಆವೃತ್ತಿಯು ಸಿಲ್ವರ್ ಮತ್ತು ಕೆಂಪು ಬ್ರೇಕ್ ಕ್ಯಾಲಿಪರ್‌ಗಳಲ್ಲಿ ಮಿಶ್ರಲೋಹಗಳನ್ನು ಅಳವಡಿಸಲಾಗಿದೆ. ಆದರೆ ಟ್ರೈಬರ್ ಫೆಸ್ಟಿವ್ ಲಿಮಿಟೆಡ್ ಆವೃತ್ತಿಯು ಪಿಯಾನೋ ಕಪ್ಪು ಚಕ್ರ ಕವರ್‌ಗಳು ಮತ್ತು ಡೋರ್ ಹ್ಯಾಂಡಲ್‌ಗಳನ್ನು ಪಡೆದುಕೊಂಡಿದೆ. ಕ್ವಿಡ್ ಲಿಮಿಟೆಡ್ ಆವೃತ್ತಿಯು ಪಿಯಾನೋ ಬ್ಲ್ಯಾಕ್ ವೀಲ್ ಕವರ್‌ಗಳು ಮತ್ತು ORVM ಗಳನ್ನು ಪಡೆದುಕೊಂಡಿದೆ.
ರೆನಾಲ್ಟ್ ಕಿಗರ್, ಟ್ರೈಬರ್ ಮತ್ತು ಕ್ವಿಡ್‌ನ ಫೆಸ್ಟಿವ್ ಲಿಮಿಟೆಡ್ ಆವೃತ್ತಿಗಳು ಯಾಂತ್ರಿಕವಾಗಿ (Mechanically) ಬದಲಾಗಿಲ್ಲ. ಇದರರ್ಥ ಸೀಮಿತ ಆವೃತ್ತಿಯ ರೆನಾಲ್ಟ್ ಕಿಗರ್ 1.0 ಲೀಟರ್ ಪೆಟ್ರೋಲ್ ಮೋಟರ್ 72bhp ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಂಯೋಜಿಸುತ್ತದೆ. 100bhp ಜೊತೆಗೆ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಹೊಂದಿದೆ.
ರೆನಾಲ್ಟ್ ಟ್ರೈಬರ್ ನ ಲಿಮಿಟೆಡ್ ಆವೃತ್ತಿಯು 1.0-ಲೀಟರ್ NA ಪೆಟ್ರೋಲ್ ಮೋಟಾರ್ 72bhp ಜೊತೆಗೆ 5MT ಅಥವಾ ಸ್ವಯಂಚಾಲಿತ ಪ್ರಸರಣ ಹೊಂದಿದೆ. ರೆನಾಲ್ಟ್ ಕ್ವಿಡ್ ಲಿಮಿಟೆಡ್ ಆವೃತ್ತಿಯನ್ನು 1.0-ಲೀಟರ್ ಪೆಟ್ರೋಲ್ ಮೋಟಾರ್‌ನೊಂದಿಗೆ 68bhp ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಸಂಯೋಜಿಸಲಾಗಿದೆ.
ರೆನಾಲ್ಟ್ ಕಿಗರ್, ಟ್ರೈಬರ್ ಮತ್ತು ಕ್ವಿಡ್‌ನ ಟಾಪ್-ಟ್ರಿಮ್‌ಗಳನ್ನು ಮಾತ್ರ ಫೆಸ್ಟಿವ್ ಲಿಮಿಟೆಡ್ ಆವೃತ್ತಿಯೊಂದಿಗೆ ನೀಡಲಾಗುತ್ತಿದೆ. ರೆನಾಲ್ಟ್ ಫೆಸ್ಟಿವ್ ಲಿಮಿಟೆಡ್ ಆವೃತ್ತಿಯ ಮಾದರಿಯ ಕಾರುಗಳನ್ನು ಆಯಾ ಟಾಪ್-ಟ್ರಿಮ್‌ಗಳ ಬೆಲೆಯಲ್ಲಿಯೇ ಮಾರಾಟ ಮಾಡಲಿದೆ.
1.0-ಲೀಟರ್ ಮ್ಯಾನ್ಯುವಲ್ ಗೇರ್ ಹೊಂದಿರು ರೆನಾಲ್ಟ್ ಕಿಗರ್ RXZ ನ ಎಕ್ಸ್ ಶೋ ರೂಂ ಬೆಲೆಯು 8.39 ಲಕ್ಷ ರೂ. ಗಳು. 1.0-ಲೀಟರ್ ಟರ್ಬೊ CVT ರೆನಾಲ್ಟ್ RXZ ನ ಎಕ್ಸ್ ಶೋ ರೂಂ ಬಲೆಯು 10.39 ಲಕ್ಷ ರೂ.ಗಳಾಗಿದೆ.
ರೆನಾಲ್ಟ್ ಟ್ರೈಬರ್ RXZ ಕಾರಿನ ಎಕ್ಸ್ ಶೋ ರೂಂ ಬೆಲೆಯು 7.78 ಲಕ್ಷ ರೂ.ಗಳು. ರೆನಾಲ್ಟ್ ಟ್ರೈಬರ್ RXZ ಆಟೋಮ್ಯಾಟಿಕ್ ಬೆಲೆಯು 8.30 ಲಕ್ಷ ರೂ.ಗಳಾಗಿದೆ.
ರೆನಾಲ್ಟ್ ಕ್ವಿಡ್‌ನ ಕ್ಲೈಂಬರ್ ಕಾರಿನ ಎಕ್ಸ್ ಶೋ ರೂಂ ಬೆಲೆಯು 5.54 ಲಕ್ಷ ರೂ.ಗಳಿಂದ ಕ್ಲೈಂಬರ್‌ನ ಆಟೋಮ್ಯಾಟಿಕ್ ಕಾರಿನ ಎಕ್ಸ್ ಶೋ ರೂಂ ಬೆಲೆಯು 5.99 ಲಕ್ಷ ರೂ.ಗಳವರೆಗೆ ಇರಲಿದೆ.
ಇದನ್ನೂ ಓದಿ : Tata Blackbird : ಟಾಟಾ ಬ್ಲ್ಯಾಕ್‌ಬರ್ಡ್ : ಹುಂಡೈನ ಕ್ರೆಟಾ ಮತ್ತು ಕಿಯಾನ ಸೆಲ್ಟೊಸ್‌ಗೆ ಠಕ್ಕರ್ ಕೊಡಲಿದೆಯೇ
(Renault festive edition limited cars and kiger, triber and kiwd prices)