IT companies warning to Karnataka : ಒಂದು ಮಳೆಗೆ 255 ಕೋಟಿ ನಷ್ಟ: ಸಿಲಿಕಾನ್ ಸಿಟಿಯಿಂದ ವಾಕ್ ಔಟ್ ಎಚ್ಚರಿಕೆ ಕೊಟ್ಟ ಐಟಿ ಕಂಪನಿಗಳು

ಬೆಂಗಳೂರು (IT companies warning to Karnataka ) : ಸ್ಟಾರ್ಟಪ್ ಸಂಸ್ಥೆಗಳ ಸ್ವರ್ಗ ಅಂತನೇ ಕರೆಯಿಸಿಕೊಳ್ಳುವ ಸಿಲಿಕಾನ್ ಸಿಟಿ ಐಟಿ ಬಿಟಿ ನಗರೀ ಅಂತಾನೇ ಪ್ರಸಿದ್ಧಿ ಕೂಡ ಪಡೆದುಕೊಂಡಿದೆ. ಆದರೆ ಈಗ ಮೂಲಭೂತ ಸೌಲಭ್ಯಗಳಾದ ಸರಿಯಾದ ಸಂಪರ್ಕ ರಸ್ತೆ ಹಾಗೂ ಗುಂಡಿ ಮುಕ್ತ ರಸ್ತೆ ಒದಗಿಸಲು ವಿಫಲವಾಗಿರೋ ರಾಜ್ಯ ಸರ್ಕಾರದ ವಿರುದ್ಧ ಐಟಿ ಕಂಪನಿಗಳು ಸಮರ ಸಾರಿದ್ದು, ಬ್ರ್ಯಾಂಡ್ ಬೆಂಗಳೂರು ಬರ್ಬಾದ್‌ ಆಗಲಿದ್ಯಾ ಅನ್ನೋ ಆತಂಕ‌ ಎದುರಾಗಿದೆ.

ಒಂದು ಮಳೆ ಬಂದರೇ ಸಿಲಿಕಾನ್ ಸಿಟಿ ಬೆಂಗಳೂರು ಅಕ್ಷರಷಃ ಮುಳುಗುತ್ತದೆ. ಅಂತಹದೊಂದು ಅವಾಂತರವನ್ನು ನಗರದ ಅಧಿಕಾರಿಗಳು , ಜನಪ್ರತಿನಿಧಿಗಳು ಸೃಷ್ಟಿಸಿದ್ದಾರೆ. ಮುಂದಾಲೋಚನೆ ಇಲ್ಲದ ಪ್ಲ್ಯಾನಿಂಗ್ ಹಾಗೂ ಲಂಚಗುಳಿತನದಿಂದ ನಗರದಲ್ಲಿ ರಸ್ತೆ,ಒಳಚರಂಡಿ ಯಾವುದು ಸುಸ್ಥಿತಿಯಲ್ಲಿಲ್ಲ‌. ಪರಿಣಾಮವಾಗಿ ಮಳೆ ಬಂದ್ರೇ ಜನರಿಗೆ ರಸ್ತೆಯಲ್ಲೇ ನರಕ ದರ್ಶನವಾಗುತ್ತದೆ. ಇದೆಲ್ಲದರಿಂದ ಬೇಸತ್ತ ನಗರದ ಐಟಿ ಕಂಪನಿಗಳು ವಲಸೆ ಎಚ್ಚರಿಕೆ ನೀಡಿವೆ. ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ, ORRCA (ಹೊರವರ್ತುಲ ರಸ್ತೆಗಳ ಕಂಪನಿ) ಅಧ್ಯಕ್ಷತೆಯಲ್ಲಿ ನಿರ್ಣಯಕೈಗೊಂಡು ಸಂಘದ ವತಿಯಿಂದ ಸಿಎಂಗೆ ಪತ್ರ ಬರೆಯಲಾಗಿದೆ.

ಆಗಸ್ಟ್ 30 ರಂದು ಸುರಿದ ಮಳೆಗೆ 255 ಕೋಟಿ ರೂ ನಷ್ಟವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಐದು ಗಂಟೆ ಹೊರವರ್ತುಲದ ರಸ್ತೆಯಲ್ಲಿ ಟೆಕ್ಕಿಗಳು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ರು.ಮಳೆಯ ಪರಿಣಾಮ ಐಟಿ ಕಂಪನಿಗಳ ಒಳಭಾಗದಲ್ಲಿ ನೀರು ಬಂದಿತ್ತು.ಇವೆಲ್ಲದ್ರ ಪರಿಣಾಮ 255 ಕೋಟಿ ರೂ ನಷ್ಟವಾಗಿದೆ ನಮಗೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

32% ನಷ್ಟು ಬೆಂಗಳೂರಿನ ಆದಾಯದ ತೆರಿಗೆ ಈ ಭಾಗದ ಐಟಿ ಕಂಪನಿಗಳು ಪಾವತಿ ಮಾಡುತ್ತಿದೆ.ಕೇಂದ್ರೀಯ ರೇಷ್ಮೆ ಮಂಡಳಿಯಿಂದ KR ಪುರಂವರೆಗೆ 17 ಕಿಮಿ ಅಂತರದಲ್ಲಿ ಅನೇಕ ಐಟಿ ಕಂಪನಿಗಳು ಇದೆ‌.ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ.ಆದ್ರೇ ಈ ಹೊರವರ್ತುಲ ರಸ್ತೆಯ ಕಳಪೆ ನಿರ್ವಹಣೆ ಮೂಲಭೂತ ಸೌಕರ್ಯದ ಕೊರತೆ ಮಳೆ ಬಂದಾಗ ಆಗುವ ಅವಾಂತರದಿಂದ ಕಂಪನಿಗಳಿಗೆ ತೀರಾ ನಷ್ಟವಾಗಿದೆ ಎಂದು ಮೋಹನದಾಸ್ ಪೈ ಆಕ್ರೋಶ ಹೊರಹಾಕಿದ್ದಾರೆ.

2019ರಲ್ಲಿ ರಾಜ್ಯದ ಸಿಎಂ ಭೇಟಿ ಆದಾಗ ಹೊರವರ್ತುಲ ಅಭಿವೃದ್ಧಿ ಬಗ್ಗೆ ಭರವಸೆ ಕೊಟ್ಟಿದ್ರು.ಆದ್ರೇ ಇದುವರೆಗೆ ಅದು ಈಡೇರಿಲ್ಲ.ಐಟಿ ಕಾರಿಡಾರ್ ನಲ್ಲಿ ಯಾವ ಮೂಲಭೂತ ಸೌಕರ್ಯಗಳ ಕೊಡಲಾಯಿತು ಎನ್ನೋದ್ರ ಬಗ್ಗೆ ವಿವರ ಕೊಡಿ ಎಂದು ಪೈ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಸಂಚಾರ ದಟ್ಟಣೆ ನಿರ್ವಹಣೆಗೆ ತೆಗೆದುಕೊಂಡ ಕ್ರಮ ಯಾವುದು? ದೀರ್ಘಕಾಲಿಕ, ತಾತ್ಕಾಲಿಕವಾಗಿ ಯಾವ ರೀತಿಯ ಕ್ರಮಗಳು ಆಗಿದೆ? ಹೇಳಿ ಎಂದು ಪ್ರಶ್ನೆ ಮಾಡಿದ್ದು, ಇದೇ ಸ್ಥಿತಿ ಮುಂದುವರೆದರೇ ಐಟಿ ಕಂಪನಿಗಳು ಅನಿವಾರ್ಯ ವಾಗಿ ಬೇರೆ ಕಡೆ ವಲಸೆ ಹೋಗಬೇಕಾಗುತ್ತೆ. ಹೂಡಿಕೆ ವಾಪಾಸು ತೆಗೆದುಕೊಳ್ಳಬೇಕಾಗುತ್ತೆ ಅಂತಾ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : Modi feeling pride of INS Vikrant: ಭಾರತದ ಪಾಲಿಗೆ ಐತಿಹಾಸಿಕ ದಿನ – ಪ್ರಧಾನಿ ಮೋದಿ

ಇದನ್ನೂ ಓದಿ : Teen Serial Killer- ‘KGF’ ರಾಕಿ ಭಾಯ್ ಆಗಲು ಸರಣಿ ಕೊಲೆ

IT companies warning to Karnataka CM Basavaraj Bommai walk out of Silicon City Bengaluru for 255 crore loss for one rain

Comments are closed.