A real star has a different birthday: ರಿಯಲ್ ಸ್ಟಾರ್ ವಿಭಿನ್ನ ಬರ್ತಡೇ: ಅಭಿಮಾನಿಗಳಿಂದ ಸುಂದರ ಬರಹ ಆಹ್ವಾನಿಸಿದ ಉಪೇಂದ್ರ

ಬೆಂಗಳೂರು: ಸಪ್ಟೆಂಬರ್ ತಿಂಗಳು (Sandalwood) ಸ್ಯಾಂಡಲ್ ವುಡ್ ನ ಸಿನಿ ಪ್ರಿಯರಿಗೆ ಹಬ್ಬವಿದ್ದಂತೆ. ಯಾಕೆಂದರೇ ಸಪ್ಟೆಂಬರ್ ನಲ್ಲಿ ಸಾಲು ಸಾಲು ನಟ-ನಟಿಯರ ಹುಟ್ಟುಹಬ್ಬವಿದೆ. ಸುದೀಪ್ ಬರ್ತಡೇ ಬೆನ್ನಲ್ಲೇ ರಿಯಲ್ ಸ್ಟಾರ್ ಉಪ್ಪಿ ಹುಟ್ಟುಹಬ್ಬ ಕೂಡ ಸಮೀಪಿಸಿದೆ. ಸಿನಿಮಾದ ಜೊತೆ ನಿಜ ಬದುಕಿನಲ್ಲೂ ವಿಭಿನ್ನವಾಗಿ ಯೋಚಿಸೋ ನಟ ಹಾಗೂ ನಿರ್ದೇಶಕ (Upendra) ಉಪೇಂದ್ರ (A real star has a different birthday) ಈಗ ತಮ್ಮ ಬರ್ತಡೇ ವೇಳೆ ಅಭಿಮಾನಿಗಳಿಗೆ ವಿಭಿನ್ನವಾದ ಟಾಸ್ಕ್ ವೊಂದನ್ನು ನೀಡಿದ್ದಾರೆ.

(A real star has a different birthday)ಸಪ್ಟೆಂಬರ್ 18 ರಂದು ಕನ್ನಡದ ರಿಯಲ್ ಸ್ಟಾರ್, (Sandalwood)ಉಪೇಂದ್ರ ಸಿನಿಮಾ ಖ್ಯಾತಿಯ ನಟ (Upendra)ಉಪೇಂದ್ರ ಜನ್ಮದಿನವಿದೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣಕ್ಕೆ ಎಲ್ಲ ನಟರಂತೆ ಉಪೇಂದ್ರ ಕೂಡ ಹುಟ್ಟುಹಬ್ಬ ಆಚರಿಸಿರಲಿಲ್ಲ. ಈ ಭಾರಿ ಉಪ್ಪಿ ಕೂಡ ಹುಟ್ಟುಹಬ್ಬ ಆಚರಿಸಿಕೊಂಡು ಅಭಿಮಾನಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಇದಕ್ಕಾಗಿ ನಟ ಉಪ್ಪಿ ಅಭಿಮಾನಿಗಳಿಗೆ ಆಫರ್ ವೊಂದನ್ನು ನೀಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರೋ ಉಪೇಂದ್ರ ಹುಟ್ಟುಹಬ್ಬಕ್ಕೆ ಬರೋ ಅಭಿಮಾನಿಗಳು ಅರ್ಥಪೂರ್ಣ ಸಂದೇಶವೊಂದನ್ನು ಬರೆದುಕೊಂಡು ಬರುವಂತೆ ಮನವಿ ಮಾಡಿದ್ದಾರೆ. ವಿಚಾರವಂತರಾಗೋಣ? ಎಂದಿರೋ (Upendra) ಉಪೇಂದ್ರ, ಇದೇ ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಬೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಚ ಗಿಫ್ಟ್ ಎಲ್ಲಾ ಬಿಟ್ಟು,ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ ? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ ಎಂದಿದ್ದಾರೆ.

ಉಪ್ಪಿ ಈ ಪೋಸ್ಟ್ ಈಗ ಸಖತ್ ವೈರಲ್ ಅಗ್ತಿದ್ದು ಅಭಿಮಾನಿಗಳು ನೆಚ್ಚಿನ ನಟನ ವಿಭಿನ್ನ ಹುಟ್ಟುಹಬ್ಬ ಆಚರಣೆಯ ಪ್ಲ್ಯಾನ್ ನೋಡಿ ಸಪ್ರೈಸ್ ಆಗ್ತಿದ್ದಾರೆ. ಏನೇ ಮಾಡಿದರೂ ವಿಭಿನ್ನವಾಗಿ ಮಾಡೋದು ಉಪ್ಪಿ ಸ್ಟೈಲ್. ಮೊನ್ನೆ ಮೊನ್ನೆಯಷ್ಟೇ ವಿಭಿನ್ನವಾಗಿ ತಮ್ಮ ಸಿನಿಮಾದ ಫರ್ಸ್ಟ್ ಲುಕ್ ಹಾಗೂ ಪೋಸ್ಟರ್ ರಿಲೀಸ್ ಮಾಡಿದ್ದ ಉಪೇಂದ್ರ ಸಿನಿಮಾದ ಹೆಸರೇನಿರಬಹುದು ಎಂಬ ಕುತೂಹಲ ಮೂಡಿಸಿದ್ದರು.

ಇದನ್ನೂ ಓದಿ: ಆಹಾರ ಸೇವಿಸುವ ಸರಿಯಾದ ರೀತಿ ಹೀಗಿದೆ : ಸಲಹೆ ನೀಡಿದ ಖ್ಯಾತ ಪೌಷ್ಟಿಕತಜ್ಞೆ ರುಜುತಾ ದಿವೇಕರ್‌

ಇದನ್ನೂ ಓದಿ: ಸೂಪರ್ ಸಂಡೇ ಭಾರತ Vs ಪಾಕಿಸ್ತಾನ ಸೂಪರ್ -4 ಕದನ… ಹೀಗಿರಲಿದೆ ಟೀಮ್ ಇಂಡಿಯಾ (Team India)ಪ್ಲೇಯಿಂಗ್ XI

ಈಗ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಒಂದೊಳ್ಳೆ ವಿಚಾರವನ್ನು ಬರೆದು ತರುವಂತೆ ಮನವಿ ಮಾಡಿದ್ದು, ವಿಜೇತರಿಗೆ ಬಹುಮಾನವನ್ನು ಕೂಡ ನೀಡುವ ಮೂಲಕ ಜನರ ವಿಚಾರವಂತಿಕೆಯನ್ನು ಪ್ರಚೋದಿಸುವ ಕೆಲಸ ಮಾಡ್ತಿದ್ದಾರೆ ಎಂದು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

A real star has a different birthday Real Star Upendra Birthday

Comments are closed.