Royal Enfield Super Meteor 650 : ಬೈಕ್‌ ಪ್ರಿಯರ ರಾಯಲ್‌ ಎನ್‌ಫೀಲ್ಡ್‌ ಸೂಪರ್‌ ಮೀಟಿಯರ್‌ 650 ಯ ವೈಶಿಷ್ಟ್ಯಗಳು

ಬೈಕ್‌ ಪ್ರಿಯರಿಗೆ ರಾಯಲ್‌ ಎನ್‌ಫೀಲ್ಡ್‌(Royal Enfield) ಎಂದರೆ ಒಂದು ಜೋಶ್‌. ಹಾಗಾಗಿ ಕಂಪನಿಯು ಸಹ ಅದಕ್ಕನುಗುಣವಾಗಿ ಹೊಸ ಹೊಸ ಮಾದರಿಯ ಬೈಕ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಸ್ವಲ್ಪ ದುಬಾರಿಯಾದರೂ ಶಕ್ತಿಶಾಲಿಯಾದ ಈ ಬೈಕ್‌ ಯುವಕರ ಫೆವರೆಟ್‌ ಬೈಕ್‌ (Favorite Bike). ಈಗ ರಾಯಲ್‌ ಎನ್‌ಫೀಲ್ಡ್‌ ಅತ್ಯಂತ ದುಬಾರಿ ಮತ್ತು ಶಕ್ತಿಶಾಲಿ ಬೈಕ್ ಸೂಪರ್ ಮೀಟಿಯರ್ 650 ಅಂತಿಮವಾಗಿ ಬಿಡುಗಡೆ ಮಾಡಿದೆ. ಹಲವಾರು ಉನ್ನತ ಮಟ್ಟದ ವೈಶಿಷ್ಟ್ಯಗಳಿಂದ ಕೂಡಿರುವ ಹೊಸ ಬೈಕ್‌ (Royal Enfield Super Meteor 650) ಎಲ್ಲರ ಗಮನ ಸೆಳೆಯುತ್ತಿದೆ.

ರಾಯಲ್‌ ಎನ್‌ಫೀಲ್ಡ್‌ ಸೂಪರ್‌ ಮೀಟಿಯರ್‌ 650 ಯ ವೈಶಿಷ್ಟ್ಯಗಳು:

  • 15.7 ಲೀಟರ್ ಸಾಮರ್ಥ್ಯ ಹೊಂದಿರುವ ದೊಡ್ಡ ಇಂಧನ ಟ್ಯಾಂಕ್‌ನೊಂದಿಗೆ ಬರಲಿದೆ ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650. ಇದು ಮುಂಭಾಗದಿಂದ 19 ಇಂಚಿನ ಚಕ್ರ ಮತ್ತು ಹಿಂಭಾಗದಿಂದ 16 ಇಂಚುಗಳದ್ದಾಗಿದೆ.
  • ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ತಲೆಕೆಳಗಾದ 43 ಎಂಎಂ ಶೋವಾ ಹೊಂದಿದೆ. ಈ ಹೊಸ ರೀತಿಯ ಫೋರ್ಕ್‌ ಅನ್ನು ರಾಯಲ್ ಎನ್‌ಫೀಲ್ಡ್ ತನ್ನ ಹಿಂದಿನ ಯಾವುದೇ ಬೈಕ್‌ಗಳಲ್ಲಿ ಬಳಸಿಲ್ಲ.
  • 15.7 ಲೀಟರ್ ಸಾಮರ್ಥ್ಯದ ದೊಡ್ಡ ಇಂಧನ ಟ್ಯಾಂಕ್‌ ಅನ್ನು ಹೊಂದಿದೆ.
  • 648cc ಏರ್-ಕಾಯಿಲ್-ಕೂಲ್ಡ್ ಪ್ಯಾರಲಲ್-ಟ್ವಿನ್ ಎಂಜಿನ್ ಹೊಂದಿರುವುದುರಿಂದ ಇದು ಶಕ್ತಿಶಾಲಿಯಾಗಿದೆ.

ಇದನ್ನೂ ಓದಿ: Hyundai Grand i10 Nios Facelift : ಹೊಸ ಲುಕ್‌ನಲ್ಲಿ ಬಿಡುಗಡೆಯಾದ ಹುಂಡೈ ಗ್ರಾಂಡ್‌ i10 ನಿಯಾಸ್‌ ಫೇಸ್‌ಲಿಫ್ಟ್‌

  • ರಾಯಲ್ ಎನ್‌ಫೀಲ್ಡ್ ಸೂಪರ್ ಮೆಟಿಯರ್‌ 650 ಕಡಿಮೆ ಸ್ಯಾಡಲ್ ಎತ್ತರವನ್ನು ಅಂದರೆ 740 ಎಂಎಂ ಹೊಂದಿದೆ. ಈ ಬೈಕ್‌ 241 ಕೆಜಿ ತೂಕ ಹೊಂದಿದೆ.
  • ಸೂಪರ್ ಮೆಟಿಯರ್ 650 ಫ್ರಂಟ್-ಸೆಟ್ ಡ್ರೈವರ್ ಫುಟ್‌ಪೆಗ್‌ಗಳೊಂದಿಗೆ ಬರುತ್ತದೆ ಮತ್ತು ವಿಶಾಲವಾದ ಹ್ಯಾಂಡಲ್‌ಬಾರ್ ಮತ್ತು ಫ್ಲಾಟ್ ಆಗಿದ್ದು ಆರಾಮದಾಯಕ ಸವಾರಿಯನ್ನು ನೀಡುತ್ತದೆ.
  • ಟ್ರಿಪ್ಪರ್ ನ್ಯಾವಿಗೇಷನ್ ಹೊಂದಿರುವ ಮೊದಲ ಟ್ವಿನ್‌ ಕ್ರೂಸರ್ ಆಗಿದೆ. ಅಷ್ಟೇ ಅಲ್ಲದೇ, ಇದು ಎಲ್‌ಇಡಿ ಹೆಡ್ ಮತ್ತು ಟೈಲ್ ಲೈಟ್‌ನೊಂದಿಗೆ ಬರುವ ಮೊದಲ ರಾಯಲ್ ಎನ್‌ಫೀಲ್ಡ್ ಬೈಕ್ ಆಗಿದೆ.
  • ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಅನ್ನು ಸಿಂಗಲ್ ಸೀಟ್ ಮತ್ತು ಲೈಟ್ ಬ್ಯಾಗೇಜ್ ಆಗಿ ಪರಿವರ್ತಿಸಬಹುದಾಗಿದೆ.
  • ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಅನ್ನು 3,48,900 ರೂ. ಆನ್-ರೋಡ್ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ನೀವು ಹೆಚ್ಚುವರಿ 30,000 ರೂ. ಖರ್ಚು ಮಾಡಿದರೆ ಈ ಬೈಕ್‌ನ ಟೂರರ್ ಆವೃತ್ತಿಯನ್ನು ಪಡೆಯನ್ನು ಪಡೆಯಬಹುದಾಗಿದೆ. ಎತ್ತರದ ವಿಂಡ್‌ಸ್ಕ್ರೀನ್ ಮತ್ತು ಪಿಲಿಯನ್ ಬ್ಯಾಕ್‌ರೆಸ್ಟ್‌ನೊಂದಿಗೆ ಆರಾಮದಾಯಕ ಟೂರಿಂಗ್ ಸೀಟ್ ಹೊಂದಿದೆ.

ಇದನ್ನೂ ಓದಿ : Women give birth to child: ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಮಗುವಿಗೆ ಜನ್ಮ ನೀಡಿದ ಮಹಿಳೆ

(Royal Enfield Super Meteor 650 finally launched in India. Here are some of the best features of the bike)

Comments are closed.