Sunroof Cars : ಸನ್‌ರೂಫ್‌ ಕಾರ್‌ಗಳು : ಇವುಗಳನ್ನು 10 ಲಕ್ಷದ ಬಜೆಟ್‌ನಲ್ಲೂ ಖರೀದಿಸಬಹುದು

ಮೊದಲೆಲ್ಲಾ ಕಾರ್‌ (Car) ಖರೀದಿಸಬೇಕಾದರೆ ಬಹಳಷ್ಟು ಯೋಚಿಸುತ್ತಿರಲಿಲ್ಲ. ತಮ್ಮ ಬಜೆಟ್‌ನಲ್ಲಿ ಬರುವ ಯಾವ ಕಾರಾದರೂ ನಡೆಯುತ್ತಿತ್ತು. ಆದರೆ ಈಗ ಹಾಗಿಲ್ಲ, ಕಾರ್‌ ಎಂದಾಕ್ಷಣ ಅದು ಯಾವ ಕಂಪನಿಯ ಕಾರ್‌, ಯಾವ ಮಾದರಿಯದ್ದು, ಅದರ ವೈಶಿಷ್ಟ್ಯಗಳೇನು, ಪೆಟ್ರೋಲ್‌, ಡೀಸಲ್‌ ಅಥವಾ CNG ಕಾರ್‌ ಹೀಗೆ ಹತ್ತು ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿಸಲು ಮುಂದಾಗುತ್ತಾರೆ. ಅದರಲ್ಲೂ ಈಗ ಖರೀದುದಾರರು ಸನ್‌ರೂಫ್‌ (Sunroof Cars) ಇರುವ ಕಾರುಗಳತ್ತ ಇಶೇಷ ಗಮನ ಹರಿಸುತ್ತಿದ್ದಾರೆ. ಮೊದಲೆಲ್ಲಾ ಸನ್‌ರೂಫ್‌ ಇರುವ ಕಾರುಗಳು ಸ್ವಲ್ಪ ದುಬಾರಿಯಾಗಿದ್ದವು. ಆದರೆ ಈಗ ಕೈಗೆಟುಕುವ ಬೆಲೆಯಲ್ಲಿಯೇ ಬರಲಿದೆ. 10 ಲಕ್ಷದ ಬಜೆಟ್‌ನಲ್ಲಿ ಖರೀದಿಸಬಹುದಾದ ಸನ್‌ರೂಫ್‌ ಇರುವ ಕಾರುಗಳು ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ ಸನ್‌ರೂಫ್ ಇರುವ ಅತ್ಯಂತ ಕಡಿಮೆ ಬಜೆಟ್‌ ಕಾರ್‌ ಅಂದರೆ ಹ್ಯುಂಡೈನ ಐ20 ಆಸ್ತಾ. ಈ ಹ್ಯಾಚ್‌ಬ್ಯಾಕ್ ಕಾರು ಪ್ರೀಮಿಯಂ ವಿಭಾಗದಲ್ಲಿ ಬರುತ್ತದೆ. ಈ ಕಾರ್‌ನ ಎಕ್ಸ್ ಶೋ ರೂಂ ಬೆಲೆ 8.84 ಲಕ್ಷ ರೂ.ಗಳಾಗಿದೆ.

ದೇಶದಲ್ಲಿ ಕಿಯಾ ಕಾರುಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸನ್‌ರೂಫ್ ಇರುವ ಕಿಯಾ ಸೋನೆಟ್‌ HTK ಕಾರನ್ನು 9.19 ಲಕ್ಷದ ಎಕ್ಸ್ ಶೋ ರೂಂ ಬೆಲೆಗೆ ಖರೀದಿಸ ಬಹುದಾಗಿದೆ.

ಟಾಟಾ ಕಾರಿಗೆ ದೇಶದಲ್ಲಿ ಭಾರೀ ಬೇಡಿಕೆಯಿದೆ. ಟಾಟಾದ ಅತಿ ಹೆಚ್ಚು ಮಾರಾಟವಾಗುವ ಎಸ್‌ಯುವಿ ಕಾರು ಟಾಟಾ ನೆಕ್ಸಾನ್‌ ಸಹ ಸನ್‌ರೂಫ್‌ ಹೊಂದಿದ್ದು ಅದನ್ನು 9.20 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ನೀವು ಈ ಕಾರನ್ನು ಮನೆಗೆ ತರಬಹುದಾಗಿದೆ.

ಜಪಾನಿನ ವಾಹನ ತಯಾರಕ ಕಂಪನಿ ಹೋಂಡಾದ, ಹೋಂಡಾ ಜಾಝ್ ಕಾರ್‌ ಸಹ ಸನ್‌ರೂಫ್‌ ಹೊಂದಿದೆ. ಈ ಕಾರಿನ ಟಾಪ್‌ ಎಂಡ್‌ನಲ್ಲಿ ಸನ್‌ರೂಫ್ ಅನ್ನು ನೀಡುತ್ತದೆ. ಈ ಕಾರನ್ನು 9.34 ಲಕ್ಷ ರೂ.ಗಳ ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಹೋಂಡಾದ WRV ಕಾರು ಉನ್ನತ ಮಾದರಿಯ VX ನಲ್ಲಿ ಸನ್‌ರೂಫ್ ಸೌಲಭ್ಯವನ್ನು ನೀಡುತ್ತದೆ. ಈ ಕಾರನ್ನು 9.89 ಲಕ್ಷ ರೂ.ಗಳ ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಇದನ್ನೂ ಓದಿ : Royal Enfield Super Meteor 650 : ಬೈಕ್‌ ಪ್ರಿಯರ ರಾಯಲ್‌ ಎನ್‌ಫೀಲ್ಡ್‌ ಸೂಪರ್‌ ಮೀಟಿಯರ್‌ 650 ಯ ವೈಶಿಷ್ಟ್ಯಗಳು

ಇದನ್ನೂ ಓದಿ : Hyundai Grand i10 Nios Facelift : ಹೊಸ ಲುಕ್‌ನಲ್ಲಿ ಬಿಡುಗಡೆಯಾದ ಹುಂಡೈ ಗ್ರಾಂಡ್‌ i10 ನಿಯಾಸ್‌ ಫೇಸ್‌ಲಿಫ್ಟ್‌

(Sunroof Cars these are budget cars with sunroof)

Comments are closed.