Top 5 Automatic Cars: 8 ಲಕ್ಷಕ್ಕಿಂತ ಕಡಿಮೆ ಬೆಲೆಯ ಭಾರತದ ಟಾಪ್‌ 5 ಆಟೊಮೆಟಿಕ್‌ ಕಾರುಗಳು!

ಕಾರು ಖರೀದಿಸುವುದು(Buying car) ಮಧ್ಯಮ ವರ್ಗದ ಜನರ ಕನಸು. ಅದರ ಬಗ್ಗೆ ಯೋಚಿಸುವಾಗಲೇ ಹಲವಾರು ಗೊಂದಲ. ತಮ್ಮ ಬಜೆಟ್‌(Budget) ನಲ್ಲಿ ಸಿಗಬಹುದಾದ ಕಾರುಗಳ ಬಗ್ಗೇ ಹುಡುಕಾಟ. ಬಜೆಟ್‌ನಲ್ಲಿ ಬಂದರೂ, ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ಚಿಂತೆ. ಇವೆಲ್ಲ ಕಾರು ಖರೀದಿಸುವಾಗ ಎದುರಾಗುವ ಸಮಸ್ಯೆಗಳು. ಅದಕ್ಕಾಗಿ ನಾವು ಇಲ್ಲಿ ಭಾರತದ ಟಾಪ್‌ 5 ಆಟೊಮೆಟಿಕ್‌ (Top 5 Automatic Cars) ಕಾರುಗಳ ಬಗ್ಗೆ ಹೇಳಿದ್ದೇವೆ. ಕಾರು ಖರೀದಿಸಲು ಬಯಸುವವರು ಇದನ್ನೊಮ್ಮೆ ಗಮನಿಸಿ. ನಿಮ್ಮ ಬಜೆಟ್‌ಗೆ ಸರಿಹೊಂದುವ ಕಾರ್‌ ಇಲ್ಲಿದೆ.

ಕೆಲವು ಕಾರುಗಳು ಸುರಕ್ಷತೆಯ ದೃಷ್ಟಿಯಿಂದಲೂ, ಹೊಸ ವೈಶಿಷ್ಟ್ಯಗಳಿಂದಲೂ ಹೆಸರುವಾಸಿಯಾಗಿದೆ. ಅತ್ಯತ್ತಮ ಕಾರು ತಯಾರಿಕಾ ಕಂಪನಿಗಳಾದ ಹುಂಡೈ, ಟಾಟಾ, ಮಾರುತಿ ಸುಜುಕಿ ಮುಂತಾದ ಕಂಪನಿಗಳು ಮಧ್ಯಮ ವರ್ಗದ ಜನರಿಗೆಂದೇ ಕೆಲವು ಕಾರುಗಳನ್ನು ತಯಾರಿಸಿದೆ ಮತ್ತು ಅದನ್ನು ಸುಲಭವಾಗಿ ಖರೀದಿಸಲೂಬಹುದಾಗಿದೆ. ‌

  1. ಟಾಟಾ ಪಂಚ್‌ :
    ಟಾಟಾ ಕಂಪನಿ ಬಿಡುಗಡೆ ಮಾಡಿರುವ ಟಾಟಾ ಪಂಚ್‌ ಸುರಕ್ಷತೆಗಾಗಿ ಎರಡು ಏರ್‌ ಬ್ಯಾಗ್‌ಗಳನ್ನು ಹೊಂದಿದೆ. ಇದರ ವೈಶಿಷ್ಟ್ಯಗಳು ಹೇಗಿವೆಯೆಂದರೆ: ಆಂಟಿ–ಲಾಕ್‌ ಬ್ರೆಕ್ಕಿಂಗ್‌ ಸಿಸ್ಟಮ್‌(ABS With EBD), ಇಂಜಿನ್‌ ಸ್ಟಾರ್ಟ್‌–ಸ್ಟಾಪ್‌, ಇಕೋ ಮತ್ತು ಸಿಟಿ ಡ್ರೈವ್‌ ಮೋಡ್‌ಗಳು, 90 ಡಿಗ್ರಿಯಲ್ಲಿ ತೆರೆಯಬಹುದಾದ ಬಾಗಿಲು, ಹಿಂಭಾಗದಲ್ಲಿ ಫ್ಲಾಟ್‌ ಫ್ಲೋರ್‌, ಸ್ಟೀರಿಂಗ್‌ ಮೌಂಟೆಡ್‌ ಕಂಟ್ರೋಲ್‌ಗಳು, ಹಿಂಬದಿಯ ಕ್ಯಾಮೆರಾ, ವಾಯ್ಸ್‌ ಕಮಾಂಡ್‌ಗಳು, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕ ಸೀಟ್‌, ಆಟೋಫೌಲ್ಡಿಂಗ್‌ ORVM ಮತ್ತು ಟೆಂಪ್ರೇಚರ್‌ ಕಂಟ್ರೋಲ್‌. ಇಂಧನ ಬಗ್ಗೆ ಹೇಳುವುದಾದರೆ : 1.2 ಲೀಟರ್‌, 86hp ಮತ್ತಯ 113 Nm ಟಾರ್ಕ್‌ ಅಭಿವೃದ್ದಿಪಡಿಸುವ ನೂಸರ್ಗಿಕವಾಗಿ ಆಸ್ಪಿರೇಟೆಡ್‌ ಪೆಟ್ರೋಲ್‌ ಎಂಜಿನ್‌ನಿಂದ ಚಾಲಿತವಾಗುವ 3 ಸಿಲಿಂಡರ್‌ ಹೊಂದಿದೆ. AMT ಸ್ವಯಂಚಾಲಿತ ಅಥವಾ 5–ಸ್ಪೀಡ್‌ ಮ್ಯಾನುವಲ್‌ ಗೇರ್‌ ಹೊಂದಿದೆ.
  2. ಹುಂಡೈ ಗ್ರಾಂಡ್‌ i10 ನಿಯಾಸ್‌:
    ಇದು ಹುಂಡೈ ಕಂಪನಿಯ ಕಾರ್‌ ಆಗಿದ್ದು, 1.2 ಲೀಟರ್‌ ಎಂಜಿನ್‌ ನ ಪೆಟ್ರೋಲ್ ಮತ್ತು ಡೀಸಲ್‌ ಎರಡೂ ರೀತಿಯಲ್ಲಿ ಸಿಗುತ್ತದೆ. ಇಂಜಿನ್‌ಗಳ 5–ಸ್ಪೀಡ್‌ ಮ್ಯಾನುವಲ್‌ ಗೇರ್‌ ಅಥವಾ AMT(ಆಟೊಮೆಟಿಕ್‌) ಗೇರ್‌ ಹೊಂದಿದೆ. ಎರಡು ಇಂಜಿನ್‌ ಆಯ್ಕೆಗಳು 10 ವೇರಿಯಂಟ್‌ಗಳಲ್ಲಿ ಲಭ್ಯವಿದೆ. 7 ಪೆಟ್ರೋಲ್‌ ವೇರಿಯಂಟ್‌ ಆದರೆ ಉಳಿದ ಮೂರು ಡೀಸೆಲ್‌ ವೇರಿಯಂಟ್‌ ಆಗಿದೆ. ಇದು ಭಾರತದ ಮೊದಲ ವೇರಿಯೇಬಲ್‌ ಬೇಸಿಕ್‌ ವಾರಂಟಿ ಒದಗಿಸು ಕಾರ್‌ ಆಗಿದೆ.
  3. ಮಾರುತಿ ಸುಜುಕಿ ವ್ಯಾಗನ್‌ಆರ್‌ :
    ಮಾರುತಿ ಸುಜುಕಿ ನವೀಕರಿಸಿ ಹೊರ ತಂದಿರುವ ವ್ಯಾಗನ್‌ಆರ್‌, ಟ್ವೀಕ್ಡ್‌ ಎಂಜಿನ್‌ ಮತ್ತು ಕಾಸ್ಮೆಟಿಕ್‌ ಎನ್‌ಹಾನ್ಸ್‌ಮೆಂಟ್‌ಗಳನ್ನು ಹೊಂದಿದೆ. 1.0 ಲೀಟರ್‌ನ ಮೋಟಾರ್‌ 24.35kmpl ನಿಂದ 25.40 kmpl ಇಂಧನ ಧಕ್ಷತೆ ಹೊಂದಿದೆ. ಆದರೆ ಮ್ಯಾನುವಲ್‌ನಲ್ಲಿ 1.2 ಲೀಟರ್‌ ನ ಮೋಟಾರ್‌ 23.56kmpl ಆದರೆ ಆಟೊಮೆಟಿಕ್‌ನಲ್ಲಿ ಇದು 24.43 kmpl ನೀಡುತ್ತದೆ. 1 ಲೀಟರ್‌ CNGಯ ಸಾಮರ್ಥ್ಯವು 34.05 ರಿಂದ 34.73 km.kg ಹೊಂದಿದೆ.
  4. ಮಾರುತಿ ಸುಜುಕಿ ಎಸ್‌ ಪ್ರೆಸ್ಸೊ :
    ಎಸ್‌–ಪ್ರೆಸ್ಸೊ ಮಾರುತಿ ಸುಜುಕಿ 1.0 ಲೀಟರ್‌ ನ ಮೂರು ಸಿಲಿಂಡರ್‌ ಪೆಟ್ರೋಲ್‌ ಎಂಜಿನ್‌ 67bhp/90Nm ಉತ್ಪಾದಿಸುತ್ತದೆ. ಈ ಎಂಜಿನ್‌ 5–ಸ್ಪೀಡ್‌ ಮ್ಯೆನುವಲ್‌ ಅಥವಾ ಆಟೊಮೆಟಿಕ್‌ ಗೇರ್‌ ಹೊಂದಿದೆ. ಇದು ಡ್ಯುಯಲ್‌ ಏರ್‌ಬ್ಯಾಗ್‌ಗಳು, ಆಟೊಮೆಟಿಕ್‌ ಬ್ರೆಕ್‌ ಸಿಸ್ಟಮ್‌, ಸೀಟ್‌ ಬೆಲ್ಟ್‌ ಮತ್ತು ಸೀಟ್‌ ಬೆಲ್ಟ್‌ ರಿಮೈಂಡರ್‌, ರಿಯರ್‌ ಪಾರ್ಕಿಂಗ್‌ ಅಸಿಸ್ಟ್‌ ಸಿಸ್ಟಮ್‌, ಹೈ–ಸ್ಪೀಡ್‌ ವಾರ್ನಿಂಗ್‌ ಅಲರ್ಟ್‌ ಮತ್ತು ರಿವರ್ಸ್‌ ಪಾರ್ಕಿಂಗ್‌ ಸೆನ್ಸಾರ್‌ಗಳಂತಹ ಸುರುಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
  5. ಟಾಟಾ ಟಿಯಾಗೊ :
    ಇದು ಗರಿಷ್ಠ 84 bhp ಶಕ್ತಿ ಮತ್ತು 114 Nm ಪೀಕ್‌ ಟಾರ್ಕ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಟಾಟಾ ಕಂಪನಿಯ ಕಾರ್‌ ಆಗಿದೆ. 1.2 ಲೀಟರ್‌ನ ಮೂರು ಸಿಲಿಂಡರ್‌ ರಿವೊಟ್ರಾನ್‌ ಪೆಟ್ರೋಲ್‌ ಇಂಜಿನ್‌ನಿಂದ ನಿಯಂತ್ರಿಸುತ್ತದೆ. 2 ಡ್ರೈವ್‌ ಮೋಡ್‌ಗಳ ಜೊತೆ 5–ಸ್ಪೀಡ್‌ ಈಸಿ ಶಿಫ್ಟ್‌ ಅಟೊಮೆಟಿಕ್‌ ಗೇರ್‌ ಬಾಕ್ಸ್‌ ನಿಂದ ಸಂಯೋಜಿತವಾಗಿದೆ. ಈಸಿ ಶಿಫ್ಟ್‌ ಆಟೊಮೆಟಿಕ್‌ ಗೇರ್‌ ಬಾಕ್ಸ್‌ ಇನ್–ಬಿಲ್ಟ್‌ ಕ್ರೀಪ್‌ ವೈಶಿಷ್ಟ್ಯವನ್ನು ಹೊಂದಿದೆ. ಕ್ರೀಪ್ ಫಂಕ್ಷನ್‌, ಹೀಲ್‌ ಹೋಲ್ಡ್‌ ವೈಶಿಷ್ಟ್ಯದೊಂದಿಗೆ ಬರುವುದರಿಂದ ಇಳುಜಾರುಗಳಲ್ಲಿ ಕಾರು ಹಿಂದಕ್ಕೆ ಉರುಳುವುದನ್ನು ತೆಡೆಯುತ್ತದೆ.

ಇದನ್ನೂ ಓದಿ : Salary Slip Details : ನಿಮಗಿದು ಗೊತ್ತೇ? ಸ್ಯಾಲರಿ ಸ್ಲಿಪ್‌ ಏನೆಲ್ಲಾ ಒಳಗೊಂಡಿರುತ್ತದೆ ಎಂದು !!

ಇದನ್ನೂ ಓದಿ : Facebook Settings: ಫೇಸ್‌ಬುಕ್‌ ನಲ್ಲಿ ನೀವು ಮಾಡಲೇಬೇಕಾದ ಸೆಟ್ಟಿಂಗ್ಸ್‌ಗಳು ಯಾವುದು ಅಂತ ನಿಮಗೆ ಗೊತ್ತಾ?

(Top 5 Automatic Cars here is some info about affordable cars in India)

Comments are closed.