ಸೋಮವಾರ, ಏಪ್ರಿಲ್ 28, 2025
HomeautomobileTop 5 Upcoming Cars in 2023 : ಮುಂದಿನ ವರ್ಷ ಬಿಡುಗಡೆಯಾಗಲಿರುವ ಟಾಪ್‌ 5...

Top 5 Upcoming Cars in 2023 : ಮುಂದಿನ ವರ್ಷ ಬಿಡುಗಡೆಯಾಗಲಿರುವ ಟಾಪ್‌ 5 ಕಾರುಗಳಿವು

- Advertisement -

ಇತ್ತೀಚಿನ ದಿನಗಳಲ್ಲಿ ಮನೆಗೊಂದು ಕಾರು ಸಾಮಾನ್ಯ. ಹಾಗೆ ಹಳೆ ಕಾರುಗಳನ್ನು ಬದಲಾಯಿಸಿ ಹೊಸ ವೈಶಿಷ್ಟ್ಯಗಳಿರುವ ಕಾರುಗಳನ್ನು ಕೊಳ್ಳುವ ಕ್ರೇಜ್ ಕೂಡ ಹೆಚ್ಚಾಗಿದೆ. ಕೆಲವರು ಬಜೆಟ್‌ ಬೆಲೆಯ ಕಾರುಗಳ ಖರೀದಿಗೆ ಮುಂದಾದರೆ, ಇನ್ನು ಕೆಲವರು ಸುರಕ್ಷತೆಯಲ್ಲಿ ಉತ್ತಮವಾದನ್ನು ಆಯ್ದುಕೊಳ್ಳಲು ನೋಡುತ್ತಾರೆ. ಜನರ ಅಭಿರುಚಿಗೆ ತಕ್ಕಂತೆ ಕಾರು ತಯಾರಿಕಾ ಕಂಪನಿಗಳು ಸಹ ಅನೇಕ ವಿಶೇಷತೆಗಳನ್ನು ಹೊಸ ಕಾರುಗಳಲ್ಲಿ ಅಳವಡಿಸುತ್ತಿದ್ದಾರೆ. ಹಾಗೆ ಮುಂದಿನ ವರ್ಷ 2023 ಕ್ಕೆ ಬಹಳಷ್ಟು ಕಾರುಗಳು ಬಿಡುಗಡೆಯಾಗಲಿದೆ (Top 5 Upcoming Cars in 2023). SUV, ಹ್ಯಾಚ್‌ಬ್ಯಾಕ್‌, MUV, ಮತ್ತು ಸೆಡಾನ್‌ ಮಾದರಿಯ ಕಾರುಗಳು ಸೇರಿವೆ. ಮುಂದಿನ ವರ್ಷ ಬಿಡುಗಡೆಯಾಗಲಿರುವ ಟಾಪ್‌ 5 ಕಾರುಗಳ ಪಟ್ಟಿ ಇಲ್ಲಿದೆ.

ಮುಂದಿನ 2023 ಯಲ್ಲಿ ಬಿಡುಗಡೆಯಾಗಲಿರುವ ಟಾಪ್‌ 5 ಕಾರುಗಳು :

ಮಾರುತಿ ಜಿಮ್ಮಿ : ಮಾರುತಿ ಬಹು ನಿರೀಕ್ಷಿತ 5 ಸೀಟುಗಳಿರುವ ಜಿಮ್ಮಿಯನ್ನು ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದು SUV ಕಾರಾಗಿದೆ. ಇದು ಗೋ ಪ್ಲಸ್‌, ಟಿಯಾಗೊ ಮತ್ತು ಇಗ್ನೀಸ್‌ ಕಾರುಗಳಿಗೆ ಪ್ರತಿಸ್ಪರ್ಧೆ ನೀಡಬಹುದು ಎಂದು ಹೇಳಲಾಗುತ್ತಿದೆ. 10 ಲಕ್ಷಕ್ಕೆ ಈ ಕಾರು ದೊರೆಯಬಹುದು ಎಂದು ಅಂದಾಜು ಮಾಡಲಾಗಿದೆ.

MG ಏರ್‌ EV: ಇದು 5 ಸೀಟುಗಳಿರುವ ಹ್ಯಾಚ್‌ಬ್ಯಾಕ್‌ ಕಾರಾಗಿದೆ. ಎಲೆಕ್ಟ್ರಿಕ್‌ ಕಾರಾದ MG ಏರ್‌ EV ಜನವರಿ 2023 ಯಲ್ಲಿ ಬಿಡುಗಡೆಯಾಗಲಿದೆ. ಇದು ಟಿಯಾಗೊ, ಗೋ ಪ್ಲಸ್‌ ಮತ್ತು ಇಗ್ನೀಸ್‌ಗಳಿ ಪ್ರತಿಸ್ಪರ್ಧೆಯನ್ನು ನೀಡಲಿದೆ. ಈ ಕಾರಿನ ಅಂದಾಜು ಬೆಲೆ 10 ಲಕ್ಷ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Cars to Stop selling in 2023 due to RDE : ಮುಂದಿನ ವರ್ಷ ಮಾರುತಿ ಸುಜುಕಿ, ಟಾಟಾ ಮುಂತಾದ ಕಂಪನಿಯ 17 ಕಾರುಗಳು ಸ್ಥಗಿತಗೊಳ್ಳಬಹುದು; ಕಾರಣ ಏನು ಗೊತ್ತಾ…

ಟೊಯೊಟಾ ರುಮಿಯಾನ್‌ : ಟೊಯೊಟಾ 7 ಸೀಟುಗಳಿರುವ ರುಮಿಯಾನ್‌ 2023 ರಲ್ಲಿ ಬಿಡುಗಡೆ ಮಾಡಲಿದೆ. ಇದು MUV ಮಾದರಿಯ ಕಾರಾಗಿದೆ. ಇದು 6 ಜನರಿರುವ ಕುಟುಂಬಗಳಿಗೆ ಉತ್ತಮವಾಗಿದೆ. ಈ ಕಾರಿನ ಬೆಲೆ ಅಂದಾಜು 8.77 ಲಕ್ಷ ಎಂದು ಹೇಳಲಾಗುತ್ತಿದೆ.

ಸ್ಕೋಡಾ ಫಾಬಿಯಾ 2023 : ಸ್ಕೋಡಾ 5 ಸೀಟುಗಳಿರುವ ಹ್ಯಾಚ್‌ಬ್ಯಾಕ್‌ ಕಾರನ್ನು ಮುಂದಿನ ವರ್ಷ ಬಿಡಗಡೆ ಮಾಡಲಿದೆ. ಸ್ಕೋಡಾದ ಫಾಬಿಯಾ 2023 ಯು ಜನವರಿ 2023 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಮಾರುತಿ ಅಲ್ಟೋ K10 ಗೆ ಪ್ರತಿಸ್ಪರ್ಧೆ ನೀಡಬಹದು ಎಂದು ಹೇಳಲಾಗುತ್ತಿದೆ. ಈ ಕಾರು ಅಂದಾಜು 7 ಲಕ್ಷ ದಿಂದ ಪ್ರಾರಂಭವಾಗುವ ನಿರೀಕೆಯಿದೆ.

ಮಹಿಂದ್ರ eKUV100 : ಮಹಿಂದ್ರ ಮುಂದಿನ ವರ್ಷ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ. ಅದು 5 ಸೀಟುಗಳಿರುವ SUV ಕಾರಾಗಿದೆ. ಮಹಿಂದ್ರ eKUV100 ಜನವರಿ 2023ಯಲ್ಲಿ ಬಿಡುಗಡೆಯಾಗಲಿದೆ. ಇದು ಪಂಚ್, ಕಿಗಾರ್‌ಗಳಿಗೆ ಪ್ರತಿಸ್ಪರ್ಧೆ ನೀಡಲಿದೆ ಎಂದು ಹೇಳಲಾಗುತ್ತಿದೆ. ಈ ಕಾರಿನ ಬೆಲೆ ಅಂದಾಜು 8.25 ಲಕ್ಷ

ಇದನ್ನೂ ಓದಿ : 10 Most-liked Instagram Posts : ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್‌ ಪಡೆದ 10 ಆಲ್‌ ಟೈಮ್‌ ಪೋಸ್ಟ್‌ಗಳು

(Top 5 Upcoming Cars in 2023. These cars expected to launch in the year 2023)

RELATED ARTICLES

Most Popular