India Covid-19: ಮತ್ತೆ ದೇಶದಲ್ಲಿ ಕೊರೋನಾ ಭೀತಿ: ಪ್ರಧಾನಿ ಮೋದಿ ನೇತ್ರತ್ವದಲ್ಲಿ ಮಹತ್ವದ ಸಭೆ

ದೆಹಲಿ: (India Covid-19) ಚೀನಾದಲ್ಲಿ ಕೊರೋನಾ ಮತ್ತೆ ತಾಂಡವವಾಡುತ್ತಿದ್ದು, ದಿನೇ ದಿನೇ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಭಾರತದಲ್ಲಿನ ಕೋವಿಡ್ ಪರಿಸ್ಥಿತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದೆ. ಒಮಿಕ್ರಾನ್ ಸಬ್-ವೇರಿಯಂಟ್ BF.7 ನ ನಾಲ್ಕು ಪ್ರಕರಣಗಳು ದೇಶದಲ್ಲಿ ದೃಢಪಟ್ಟ ನಂತರದಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆಯಲಾಗಿದೆ.

ಜನಸಂದಣಿ ಹೆಚ್ಚಿರುವ ಪ್ರದೇಶಗಳ್ಲಲಿ ಮಾಸ್ಕ್​ ಧರಿಸುವುದು ಮತ್ತು ಲಸಿಕೆ ಹಾಕುವುದು ಸೇರಿದಂತೆ ಕೋವಿಡ್ (India Covid-19) ಸೂಕ್ತ ಕ್ರಮವನ್ನು ಅನುಸರಿಸಲು ಮನವಿ ಮಾಡಲಾಗಿದೆ. ಚೀನಾ ಮತ್ತು ಇತರ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳ ಏರಿಕೆ ಕಂಡು ಬಂದ ಹಿನ್ನಲೆ ಚೀನಾ ಮತ್ತು ಇತರ ದೇಶಗಳಿಂದ ಆಗಮಿಸುವ ಅಂತಾರಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನೆರೆದೇಶಗಳಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚಳದ ಮಧ್ಯೆ ಕೇಂದ್ರ ಸರ್ಕಾರವು ಮಂಗಳವಾರ (ಡಿಸೆಂಬರ್ 20) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಕಾರಾತ್ಮಕ ಮಾದರಿಗಳ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಟ್ರ್ಯಾಕ್ ಮಾಡಲು ಸಜ್ಜುಗೊಳಿಸುವಂತೆ ಒತ್ತಾಯಿಸಿದೆ. ಇಂತಹ ಕ್ರಮಗಳು ದೇಶದಲ್ಲಿ ಕಾಣಿಸಿಕೊಳ್ಳುವ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ ಮತ್ತು ಅಗತ್ಯ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Ahmedabad Double Murder : ಆಸ್ಪತ್ರೆಯಲ್ಲಿ ಡಬ್ಬಲ್ ಮರ್ಡರ್ : ಆಪರೇಷನ್ ಥಿಯೇಟರ್ ನಲ್ಲಿ ತಾಯಿ ಮಗಳ ಶವ ಪತ್ತೆ

ಇದನ್ನೂ ಓದಿ : Terrible Accident : ಎರಡು ಶಾಲಾ ಬಸ್‌ಗಳ ನಡುವೆ ಭೀಕರ ಅಪಘಾತ : 15 ವಿದ್ಯಾರ್ಥಿಗಳು ಬಲಿ

(India Covid-19) Corona is making a comeback in China and the number of deaths is increasing day by day. Therefore, a meeting will be held today under the leadership of Prime Minister Narendra Modi to review the Covid situation in India. The high-level meeting was called after four cases of Omicron sub-variant BF.7 were confirmed in the country.

Comments are closed.