Kuldeep Yadav Dropped : ಕಳೆದ ಪಂದ್ಯದಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’, ಈ ಪಂದ್ಯದಲ್ಲಿ ತಂಡದಿಂದಲೇ ಔಟ್ : Sorry ಕುಲ್‌ದೀಪ್ ಯಾದವ್

ಮೀರ್’ಪುರ್ : ಇಂಥದ್ದೆಲ್ಲಾ ಭಾರತ ಕ್ರಿಕೆಟ್ ತಂಡದಲ್ಲಿ ಮಾತ್ರ ನಡೆಯಲು ಸಾಧ್ಯ. ಕಳೆದ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಆಟಗಾರನಿಗೆ ಈ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದಲ್ಲೇ (Kuldeep Yadav Dropped) ಸ್ಥಾನವಿಲ್ಲ. ಇದು ಟೀಮ್ ಇಂಡಿಯಾದ ಚೈನಾಮನ್ ಸ್ಪಿನ್ನರ್ ಕುಲ್’ದೀಪ್ ಯಾದವ್ (Kuldeep Yadav) ಅವರ ಪರಿಸ್ಥಿತಿ.

ಉತ್ತರ ಪ್ರದೇಶದ 28 ವರ್ಷದ ಕುಲ್ದೀಪ್ ಯಾದವ್, ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ 22 ತಿಂಗಳ ನಂತರ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದರು. ತಮ್ಮ ಕಂಬ್ಯಾಕ್ ಟೆಸ್ಟ್ ಪಂದ್ಯದಲ್ಲೇ ಟೀಮ್ ಇಂಡಿಯಾವನ್ನು ಗೆಲ್ಲಿಸಿದ್ದ ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದ್ದರು. ಛಟ್ಟೋಗ್ರಾಮ್’ನಲ್ಲಿ ನಡೆದ ಬಾಂಗ್ಲಾ ವಿರುದ್ಧದ ಪ್ರಥಮ ಟೆಸ್ಟ್’ನಲ್ಲಿ ಬ್ಯಾಟಿಂಗ್’ನಲ್ಲಿ 40 ರನ್ ಗಳಿಸಿದ್ದ ಕುಲ್ದೀಪ್, ಬೌಲಿಂಗ್’ನಲ್ಲಿ 8 ವಿಕೆಟ್ ಪಡೆದು ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಭಾರತದ ಗೆಲುವಿಗೆ ಕಾರಣರಾಗಿದ್ದರು.

ಆದರೆ ಬಾಂಗ್ಲಾದೇಶ ವಿರುದ್ಧ ಮೀರ್’ಪುರ್’ನ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಆರಂಭಗೊಂಡ ದ್ವಿತೀಯ ಟೆಸ್ಟ್ (India Vs Bangladesh 2nd test match) ಪಂದ್ಯದ ಆಡುವ ಬಳಗದಿಂದ ಕುಲ್ದೀಪ್ ಯಾದವ್ ಅವರನ್ನ ಕೈಬಿಡಲಾಗಿದೆ.

ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಮೂರನೇ ವೇಗದ ಬೌಲರ್ ಒಬ್ಬನ ಅವಶ್ಯಕತೆಯಿದ್ದ ಕಾರಣ ಕುಲ್ದೀಪ್ ಯಾದವ್ ಅವರನ್ನು ಆಡುವ ಬಳಗದಿಂದ ಕೈಬಿಡಲಾಗಿದೆ. ಅವರ ಬದಲು ಸೌರಾಷ್ಟ್ರದ ಎಡಗೈ ಮಧ್ಯಮ ವೇಗಿ ಜೈದೇವ್ ಉನಾದ್ಕಟ್ ಟೀಮ್ ಇಂಡಿಯಾ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್’ನ ಲೆಕ್ಕಾಚಾರ ಏನೇ ಇರಲಿ. ಆದರೆ ಕುಲ್ದೀಪ್ ಯಾದವ್ ಅವರನ್ನು ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಆಡುವ ಬಳಗದಿಂದ ಕೈಬಿಟ್ಟಿರುವ ನಿರ್ಧಾರದ ವಿರುದ್ಧ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರುತ್ತಿದ್ದಾರೆ.
” ಕಳೆದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನನ್ನು ಮುಂದಿನ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಗಿಟ್ರೆ ಆತನ ಆತ್ಮಸ್ಥೈರ್ಯ ಏನಾಗಬೇಕು” ಎಂದು ಕ್ರಿಕೆಟ್ ಅಭಿಮಾನಿಯೊಬ್ಬ ಟ್ಟಿಟರ್’ನಲ್ಲಿ ಆಕ್ರೋಶ ಹೊರ ಹಾಕಿದ್ದಾನೆ.

ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಟಗಾರರನ್ನು “ಸಂಗೀತ ಕುರ್ಚಿ” ಆಟವಾಡಿಸುತ್ತಿದ್ದಾರೆ ಎಂದು ಮತ್ತೊಬ್ಬ ಕ್ರಿಕೆಟ್ ಅಭಿಮಾನಿ ಟ್ವೀಟ್ ಮಾಡಿದ್ದಾನೆ.

ಇದನ್ನೂ ಓದಿ : Rahul Kohli Drinks Tender Coconut : ಬಾಂಗ್ಲಾದೇಶದಲ್ಲಿ ಎಳನೀರು ಕುಡಿದ ಟೀಮ್ ಇಂಡಿಯಾ ಕ್ಯಾಪ್ಟನ್ ರಾಹುಲ್, ಕಿಂಗ್ ಕೊಹ್ಲಿ

ಇದನ್ನೂ ಓದಿ : Suryakumar Yadav: ರಣಜಿ ಪಂದ್ಯದಲ್ಲೂ ಮುಂದುವರಿದ “ಸೂರ್ಯ” ಶಿಕಾರಿ, ಹತ್ತೇ ರನ್ನಿಂದ ಸೆಂಚುರಿ ಮಿಸ್, ಸಿಗಲಿದ್ಯಾ ಟೆಸ್ಟ್ ಕ್ಯಾಪ್..?

ಪ್ರವಾಸಿ ಭಾರತ ಮತ್ತು ಆತಿಥೇಯ ಬಾಂಗ್ಲಾದೇಶ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಮೀರ್’ಪುರ್’ನಲ್ಲಿರುವ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಟಾಸ್ ಗೆದ್ದಿರುವ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದಲ 20 ಓವರ್’ಗಳಲ್ಲಿ ಬಾಂಗ್ಲಾದೇಶ 2 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದೆ.

Kuldeep Yadav Dropped: ‘Man of the Match’ in the last match, out of the team in this match: Sorry Kuldeep Yadav

Comments are closed.