Toyota Innova Hycross : ಹೊಸ ತಲೆಮಾರಿನ ಕಾರು : ಟೊಯೊಟಾ ಇನ್ನೋವಾ ಹೈಕ್ರಾಸ್‌ ಅನಾವರಣ

ಆಟೋಮೊಬೈಲ್‌ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಹೆಸರು ಗಳಿಸಿರುವ ಟೊಯೊಟಾ ಕಿರ್ಲೋಸ್ಕರ್‌ ಹೊಸ ತಲೆಮಾರಿನ ಇನ್ನೋವಾ ಹೈಕ್ರಾಸ್‌ (Toyota Innova Hycross ) ಅನ್ನು ಭಾರತಕ್ಕಾಗಿ ಅನಾವರಣಗೊಳಿಸಿದೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಇಂಡೋನೇಷ್ಯಾದಲ್ಲಿ ಜಾಗತಿಕವಾಗಿ ಚೊಚ್ಚಲ ಪ್ರವೇಶ ಮಾಡಿದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಇದನ್ನು ಅನಾವರಣಗೊಳಿಸಿದೆ. ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ಮೊನೊಕಾಕ್ ಪ್ಲಾಟ್‌ಫಾರ್ಮ್ ಮತ್ತು ಪೆಟ್ರೋಲ್-ಹೈಬ್ರಿಡ್ ಎಂಜಿನ್‌ ಅನ್ನು ಮೊದಲ ಬಾರಿಗೆ ಪಡೆದುಕೊಂಡಿದೆ. ಇದರಲ್ಲಿ ಡೀಸಿಲ್‌ ಮಾದರಿಗಳಿಲ್ಲ. ಇದು SUV ವಾಹನಗಳ ತರಹವೇ ಇದೆ. ಸೌಕರ್ಯ ಮತ್ತು ತಂತ್ರಜ್ಞಾನದಲ್ಲಿಯೂ ಸಹ ಅದನ್ನೇ ಹೋಲುತ್ತದೆ. ಇನ್ನೋವ್‌ ಹೈಕ್ರಾಸ್‌ನ ಬುಕಿಂಗ್‌ ಪ್ರಾರಂಭವಾಗಿದೆ. ಇದು ಜನವರಿ ತಿಂಗಳಿನ ಮಧ್ಯಭಾಗದಲ್ಲಿ ವಿತರಣೆ ಆಗಲಿದೆ. ಇದು 3 ಹೈಬ್ರಿಡ್‌ ಮತ್ತು 2 ಪೆಟ್ರೋಲ್‌ ಆವೃತ್ತಿಗಳಲ್ಲಿ ಮಾರಾಟವಾಗಲಿದೆ.

ಹೊಸ ಇನ್ನೋವಾ ಹೈಕ್ರಾಸ್ SUV ಯಿಂದ ಪ್ರೇರಣೆಗೊಂಡು ವಿನ್ಯಾಸ ಮಾಡಲಾಗಿದೆ. ಹಾಗಾಗಿ ಇದು ಮೊದಲಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿದೆ. DRLನ ಜೊತೆಗೆ LED ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರಿದ ದಪ್ಪ ಮತ್ತು ಅಗಲವಾದ ಗ್ರಿಲ್ ಹೊಂದಿದೆ. ಬಂಪರ್‌ ವಿಶಾಲವಾಗಿರುವುದರಿಂದ ಗಾಳಿಯನ್ನು ಚೆನ್ನಾಗಿ ಪಡೆಯುತ್ತದೆ. ಇದನ್ನು ಕ್ರಿಸ್ಟಾಗೆ ಹೋಲಿಸಿದಾಗ ಹೆಚ್ಚಿನ ಇಳಿಜಾರಾದ ರೂಫ್‌ಲೈನ್‌ ಇರುವುದು ಕಾಣಿಸುತ್ತಿದೆ. ಹೊಸ ಇನ್ನೋವಾ ಹೈಕ್ರಾಸ್‌ ಮಾದರಿಯು 4,755 ಮಿಮೀ ಉದ್ದ, 1,850 ಎಂಎಂ ಅಗಲ ಮತ್ತು 1,795 ಎಂಎಂ ಎತ್ತರವನ್ನು ಹೊಂದಿದೆ. ಹೊಸ ಇನ್ನೋವಾ ಹೈಕ್ರಾಸ್‌ ಮೊನೊಕಾಕ್‌ ಪ್ಲಾಟ್‌ಫಾರ್ಮ್‌ ಅನ್ನು ಬೆಂಬಲಿಸುತ್ತದೆ. ಮೊನೊಕಾಕ್‌ನಿಂದಾಗಿ ಇದು 200 ಕೆಜಿ ತೂಕವನ್ನು ಕಳೆದುಕೊಳ್ಳುವುದರ ಜೊತೆಗೆ ಸುಧಾರಿತ ನಿರ್ವಹಣೆಗೂ ಸಹಾಯವಾಗಿದೆ.

ಕ್ಯಾಬಿನ್ ಸಂಪೂರ್ಣವಾಗಿ ಹೊಸತನ ಪಡೆದಿದೆ. ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸವು ಫ್ಲೋಟಿಂಗ್‌ ಟಚ್‌ಸ್ಕ್ರೀನ್, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆ್ಯಪಲ್‌ ಕಾರ್‌ ಪ್ಲೇ ಮತ್ತುಆಂಡ್ರಾಯ್ಡ್ ಆಟೋ ಬೆಂಬಲಿಸುತ್ತದೆ. ಇದು ಒರಗುವ ಹಿಂಬದಿ ಸೀಟುಗಳು, ಡ್ಯುಯಲ್-ಟೋನ್ ಕಂದು ಮತ್ತು ಕಪ್ಪು ಒಳಭಾಗ, ಕಪ್ ಹೋಲ್ಡರ್‌ಗಳು ಮತ್ತು ಹಿಂಬದಿಯ ಸೀಟ್‌ನವರಿಗೆ ಟ್ರೇ, ಗಾಳಿಯಾಡುವ ಸೀಟ್‌ಗಳು, ಚಾಲಿತ ಟೈಲ್‌ಗೇಟ್, ಮೂಡ್ ಲೈಟಿಂಗ್, ಕ್ಯಾಪ್ಟನ್ ಸೀಟ್‌ಗಳೊಂದಿಗೆ ಐಚ್ಛಿಕ ಆರು ಆಸನಗಳ ರೂಪಾಂತರ, ಪನೋರಮಿಕ್‌ ಸನ್‌ರೂಫ್ , ರೂಫ್-ಮೌಂಟೆಡ್ AC ವೆಂಟ್‌ಗಳು ಮತ್ತು ಬಣ್ಣದ MID ಜೊತೆಗೆ ಹೊಸ ಇನ್ಸ್ಟ್ರುಮೆಂಟ್ ಕನ್ಸೋಲ್ ಹೊಂದಿದೆ. ಇನ್ನೋವಾ ಹೈಕ್ರಾಸ್ ಟೊಯೋಟಾ ಸೇಫ್ಟಿ ಸೆನ್ಸ್‌ನೊಂದಿಗೆ ಬರಲಿದೆ. ಇದು ಮೂಲತಃ ADAS ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ, MPV ಆರು ಏರ್ಬ್ಯಾಗ್‌ಗಳಿ ಇದರಲ್ಲಿರಲಿದೆ. ಡ್ರೈವರ್ ಅಸಿಸ್ಟೆಂಟ್ ಸಿಸ್ಟಂ ಅನ್ನು ಹೊಂದಿರುವ ಟೊಯೊಟಾದ ಮೊದಲ ಕಾರು ಇದಾಗಿದೆ.

ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್‌ನಲ್ಲಿ ಹೊಸ ಪೆಟ್ರೋಲ್-ಹೈಬ್ರಿಡ್ ಎಂಜಿನ್‌ನಲ್ಲಿ ಪವರ್‌ಟ್ರೇನ್ ರೂಪದಲ್ಲಿ ಬರಲಿದೆ. ನ್ಯೂ–ಜೆನ್‌ ಆವೃತ್ತಿಯು ಹೊಸದಾಗಿ ಅಭಿವೃದ್ದಿಪಡಿಸಿದ 2.0 ಲೀಟರ್‌ ಪೆಟ್ರೋಲ್‌ ಎಂಜಿನ್‌ ಮತ್ತು 2.0 ಲೀಟರ್‌ ಪೆಟ್ರೋಲ್‌–ಹೈಬ್ರಿಡ್‌ ಮೋಟಾರ್‌ನಲ್ಲಿ ಬರಲಿದೆ. ARAIn ಪ್ರಕಾರ ಇದರ ಇಂಧನ ದಕ್ಷತೆಯು ಪ್ರತಿಲೀಟರ್‌ಗೆ 21.1 ಕಿ.ಮಿ. ಎಂದು ರೇಟ್‌ ಮಾಡಲಾಗಿದೆ. ಇದರ ಅರ್ಥ ಒಮ್ಮೆ ಇಂಧನ ಟ್ಯಾಂಕ್‌ ಪೂರ್ತಿ ಮಾಡಿದರೆ ಇದು 1097 ಕಿಮೀ ಚಲಿಸಬಹುದಾಗಿದೆ.

ಇದನ್ನೂ ಓದಿ :ISRO : ಓಷನ್‌ಸ್ಯಾಟ್‌ ಮತ್ತು ಇತರೆ 8 ಉಪಗ್ರಹಗಳನ್ನು ಇಂದು ಐತಿಹಾಸಿಕವಾಗಿ ಉಡಾವಣೆ ಮಾಡಿದ ಇಸ್ರೋ

ಇದನ್ನೂ ಓದಿ : Royal Enfield : ಹೊಸ ಅವತಾರದಲ್ಲಿ ಬಿಡುಗಡೆಯಾದ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌

(Toyota Innova Hycross launched in India. Know the specifications)

Comments are closed.