ಕಣ್ಣೇ ಅದಿರಿಂದಿ ಗಾಯಕಿಯ ಕನ್ನಡ ಪ್ರೇಮ….!!ಕೈ ಎತ್ತಿ ಮುಗಿವೆ ಕರುನಾಡ ಪ್ರೇಮಕ್ಕೆ ಎಂದ ಮಂಗ್ಲಿ…!!

ಕನ್ನಡ ಮಣ್ಣಿನ ಗುಣದಲ್ಲೇ ಎಲ್ಲರನ್ನು ಪ್ರೀತಿಸುವ ವೈಶ್ಯಾಲತೆ ಮೇಳೈಸಿದೆ. ಕನ್ನಡಿಗರ ಪ್ರೇಮದ ಸವಿಯುಂಡ ತೆಲುಗು ಗಾಯಕಿ ಮಂಗ್ಲಿ ಇದಕ್ಕೆ ಸಾಕ್ಷಿ ಒದಗಿಸಿದ್ದಾರೆ. ಕನ್ನಡಿಗರು ತೋರಿದ ಆದರಾಭಿಮಾನಕ್ಕೆ ಮನಸೋತ ಮಂಗ್ಲಿ ಕೈಎತ್ತಿ ಮುಗಿವೆ ಕರುನಾಡ ಪ್ರೇಮಕ್ಕೆ ಎಂದಿದ್ದಾರೆ.

ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಕಣ್ಣೇ ನಿಲ್ಲವಲದು ಹಾಡಿನ ತೆಲುಗು ರೂಪ ಕಣ್ಣೇ ಅದಿರಿಂದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಈ ಹಾಡಿಗೆ ಧ್ವನಿಯಾದ ತೆಲುಗಿನ ಪ್ರಸಿದ್ಧ ಗಾಯಲಿ ಮಂಗ್ಲಿ, ಈಗ ದೇಶದಲ್ಲಿ ಮನೆಮಾತು.

ಇಂತಿಪ್ಪ ಮಂಗ್ಲಿ ಇತ್ತೀಚಿಗೆ ರಾಯಚೂರಿನ ಮಸ್ಕ ಉಪಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸಿದ್ದರು. ಕಂಚಿನ ಕಂಠದ ಈ ಗಾಯಕಿಗೆ ಜನಸ್ತೋಮವೇ ನೆರೆದು ಸ್ವಾಗತ ನೀಡಿತ್ತು. ಈ ಕನ್ನಡಿಗರ ಅಪಾರ ಪ್ರೇಮ ಕಂಡು ಮನತುಂಬಿ ಬಂದಿರೋ ಮಂಗ್ಲಿ ಕನ್ನಡದಲ್ಲೇ ಟ್ವೀಟ್ ಮಾಡೋ ಕನ್ನಡಿಗರ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.

ಮಸ್ಕಿ ಭಾಗದಲ್ಲಿ ಬಂಜಾರಾ ಸಮುದಾಯದ ಜನರು ಹೆಚ್ಚಿದ್ದು,  ಆ ಭಾಗದಲ್ಲಿ ಮಂಗ್ಲಿಯಿಂದ ಪ್ರಚಾರ ಮಾಡಿಸಿದ ಬಿಜೆಪಿ  ಪ್ರತಾಪ್ ಗೌಡ್ ಪಾಟೀಲ್ ಪರ ಮತಯಾಚನೆ ಮಾಡಿಸಿತ್ತುಇದಲ್ಲದೇ ಚಿತ್ರದುರ್ಗ ದಿಂದ ಬಳ್ಳಾರಿಗೆ ಚಲಿಸುವ ಖಾಸಗಿ ಬಸ್ ವೊಂದರಲ್ಲಿ ಮಂಗ್ಲಿಯವರ ಭಾವಚಿತ್ರ ಹಾಕಲಾಗಿದೆ.

https://twitter.com/iamMangli/status/1383837874110427149?s=1002

ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಪೋಟೋದ ಜೊತೆ ಟ್ವೀಟ್ ಮಾಡಿರೋ ಮಂಗ್ಲಿ, ಕೈ ಎತ್ತಿ ಮುಗಿವೆ ಕರುನಾಡ ಪ್ರೇಮಕ್ಕೆ….ಕರುಣಿಸಲಿ ದೈವ ಮತ್ತಷ್ಟು ಹಾಡೋಕೆ…ನಿಮ್ಮ ಪ್ರೀತಿಯ ಮಂಗ್ಲಿ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ಕಣ್ಣೇ ಅದಿರಿಂದಿ ಬಳಿಕ ಮಂಗ್ಲಿ ಜನಪ್ರಿಯತೆ ದಿಢೀರ್ ಹೆಚ್ಚಿದ್ದು ಹಲವು ಭಾಷೆಗಳಲ್ಲಿ ಮಂಗ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಈಗಾಗಲೇ ಮಂಗ್ಲಿ ಕನ್ನಡ ಹಾಡಿಗೂ ಧ್ವನಿಯಾಗಿದ್ದು, ಕರಿಯಾ ಆಯ್. ಲವ್.ಯೂ ಸಿನಿಮಾದ ಗೀತೆ ಮಂಗ್ಲಿ ಕಂಠದಲ್ಲಿ ಮೂಡಿಬಂದಿದೆ.

Comments are closed.