ಮಂಗಳೂರು : ಪೌರತ್ವತಿದ್ದು ಪಡಿ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆಯಲ್ಲಿ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಕಡಲತಡಿಯಲ್ಲಿ ನಡೆದ ಗೋಲಿಬಾರ್ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿತ್ತು. ಪ್ರಕರಣದ ವಿರುದ್ದ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಆದ್ರೀಗ ‘ಮಂಗಳೂರು ಗೋಲಿಬಾರ್’ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ.

ಪತ್ರಕರ್ತ ರಾ. ಚಿಂತನ್ ಮಂಗಳೂರಿನಲ್ಲಿ ಗೋಲಿಬಾರ್ ನಡೆಯೋದಕ್ಕೆ ನಿಖರ ಕಾರಣಗಳೇನು ?, ಗೋಲಿಬಾರ್ ನಲ್ಲಿ ಮಡಿದ ನೌಶೀನ್ ಕುದ್ರೋಳಿ, ಜಲೀಲ್ ಕಂದಕ್ ಅವರ ಬದುಕಿನ ಚಿತ್ರಣ. ಗೋಲಿಬಾರ್ ಹಿಂದಿರೋ ಕೈವಾಡ ಯಾರದ್ದು ? ಗೋಲಿಬಾರ್ ಪ್ರಕರಣದಲ್ಲಿ ಪೊಲೀಸರ ವೈಫಲ್ಯಗಳೇನು ? ರಾಜ್ಯ ಸರಕಾರ ಕೈಗೊಂಡ ಕ್ರಮಗಳೇನು ? ಹೀಗೆ ಹತ್ತು ಹಲವು ವಿಚಾರಗಳ ಕುರಿತು ಇಂಚಿಂಚು ಮಾಹಿತಿಯನ್ನೂ ಬಿಚ್ಚಿಟ್ಟಿದ್ದಾರೆ.

ಮಂಗಳೂರು ಗೋಲಿಬಾರ್ ವಿಚಾರವಾಗಿ ಜನರನ್ನು ಕಾಡುತ್ತಿದ್ದ ಹಲವು ಪ್ರಶ್ನೆಗಳಿಗೆ ಮಂಗಳೂರು ಗೋಲಿಬಾರ್ ಪುಸ್ತಕದ ರೂಪದಲ್ಲಿ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಪತ್ರಕರ್ತ ಚಿಂತನ್ ಮಾಡಿದ್ದಾರೆ.

ಗೋಲಿಬಾರ್ ನ ಇಂಚಿಂಚು ಮಾಹಿತಿಯನ್ನು ಹೊತ್ತಿರುವ ಮಂಗಳೂರು ಗೋಲಿಬಾರ್ ಪುಸ್ತಕ ಹಲವು ಕುತೂಹಲಗಳನ್ನು ಹುಟ್ಟುಹಾಕಿದೆ. ಕಡಲ ನಗರಿಯಲ್ಲಿ ನಡೆದ ಗೋಲಿಬಾರ್ ನ ನಿಜ ದರ್ಶನವನ್ನು ಮಾಡಲಿರುವ ಮಂಗಳೂರು ಗೋಲಿಬಾರ್ ಪುಸ್ತಕ ನಾಳೆ ಮಂಗಳೂರಿನ ತುಂಬೆಯಲ್ಲಿ ನಡೆಯಲಿರುವ ಪೌರತ್ವ ಕಾಯ್ದೆ ಹಾಗೂ ರಾಷ್ಟ್ರೀಯ ನೊಂದಣಿ ಕಾಯ್ದೆ ವಿರೋಧಿಸಿ ನಡೆಯಲಿರೋ ಸಮಾವೇಶದಲ್ಲಿ ಬಿಡುಗಡೆಯಾಗಲಿದೆ.