ಹೊಸಪೇಟೆ ಅಪಘಾತದ ಸುತ್ತ ಅನುಮಾನದ ಹುತ್ತ : ಇಬ್ಬರನ್ನು ಬಲಿಪಡೆದ್ರಾ ಸಚಿವ ಆರ್.ಅಶೋಕ್ ಪುತ್ರ ?

0

ಬಳ್ಳಾರಿ : ಹೊಸಪೇಟೆಯಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದ ಕಾರು ಅಪಘಾತ ಪ್ರಕರಣ ಇದೀಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಘಟನೆ ನಡೆದು ಮೂರು ದಿನಗಳ ನಂತರ ಅಪಘಾತವಾದ ಕಾರನ್ನು ಬಿಜೆಪಿಯ ಪ್ರಭಾವಿ ಸಚಿವ ಆರ್.ಅಶೋಕ್ ಪುತ್ರ ಶರತ್ ಚಲಾಯಿಸುತ್ತಿದ್ದ ಅನ್ನೋ ಆರೋಪ ಕೇಳಿಬಂದಿದೆ.

ಹೊಸಪೇಟೆಯ ಮರಿಯಮ್ಮನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೇತುವೆಯ ಮೇಲಿಂದ ವೇಗವಾಗಿ ಬಂದಿದ್ದ ಕೆಎ-05 ಎಂಡಬ್ಸ್ಯ 357 ನಂಬರಿನ ಬೆಂಜ್ ಕಾರು ಇಬ್ಬರನ್ನು ಬಲಿ ಪಡೆದಿದ್ದು, ಅಪಘಾತದಲ್ಲಿ ರವಿ ನಾಯ್ಕ ಹಾಗೂ ಸಚಿನ್ ಎಂಬಿಬ್ಬರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಬೆಂಜ್ ಕಾರು ಸಂಪೂರ್ಣವಾಗು ನುಜ್ಜುಗುಜ್ಜಾಗಿತ್ತು. ಆದರೆ ಪೊಲೀಸರು ಬೆಂಜ್ ಕಾರನ್ನು ಆಡಿ ಕಾರ್ ಅಂತಾ ಬದಲಾಯಿಸಿದ್ದರು. ಅಲ್ಲದೇ ಕಾರು ಚಲಾಯಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಜಾಲಹಳ್ಳಿಯ ರಾಹುಲ್ ಎಂಬಾತನ ವಿರುದ್ದ ಪ್ರಕರಣ ದಾಖಲಿಸಿದ್ದರು.

ಆದ್ರೀಗ ಕಾರನ್ನು ಚಲಾಯಿಸುತ್ತಿದ್ದುದ್ದು ಸಚಿವ ಆರ್.ಅಶೋಕ್ ಅವರ ಪುತ್ರ ಶರತ್ ಅನ್ನೋ ಆರೋಪ ಇದೀಗ ಕೇಳಿಬಂದಿದೆ. ಪೊಲೀಸರು ಸಚಿವರ ಮಗನನ್ನು ಪಾರು ಮಾಡುವ ಸಲುವಾಗಿ ರಾಹುಲ್ ವಿರುದ್ದ ಕೇಸು ದಾಖಲಿಸಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ. ಅಲ್ಲದೇ ಅಪಘಾತಕ್ಕೀಡಾಗಿರೋ ಬೆಂಜ್ ಕಾರು ಬೆಂಗಳೂರು ಉತ್ತರ ಹಳ್ಳಿಯ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೆ ಸೇರಿದ್ದಾಗಿದೆ ಅನ್ನೋದು ತಿಳಿದು ಬಂದಿದೆ. ಕಾರಿನಲ್ಲಿ 5 ಮಂದಿ ಯುವಕರಿದ್ದರು. ಯುವಕರು ಗೋವಾ ಪ್ರವಾಸವನ್ನು ಮುಗಿಸಿ ಹಿಂದಿರುಗುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಯುವಕರು ಕುಡಿದ ಮತ್ತಿನಲ್ಲಿದ್ದರು ಎಂದು ತಿಳಿದುಬಂದಿದೆ.

ಘಟನೆ ಬೇಸರ ತರಿಸಿದೆ ಎಂದ ಅಶೋಕ್ : ಅಪಘಾತವಾದ ಕಾರಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. “ಅಪಘಾತದಲ್ಲಿ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಘಟನೆ ನಿಜಕ್ಕೂ ಬೇಸರ ತರಿಸಿದೆ. ಮಂತ್ರಿಯಾಗಿ ನಾನು ಪ್ರತಿಕ್ರಿಯಿಸುತ್ತಿಲ್ಲ. ಕೆಲ ಮಾಧ್ಯಮದಲ್ಲಿ ಕೆಲವು ವಿಚಾರಗಳು ಬಂದಿವೆ. ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಸತ್ಯಾಂಶ ಹೊರಬರುತ್ತದೆ ಎಂಬ ವಿಶ್ವಾಸವಿದೆ. ಕಾನೂನು ಎಲ್ಲರಿಗೂ ಒಂದೇ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ,” ಎಂದು ಆರ್​ ಅಶೋಕ್​ ಹೇಳಿದ್ದಾರೆ.

Leave A Reply

Your email address will not be published.