ಇಂಡಿಯಾ ಪರ ಮತ್ತೆ ಇನ್ಸಿಂಗ್ಸ್ ಆರಂಭಿಸ್ತಾರೆ ಸಚಿನ್ – ಸೆಹ್ವಾಗ್ !

0

ಸಚಿನ್ ತೆಂಡೂಲ್ಕರ್ – ವೀರೇಂದ್ರ ಸೆಹ್ವಾಗ್.. ಭಾರತ ಕಂಡ ಶ್ರೇಷ್ಟಾತಿ ಶ್ರೇಷ್ಟ ಕ್ರಿಕೆಟ್ ಜೋಡಿ. ಸಚಿನ್ – ಸೆಹ್ವಾಗ್ ಇನ್ನಿಂಗ್ಸ್ ಆರಂಭಿಸೋಕೆ ಬಂದ್ರೆ ಸಾಕು ಇಬ್ಬರ ಆಟ ನೋಡೋಕೆ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿರ್ತಾರೆ. ಎದುರಾಳಿಗಳನ್ನು ಮನಬಂದಂತೆ ದಂಡಿಸೋ ಈ ಜೋಡಿಯ ಆಟ ನೋಡೋದೆ ಕಣ್ಣಿಗೆ ಹಬ್ಬ.

ಅಬ್ಬರದ ಆಟದಿಂದಲೇ ಭಾರತ ತಂಡವನ್ನ ಅದೆಷ್ಟೋ ಬಾರಿ ಗೆಲುವಿನ ದಡ ಸೇರಿಸಿದ್ದೂ ಕೂಡ ಇದೇ ಜೋಡಿ. ಸಚಿನ್ – ಸೆಹ್ವಾಗ್ ಇನ್ನಿಂಗ್ಸ್ ಆರಂಭಿಸ್ತಾರೆ ಅಂದ್ರೆ ಸಾಕು ಭಾರತದ ಕ್ರಿಕೆಟ್ ಅಭಿಮಾನಿಗಳಷ್ಟೇ ವಿಶ್ವದ ಕ್ರಿಕೆಟ್ ಪ್ರೇಕ್ಷಕರೇ ತುದಿಗಾಲಿನಲ್ಲಿ ನಿಂತು ಆಟ ನೋಡ್ತಾರೆ.

ಭಾರತೀಯರ ಪಾಲಿಗೆ ಕ್ರಿಕೆಟ್ ದೇವರೆನಿಸಿಕೊಂಡಿರೋ ಸಚಿನ್ ತೆಂಡೂಲ್ಕರ್, ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳುತ್ತಿದ್ದಂತೆಯೇ ಕ್ರಿಕೆಟ್ ಪ್ರೇಮಿಗಳು ನಿರಾಸೆಯನ್ನು ಅನುಭವಿಸಿದ್ದರು.

2013 ರಲ್ಲಿ ಸಚಿನ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ರೆ, 2015ರಲ್ಲಿ ಸೆಹ್ವಾಗ್ ಕ್ರಿಕೆಟ್ ನಿಂದ ದೂರ ಉಳಿದಿದ್ದರು. ಅಂದಿನಿಂದ ಇಂದಿನವರೆಗೆ ಇಬ್ಬರೂ ಜೊತೆಯಾಗಿ ಬ್ಯಾಟ್ ಬೀಸಿದ್ದೇ ಇಲ್ಲಾ.

ಕೆಲ ದಿನಗಳ ಹಿಂದೆಯಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ಸಹಯಾರ್ಥ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬುಷ್ ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯದಲ್ಲಿ ಬ್ಯಾಟ್ ಬೀಸಿದ್ದರು. ಆದ್ರೀಗ ಇಬ್ಬರೂ ಜೊತೆಯಾಗಿ ಇನ್ನಿಂಗ್ಸ್ ಆರಂಭಿಸೋದಕ್ಕೆ ಮುಂದಾಗಿದ್ದಾರೆ.

ರಸ್ತೆ ಸುರಕ್ಷತೆಯ ಜಾಗೃತಿಗಾಗಿ ಮಾರ್ಚ್ 7 ರಿಂದ ಭಾರತದಲ್ಲಿ ಕ್ರಿಕೆಟ್ ಟೂರ್ನಿಯೊಂದನ್ನು ಆಯೋಜಿಸಲಾಗುತ್ತಿದ್ದು, ಸಚಿನ್, ಸೆಹ್ವಾಗ್, ಬ್ರಯಾನ್ ಲಾರಾ, ಶಿವನಾರಾಯಣ ಚಂದ್ರಪಾಲ್, ಬ್ರೇಟ್ ಲೀ, ಮುತ್ತಯ್ಯ ಮುರುಳೀಧರನ್, ತಿಲಕರತ್ನ ದಿಲ್ಶಾನ್, ಜಾಕ್ ಕಾಲಿಸ್, ಜಾಂಟಿ ರೋಡ್ಸ್ ಸೇರಿದಂತೆ ವಿಶ್ವದ ಖ್ಯಾತನಾಮ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರಸ್ತೆ ಸುರಕ್ಷತೆಯ ಕುರಿತ ವಿಶ್ವ ಟೂರ್ನಿಯಲ್ಲಿ ಒಟ್ಟು 11 ಪಂದ್ಯಗಳು ನಡೆಯಲಿದ್ದು, ಇಂಡಿಯಾ ಲೆಜೆಂಡ್ಸ್, ವೆಸ್ಟ್ ಇಂಡಿಸ್ ಲೆಜೆಂಡ್ಸ್, ಶ್ರೀಲಂಕಾ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್ ಹಾಗೂ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಸಚಿನ್ ನಾಯಕತ್ವದ ಇಂಡಿಯಾ ಲೆಜೆಂಡ್ಸ್ ತಂಡದಲ್ಲಿ ಸೆಹ್ವಾಗ್ ಆಡಲಿದ್ದು, ಸಚಿನ್ ಜೊತೆ ಇನ್ಸಿಂಗ್ ಆರಂಭಿಸಲಿದ್ದಾರೆ.

ಟೂರ್ನಿಯ ಮೊದಲ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇಂಡಿಯಾ ಲೆಜೆಂಡ್ಸ್ ತಂಡ ವೆಸ್ಟ್ ಇಂಡಿಸ್ ಲೆಜೆಂಡ್ಸ್ ತಂಡವನ್ನು ಎದುರಿಸಲಿದೆ. ಮುಂಬೈ, ಪುಣೆಯಲ್ಲಿ ಪಂದ್ಯಾಟಗಳು ನಡೆಯಲಿದೆ.

ಹಲವು ವರ್ಷಗಳಿಂದಲೂ ಸಚಿನ – ಸೆಹ್ವಾಗ್ ಜೋಡಿ ಆಟವನ್ನು ಮಿಸ್ ಮಾಡಿಕೊಂಡ ಅಭಿಮಾನಿಗಳು ಮತ್ತೊಮ್ಮೆ ಈ ಜೋಡಿಯ ಆರ್ಭಟ ನೋಡೋದಕ್ಕೆ ಕಾತರರಾಗಿದ್ದಾರೆ.

Leave A Reply

Your email address will not be published.