ಪೇಶಿಯಲ್ ಎಡವಟ್ಟಿನಿಂದ ಪೇಸ್ ಹಾಳುಮಾಡಿಕೊಂಡ ನಟಿ..! ಸೋಷಿಯಲ್ ಮೀಡಿಯಾದಲ್ಲಿ ಪೋಟೋವೈರಲ್…!

ಸೌಂದರ್ಯ ಹೆಚ್ಚಿಸಿಕೊಳ್ಳೋ ಆಸೆಗೆ ಬ್ಯೂಟಿಫಾರ್ಲರ್ ಗೆ ಹೋದ ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ  ಇರೋ ಮುಖದ ಅಂದವನ್ನು ಕಳೆದುಕೊಂಡಿದ್ದಾರೆ. ಪೇಶಿಯಲ್ ಮಾಡಿಸಿಕೊಳ್ಳೋಕೆ ಹೋಗಿ ಪೇಸ್ ಬ್ಯೂಟಿ ಕಳೆದುಕೊಂಡ ಸುಂದರಿ  ಪೇಸ್ ಬುಕ್ ನಲ್ಲಿ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.

ತಮಿಳು ನಟಿ ಹಾಗೂ ತಮಿಳು ಬಿಗ್ ಬಾಸ್ ಸ್ಪರ್ಧಿ ರೈಜಾ ವಿಲ್ಸನ್ ಇತ್ತೀಚಿಗೆ ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳೋಕೆ ಪೇಶಿಯಲ್ ಮೊರೆ ಹೋಗಿದ್ದರು. ಬ್ಯೂಟಿಫಾರ್ಲರ್ ಸೌಂದರ್ಯ ತಜ್ಞೆ ಇರೋ ಸೌಂದರ್ಯವನ್ನು ಹೆಚ್ಚಿಸೋದಾಗಿ ಪೇಶಿಯಲ್ ಮಾಡಿಸಿದ್ದರಂತೆ. ಆದರೆ ಪಾರ್ಲರ್ ನಿಂದ ಮನೆಗೆ ಬರುತ್ತಿದ್ದಂತೆ ರೈಜಾ ಮುಖ ಊದಿಕೊಂಡಿದೆ.

ಅಷ್ಟೇ ಅಲ್ಲ ರೈಜಾ ಮುಖ ಕುಂಬಳಕಾಯಿಯಂತೆ ಊದಿಕೊಂಡಿದ್ದು, ಕಣ್ಣಿನ ಕೆಳಭಾಗದಲ್ಲಿ ಕಪ್ಪು ಕಲೆ ಉಂಟಾಗಿ ಮುಖದ ಗುರುತೇ ಸಿಗದಂತಾಗಿದೆ. ಮುಖದ ಈ ಅವತಾರ ನೋಡಿ ಕಂಗೆಟ್ಟ ರೈಜಾ ಆ ಸೌಂದರ್ಯ ತಜ್ಞೆಗೆ ಪೋನ್ ಮಾಡಿದ್ರೇ  ಆಕೆ ಪೋನ್ ಸ್ವೀಕರಿಸದೇ ನಾಪತ್ತೆಯಾಗಿದ್ದಾರಂತೆ.

ಇದಕ್ಕೆ ಕೋಪಗೊಂಡ ರೈಜಾ ವಿಲ್ಸನ್ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.  ಅಷ್ಟೇ ಅಲ್ಲ ಸೌಂದರ್ಯ ತಜ್ಞೆಯ ವಿವರ ಹಾಗೂ ಕ್ಲಿನಿಕ್ ವಿಳಾಸ ನೀಡಿದ್ದಾರೆ. ಇದನ್ನು ನೋಡುತ್ತಿದ್ದಂತೆ ಹಲವರು ಇದೇ ರೀತಿ ಹೋಗಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲ ಕೆಲವರು ಈ ಬಗ್ಗೆ ಪೊಲೀಸ್ ರಿಗೆ ದೂರು ನೀಡಬೇಕೆಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಪೇಸ್ ವಾಲ್ಯು ಹೆಚ್ಚಿಸಿಕೊಳ್ಳಲು ಹೋದ ರೈಜಾ ವಿಲ್ಸನ್ ಮುಖ ವಿಕಾರವಾಗಿದ್ದು, ನಟಿ ರೈಜಾ ಸಂಕಷ್ಟಕ್ಕಿಡಾಗಿದ್ದಾರೆ.

2017 ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ರೈಜಾ ವಿಲ್ಸನ್ 2018 ರಲ್ಲಿ ತೆರೆಕಂಡ ಪ್ಯಾರ್,ಪ್ರೇಮ್,ಕಾದಲ್ ನಲ್ಲಿ ನಾಯಕಿಯಾಗಿ ಭಡ್ತಿ ಪಡೆದಿದ್ದರು.  ಬಿಗ್ ಬಾಸ್ ನಿಂದ ತಮ್ಮ ಪ್ರಸಿದ್ಧಿ ಹೆಚ್ಚಿಸಿಕೊಂಡಿದ್ದರು.

Comments are closed.