ಮಂಗಳವಾರ, ಏಪ್ರಿಲ್ 29, 2025
HomeBreakingಸಿಂಪಲ್ ಯೋಗಕ್ಕೆ ಬೋಲ್ಡ್ ಟಚ್…! ಶ್ವೇತಾ ಶ್ರೀವಾಸ್ತವ್ ವರ್ಕೌಟ್ ಗೆ ಅಭಿಮಾನಿಗಳು ಫಿದಾ…!!

ಸಿಂಪಲ್ ಯೋಗಕ್ಕೆ ಬೋಲ್ಡ್ ಟಚ್…! ಶ್ವೇತಾ ಶ್ರೀವಾಸ್ತವ್ ವರ್ಕೌಟ್ ಗೆ ಅಭಿಮಾನಿಗಳು ಫಿದಾ…!!

- Advertisement -

ಸಿಂಪಲ್ ಆಗ ಒಂದ ಲವ್ ಸ್ಟೋರಿ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಶ್ವೇತಾ ಶ್ರೀವಾಸ್ತವ್ ಈಗ ಸೋಷಿಯಲ್ ಮೀಡಿಯಾ ಕ್ವೀನ್ ಎನ್ನಿಸಿದ್ದಾರೆ. ತಾಯ್ತನದ ಸವಿಗಳಿಗೆಯನ್ನು ಸಖತ್ ಎಂಜಾಯ್ ಮಾಡ್ತಾ ಮಗಳ ಪ್ರತಿಯೊಂದು ಆಕ್ಟಿವಿಟಿಸ್ ಬಗ್ಗೆನೂ ಸೋಷಿಯಲ್ ಮೀಡಿಯಾಗೆ ಅಪ್ಡೇಟ್ ಮಾಡ್ತಿದ್ದ ಶ್ವೇತಾ ಈಗ ಅರ್ಧಮರ್ಧ ಬಟ್ಟೆ ಧರಿಸಿ ಯೋಗಾಭ್ಯಾಸ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಅನ್ನೋದಕ್ಕಿಂತ ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡೋದನ್ನೆ ಕಾಯಕ ಮಾಡಿಕೊಂಡಂತಿರೋ ನಟಿ ಶ್ವೇತಾ ಶ್ರೀವಾಸ್ತವ್ ಮಗಳ ಪ್ರತಿಯೊಂದು ಚಲನವಲನಗಳನ್ನು ವಿಡಿಯೋ ಮಾಡಿ,ಪೋಟೋ ಮಾಡಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದರು.

ಮಗಳು ಕೊಂಚ ದೊಡ್ಡವಳಾಗುತ್ತಿದ್ದಂತೆ ಪ್ರತಿ ಹಬ್ಬದಲ್ಲೂ ಬೇರೆ ಬೇರೆ ಕಾನ್ಸೆಪ್ಟ್ ನಲ್ಲಿ ಮಗಳ ಜೊತೆ ಪೋಟೋಶೂಟ್ ಮಾಡಿಸಿ ಗಮನ ಸೆಳೆದ ಶ್ವೇತಾ ಶ್ರೀವಾಸ್ತವ್ ಈಗ ಯೋಗದ ಮೊರೆ ಹೋಗಿದ್ದಾರೆ.

ತಾಯ್ತನದ ಬಳಿಕ ಮತ್ತೆ ಫಿಟ್ ಆಗೋದು ಹೇಗೆ, ಬೊಜ್ಜು ಕರಗಿಸಿ ಕೊಳ್ಳೋದು ಹೇಗೆ, ದೇಹದ ಸೌಂದರ್ಯ ಕಾಪಾಡಿಕೊಳ್ಳೋದು ಹೇಗೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಯೋಗ ಎಂದಿರೋ ಶ್ವೇತಾ ಮಗಳ ಜೊತೆ ಜೊತೆಗೆ ಯೋಗ ಮಾಡೋ ಪೋಟೋಸ್ ಹಂಚಿಕೊಂಡಿದ್ದಾರೆ.

ಕೊಂಚ ಎಕ್ಸ್ಪೋಸ್ ಮಾಡೋ ಬಟ್ಟೆಗಳ ಜೊತೆ ಶ್ವೇತಾ ಶ್ರೀವಾಸ್ತವ್ ಯೋಗಾಭ್ಯಾಸ ಹಾಗೂ ವರ್ಕೌಟ್ ಗೆ ತೊಡಗಿದ್ದು, ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇತ್ತೀಚಿಗಷ್ಟೇ ಮತ್ತೆ ನಟನೆಗೆ ಮರಳುತ್ತಿರುವುದಾಗಿ ಘೋಷಿಸಿದ್ದ ಶ್ವೇತಾ ಬಳಿ ಒಟ್ಟು ಮೂರು ಚಿತ್ರಗಳಿದ್ದು, ಇದರಲ್ಲಿ ಒಂದು ಮಹಿಳಾ ಪ್ರಧಾನ ಚಿತ್ರ ಎಂಬುದನ್ನು ಕೆಲದಿನಗಳ ಹಿಂದೆಯಷ್ಟೇ ಹೇಳಿಕೊಂಡಿದ್ದರು.

ಈಗ ನಟನೆಗೆ ಮರಳೋಕೆ ಮತ್ತಷ್ಟು ಫಿಟ್ ಆಗ್ತಿರೋ ಶ್ವೇತಾ ಸಖತ್ ಯೋಗಭ್ಯಾಸದ ಪೋಟೋಸ್ ಮೂಲಕ ಪಡ್ಡೆ ಹೈಕಳ ಮೈಬಿಸಿ ಏರಿಸಿದ್ದಾರೆ ಎಂದರೆ ತಪ್ಪಿಲ್ಲ.  

RELATED ARTICLES

Most Popular