ಯುಗಾದಿಯಂದೇ ಸಿಹಿಸುದ್ದಿ ನೀಡಿದ ದೊಡ್ಮನೆ…! ರೌಡಿಸಂ ಲುಕ್ ನಲ್ಲಿ ವಿನಯ್ ರಾಜಕುಮಾರ್ ಹೊಸಚಿತ್ರ ಅನೌನ್ಸ್…!!

ಯುಗಾದಿ ಹಬ್ಬದಂದೇ ಸ್ಯಾಂಡಲ್ ವುಡ್ ದೊಡ್ಮನೆಯಿಂದ ಎರಡು ಸಿಹಿಸುದ್ದಿ ಹೊರಬಿದ್ದಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಲೂಸಿಯಾ ಪವನ್ ಹೊಸಸಿನಿಮಾ ಅನೌನ್ಸ್ ಮಾಡಿದ್ರೇ, ಡಾ.ರಾಜ್ ಮೊಮ್ಮಗ ಮೊದಲನೇ ಬಾರಿ ರೌಡಿಸಂ ಲುಕ್ ನಲ್ಲಿ ಪೆಪೆಗೆ ಸಿದ್ಧ ಎಂದಿದ್ದಾರೆ.

ನಟ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜಕುಮಾರ್ ಬಹುದಿನಗಳ ನಂತರ ಮತ್ತೊಂದು ಸಿನಿಮಾಗೆ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ. ಶ್ರೀಲೇಶ್ ನಾಯರ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾಗೆ ಪೆಪೆ ಎಂದು ಹೆಸರಿಡಲಾಗಿದ್ದು, ಉದಯಶಂಕರ್ ಎಸ್ ಹಾಗೂ ನಿಜಗುಣಸ್ವಾಮಿ ನಿರ್ಮಿಸುತ್ತಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಫೇಸ್ ಬುಕ್ ನಲ್ಲಿ ಈ ಸಿಹಿಸುದ್ದಿಯನ್ನು ವಿನಯ್ ರಾಜಕುಮಾರ್ ಪೆಪೆ ಫರ್ಸ್ಟ್ ಲುಕ್ ಪೋಸ್ಟರ್ ಜೊತೆ ಹಂಚಿಕೊಂಡಿದ್ದಾರೆ. ಪೆಪೆ ಪೋಸ್ಟರ್ ನಲ್ಲಿ ವಿನಯ್ ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ವಿನಯ್ ರಾಜಕುಮಾರ್ ರೌಡಿಸಂ ಪಾತ್ರದಲ್ಲಿ ನಟಿಸಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗುತ್ತಿದೆ.

ಈಗಾಗಲೇ ಸಿದ್ಧಾರ್ಥ್, ನುಸ್ರುತ್ ಮತ್ತು ಅನಂತು,ರನ್ ಆಂಟ್ಯನಿ ಸಿನಿಮಾಗಳಿಂದ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಢಿಸಿರುವ ವಿನಯ್ ರಾಜಕುಮಾರ್ ಮುಂದಿನ ಸಿನಿಮಾ ಪೋಸ್ಟರ್ ನಿಂದಲೇ ಗಮನ ಸೆಳೆದಿದ್ದು, ಇನ್ನೇನು ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗುತ್ತಿದೆ.

ಕೊರೋನಾ ಎರಡನೇ ಅಲೆ ಜೋರಾಗುತ್ತಿರುವ ಬೆನ್ನಲ್ಲೇ ಸ್ಯಾಂಡಲ್ ವುಡ್ ನಲ್ಲಿ ಒಂದೊಂದೆ ಸಿನಿಮಾಗಳು ಅನೌನ್ಸ್ ಆಗ್ತಿದ್ದು, ಸಿನಿಮಾಗಳು ಚಿತ್ರೀಕರಣ ಮುಗಿಸಿ ಥಿಯೇಟರ್ ಗೆ  ಬರೋದ್ಯಾವಾಗ ಅಂತ ಪ್ರೇಕ್ಷಕರು ಕಾಯ್ತಿದ್ದಾರೆ. ಆದರೆ ಚಿತ್ರೀಕರಣಕ್ಕೆ ಮಾತ್ರ ಕೊರೋನಾವೇ ಅಡ್ಡಿಯಾಗೋ ಸಾಧ್ಯತೆಯೂ ಇದೆ.

Comments are closed.