ನವದೆಹಲಿ : ಭಾರತ ಸರಕಾರದಿಂದ ನೀಡಲಾಗುವ ಪದ್ಮಶ್ರೀ ಪ್ರಸ್ತಿಗೆ ಆಯ್ಕೆಯಾಗಿರುವವರ ಹೆಸರುಗಳನ್ನು ಕೇಂದ್ರ ಸರಕಾರ ಘೋಷಿಸಿದೆ. 2020ರ ಸಾಲಿನಲ್ಲಿ ಸುಮಾರು 21 ಮಂದಿಯನ್ನು ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕರ್ನಾಟಕದ ಪರಿಸರ ಪ್ರೇಮಿ ತುಳಸಿ ಗೌಡ, ಅಕ್ಷರಸಂತ ಹರೇಕಳ ಹಾಜಬ್ಬ, ಬಡರೋಗಿಗಳಿಗೆ ನಿತ್ಯವೂ ಊಟ ನೀಡುತ್ತಿದ್ದ ಜಗದೀಶ್ ಜಲ್ ಅಹುಜಾ, 25,000 ಅನಾಥ ಶವಗಳ ಅಂತ್ಯಕ್ರಿಯೆ ಮಾಡಿದ ಮೊಹಮ್ಮದ್ ಶರೀಫ್, ಮುನ್ನ ಮಾಸ್ಟರ್ ಸೇರಿದಂತೆ ಒಟ್ಟು 21 ಮಂದಿಯನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಶೇಷವೆಂದ್ರೆ ಈ ಬಾರಿ ಪ್ರಶಸ್ತಿಗೆ ಆಯ್ಕೆಯಾಗಿರುವ ಎಲ್ಲರೂ ಕೂಡ ಸಮಾಜ ಸೇವಕರು.
ಹರೇಕಳ ಹಾಜಬ್ಬ, ತುಳಸಿಗೌಡ ಸೇರಿ 21 ಮಂದಿಗೆ ಪದ್ಮಶ್ರೀ ಗೌರವ
- Advertisement -