ಹೈದ್ರಾಬಾದ್ : ಅಂಬ್ಯುಲೆನ್ಸ್ ರಸ್ತೆಗೆ ಇಳಿದ್ರೆ ದಾರಿಬಿಟ್ಟುಕೊಡಬೇಕು ಅನ್ನೋದು ನಿಯಮ. ಮಾತ್ರವಲ್ಲ ಮಾನವೀಯತೆ ನೆಲೆಯಲ್ಲಿಯೂ ಅಂಬ್ಯುಲೆನ್ಸ್ ಗೆ ಸುಗಮ ಸಂಚಾರ ಅವಕಾಶ ಮಾಡಿಕೊಡಬೇಕು. ಆದ್ರೆ ಇಲ್ಲೊಂದು ಅಂಬ್ಯುಲೆನ್ಸ್ ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ರೋಗಿಯ ಪ್ರಾಣ ಉಳಿಸಿಲು ಟ್ರಾಫಿಕ್ ಪೊಲೀಸ್ ಮಾಡಿದ ಕಾರ್ಯ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.

ಹೈದ್ರಾಬಾದ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುಮಾರು 2 ಕಿ.ಮೀ. ದೂರದ ವರೆಗೂ ವಾಹನಗಳು ರಸ್ತೆಯಲ್ಲಿಯೇ ಜಾಮ್ ಆಗಿದ್ದವು. ಅದೇ ಹೊತ್ತಲ್ಲೇ ಒಂದು ಅಂಬ್ಯುಲೆನ್ಸ್ ಸೈರನ್ ಹಾಕಿಕೊಂಡು ರಸ್ತೆಗೆ ಇಳಿದಿದೆ. ವಾಹನಗಳನ್ನು ಬದಿ ಸರಿಸಿ ಅಂಬ್ಯುಲೆನ್ಸ್ ಮುಂದಕ್ಕೆ ಸಾಗುವುದು ಕಷ್ಟವೇ ಆಗಿತ್ತು. ಇದರಿಂದಾಗಿ ಅಂಬ್ಯುಲೆನ್ಸ್ ಚಾಲಕ ಪರದಾಡುತ್ತಿದ್ದ.
ಅದೇ ಹೊತ್ತಲ್ಲೇ ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದ ಪೊಲೀಸ್ ಕಾನ್ ಸ್ಟೇಬಲ್ ಬಾಬ್ಡಿ ಅವರ ಕಣ್ಣಿಗೆ ಅಂಬ್ಯುಲೆನ್ಸ್ ಬಿದ್ದಿತ್ತು. ಶತಾಯ ಗತಾಯ ರೋಗಿಯ ಪ್ರಾಣ ಉಳಿಸಲು ಪಣತೊಟ್ಟ ಪೊಲೀಸಪ್ಪ ಬರೋಬ್ಬರಿ ಎರಡೂ ಕಿ.ಮೀ. ದೂರದ ವರೆಗೂ ಓಡಿಕೊಂಡೇ ಟ್ರಾಫಿಕ್ ಕ್ಲಿಯರ್ ಮಾಡುತ್ತಾ ಅಂಬ್ಯುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದಾರೆ.

ಟ್ರಾಫಿಕ್ ಪೊಲೀಸ್ ಬಾಬ್ಡಿ ಅವರ ಈ ಕಾರ್ಯದ ವಿಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದರು. ಸಾಮಾಜಿಕ ಜಾಲಾತಾಣಗಳಲ್ಲಿ ವಿಡಿಯೋ ಬಾರೀ ವೈರಲ್ ಆಗಿದೆ. ಮಾತ್ರವಲ್ಲ ಹೈದ್ರಾಬಾದ್ ಪೊಲೀಸ್ ಇಲಾಖೆ ತನ್ನ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಟ್ರಾಫಿಕ್ ಪೊಲೀಸ್ ಬಾಬ್ಡೆ ಅವರ ಕಾರ್ಯಕ್ಕೆ ಇದೀಗ ಎಲ್ಲೆಡೆಯಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಟ್ರಾಫಿಕ್ ಪೊಲೀಸ್ ಒಬ್ಬರು ಈಗ ಎಲ್ಲರ ಹೃದಯ ಗೆದ್ದಿದ್ದಾರೆ. ಈ ಹೀರೋಗೆ ಎಲ್ಲರೂ ಮೆಚ್ಚುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಇವರೇ ನಿಜವಾದ ಹೀರೋ. ಈ ಹೃದಯವಂತ ಈಗ ಎಲ್ಲರ ಮನಸ್ಸು ಗೆದ್ದಿದ್ದಾರೆ. ತಾನು ಕಷ್ಟಪಟ್ಟರೂ ಬೇರೆಯವರಿಗೆ ಒಳಿತಾಗಬೇಕೆಂಬ ಇವರ ಹೃದಯ ಶ್ರೀಮಂತಿಕೆಗೆ ಈಗ ಎಲ್ಲರೂ ತಲೆಬಾಗಿದ್ದಾರೆ.