ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (06-11-2020)

ಶ್ರೀಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ಷಷ್ಠಿ ತಿಥಿ, ಪುನರ್ವಸು ನಕ್ಷತ್ರ, ಸಾಧ್ಯ ಯೋಗ , ಗರಜ ಕರಣ, ನವೆಂಬರ್ 06 , ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಬೆಳಗ್ಗೆ 5 ಗಂಟೆ 33 ನಿಮಿಷದಿಂದ 7 ಗಂಟೆ 14 ನಿಮಿಷದ ವರೆಗೆ ಇದೆ.

ತುಂಬಾ ಥಂಡಿ ಪ್ರಭಾವದಿಂದ ಶೀನುಗಳು ಬರುತ್ತಿದ್ದರೆ ದೇಹದಲ್ಲಿ ಶಕ್ತಿ ಇಲ್ಲ ಎಂದೆನಿಸುತ್ತದೆ 4ಹೆಜ್ಜೆ ಇಟ್ಟರೆ ಸುಸ್ತಾಗುತ್ತದೆ ಎಂಬುವವರು 2ಕೈಗಳನ್ನು ಈ ಕೆಳಗಿನ ವೀಡಿಯೋದಲ್ಲಿ ತೋರಿಸಿರುವ ಹಾಗೆ ಹಿಡಿದುಕೊಂಡು ಕುಳಿತುಕೊಳ್ಳಿ, ದೇಹ ಇದರಿಂದ ಬಿಸಿಯಾಗುತ್ತದೆ. ನವರಂಧ್ರಗಳನ್ನು ಕೂಡ ಇದು ಪ್ರಚೋದಿಸುತ್ತದೆ. ನವರಂಧ್ರಗಳ ಮೂಲಕವೇ ಕೆಟ್ಟ ಗಾಳಿ ನಮ್ಮ ದೇಹದಿಂದ ಹೊರಗೆ ಹೋಗುತ್ತದೆ.

ನಲವತ್ತು ವಯಸ್ಸು ದಾಟಿದವರೆಲ್ಲರೂ ಪ್ರತಿನಿತ್ಯ 2ಸ್ಪೂನ್ ತುಪ್ಪವನ್ನು ಸೇವಿಸಿ ಇದರಿಂದ ಹೃದಯ ಸಂಬಂಧಿತ ಯಾವುದೇ ರೀತಿಯ ಕಾಯಿಲೆಗಳ ಆಗಲಿ, ಮಂಡಿ ನೋವು ಗಳಾಗಲಿ, ದೂರಾಗುತ್ತದೆ. ಹೃದಯಕ್ಕೆ ಏನೋ ಸಮಸ್ಯೆಯಾಗುತ್ತಿದೆ ಎಂದಾದಲ್ಲಿ ಬೆಳಿಗ್ಗೆ ಎದ್ದ ತಕ್ಷಣ 1ಸ್ಪೂನ್ ಶುದ್ಧ ತುಪ್ಪವನ್ನು ಸೇವಿಸಿ, ಬಿಸಿ ನೀರನ್ನು ಕುಡಿಯಿರಿ. ತಿಂದಂತಹ ಆಹಾರ ಜೀರ್ಣವಾಗದಿದ್ದರೆ, ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗುತ್ತದೆ ಇದಕ್ಕೆ ಉತ್ತಮವಾದ ರಾಮಬಾಣವೆಂದರೆ ಶುದ್ಧವಾದ ತುಪ್ಪವನ್ನು ಸೇವಿಸುವುದು.

ಪದೇ ಪದೆ ಟಾಯ್ಲೆಟ್ಗೆ ಹೋಗುತ್ತಿದ್ದರೆ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ವೀಡಿಯೊದಲ್ಲಿ ತೋರಿಸಿರುವ ಮುದ್ರೆಯನ್ನ ಹಾಕಿಕೊಳ್ಳಿ ಮತ್ತು ಪ್ರತಿನಿತ್ಯ ಶುದ್ಧ ತುಪ್ಪವನ್ನು ಸೇವಿಸಿ ಇದರಿಂದ ಎಲ್ಲಾ ಸಮಸ್ಯೆ ದೂರವಾಗುತ್ತದೆ. ಜೊತೆಗೆ ಹೃದಯವು ಕೂಡ ಆರೋಗ್ಯವಾಗಿರುತ್ತದೆ. ತುಪ್ಪದಿಂದ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ ತುಪ್ಪ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಪ್ರತಿಯೊಬ್ಬರು ಅದರಲ್ಲೂ ಮುಖ್ಯವಾಗಿ ಚಿಕ್ಕಮಕ್ಕಳು ಮತ್ತು ನಲ್ವತ್ತು ವರ್ಷ ದಾಟಿದವರು ಪ್ರತಿನಿತ್ಯ ತುಪ್ಪವನ್ನು ಸೇವಿಸಲೇಬೇಕು.

ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :

ಮೇಷರಾಶಿ
ಚೆನ್ನಾಗಿದೆ ಚಂದ್ರ ಗುರು ಸಾರದಲ್ಲಿದ್ದು, ಗುರು ಸೂರ್ಯನ ಸಾರದಲ್ಲಿ ಇರುವುದರಿಂದ ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳು, ಹಿರಿಯರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿಯಾಗುತ್ತದೆ.

ವೃಷಭರಾಶಿ
ಗೌರ್ನಮೆಂಟ್ ಟ್ಯಾಕ್ಸ್ , ಮಕ್ಕಳ ಸ್ಕೂಲ್ ಫೀಸ್, ಕಾಲೇಜ್ ಫೀಸ್, ತಲೆಬಿಸಿ ಇರುತ್ತದೆ. ರಾಮನ ದೇವಸ್ಥಾನದಲ್ಲಿ ಕಾಬೂಲ್ ಚೆನ್ನಾ ವನ್ನ ಪ್ರಸಾದವಾಗಿ ಮಾಡಿ ಹಂಚಿ ಒಳ್ಳೆಯದಾಗುತ್ತದೆ.

ಮಿಥುನರಾಶಿ
ವಿನಾಯಕನ ದೇವಸ್ಥಾನಕ್ಕೆ ಹೋಗಿ. ತುಂಬಾ ಒಳ್ಳೆಯತನ ಒಳ್ಳೆಯದಲ್ಲ. ಒಳ್ಳೆಯವರಿಗೆ ಬಹು ಬೇಗ ಮೋಸ ಮಾಡುವುದು.

ಕರ್ಕಾಟಕರಾಶಿ
ಕುಟುಂಬಕ್ಕೋಸ್ಕರ ಮನೆಯವರಿಗೋಸ್ಕರ ಖರ್ಚು, ರಾಜಕಾರ್ಯದಲ್ಲಿ ಪ್ರಗತಿ.

ಸಿಂಹರಾಶಿ
ಧರ್ಮ ಅರ್ಥ, ಕಾಮ ಈ ಮೂರರಲ್ಲೂ ವಿಜಯ. ಧರ್ಮಬದ್ಧವಾಗಿ ಹೀಗೆ ನೀವು ಸಂಪಾದನೆ ಮಾಡಿದ್ದೀರೊ ಅದನ್ನು ಯಾವ ರೀತಿ ಖರ್ಚು ಮಾಡುತ್ತೀರೋ ಅದರಲ್ಲಿ ಪ್ರಗತಿ.

ಕನ್ಯಾರಾಶಿ
ಚೆನ್ನಾಗಿದೆ ಸ್ವಂತ ಕೆಲಸ, ಸ್ವಂತ ಬಿಸಿನೆಸ್, ಗ್ರಂಥಿಕೆ, ಬಟ್ಟೆ, ಹೂವು, ಪೂಜಾ ಸಾಮಗ್ರಿಗಳನ್ನು ಮಾರುವ ಕೆಲಸ ಮಾಡುತ್ತಿದ್ದರೆ ಅನುಕೂಲಕರ ದಿನ.

ತುಲಾರಾಶಿ
ಚಂದ್ರ, ಗುರು ಸಾರದಲ್ಲಿ ಇರೋದು ತಲೆನೋವೇ, ಯಾವುದೋ ಹಳೇ ಸಾಲ ಹಳೇ ತಗಾದೆ ನಿಮ್ಮನ್ನು ಸುತ್ತಿಕೊಳ್ಳುತ್ತವೆ ಗೌರ್ಮೆಂಟ್ ಕೆಲಸದಲ್ಲಿದ್ದರೆ ನಿಮಗೆ ತಲೆದಂಡವೇ ಸರಿ.

ವೃಶ್ಚಿಕರಾಶಿ
ಹಣಕಾಸಿನ ಸ್ಥಿತ್ಯಂತರದಲ್ಲಿ ಏರಿಳಿತ ಇರುತ್ತದೆ. ಚೆನ್ನಾಗಿದೆ ಸ್ವಂತ ವ್ಯವಹಾರದಲ್ಲಿ ಪ್ರಗತಿ.

ಧನಸ್ಸುರಾಶಿ
ಕೊಡುವುದು ತೆಗೆದುಕೊಳ್ಳುವ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ಚಂದ್ರಗುರು ಸಾರದಲ್ಲಿ ಇರುವುದರಿಂದ ಸ್ವಲ್ಪ ಅವಮಾನವಾಗುತ್ತದೆ ಆದರೂ ಸೂರ್ಯ ಚೆನ್ನಾಗಿರುವುದರಿಂದ ಅಂದರೆ ಸೂರ್ಯ ಲಾಭ ಸ್ಥಾನದಲ್ಲಿ ಇರುವುದರಿಂದ ಗುರು ಸೂರ್ಯನ ಭಾವದಲ್ಲಿ ಇರುವುದರಿಂದ ಗುರುಚಂದ್ರಯೋಗ ಇರುವುದರಿಂದ ವೃತ್ತಿಪರವಾಗಿ ಒಳ್ಳೆಯ ಗೌರವವನ್ನ ಪಡೆಯುತ್ತೀರಿ. ನೀವು ಹೆಸರನ್ನು ಪಡೆಯುವುದನ್ನು ನೋಡಿ ಹೊಟ್ಟೆ ಉರಿ ಪಟ್ಟುಕೊಳ್ಳುತ್ತಾರೆ ಆದ್ದರಿಂದ ಗಣಪತಿ ಪೂಜೆಯನ್ನ ಮಾಡಿಕೊಳ್ಳಿ ಒಳ್ಳೆಯದಾಗುತ್ತದೆ.

ಮಕರರಾಶಿ
ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರಭದ್ರ ಎಂಬಂತೆ ಯಾವುದೇ ರೀತಿ ಕೊಡುವ ತೆಗೆದುಕೊಳ್ಳುವ ವ್ಯವಹಾರವನ್ನು ಮಾಡಲು ಹೋಗಬೇಡಿ ಸುಮ್ಮನೆ ಇದ್ದುಬಿಡಿ.

ಕುಂಭರಾಶಿ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಇಂದು ನಿಮಗೆ ವಿಶ್ವಾಸ ವಿಸ್ಮಯ ಗುರುವಿನ ಪಾದವನ್ನು ಹಿಡಿದು ಕೊಳ್ಳಿ ಎಲ್ಲವೂ ನಿಮಗೆ ದೊರೆಯುತ್ತದೆ. ಗುರುವಿಗೆ ಮೀರಿದ ಪ್ರೀತಿ, ಆಶೀರ್ವಾದ, ಜ್ಞಾನ, ಬೇರೊಂದಿಲ್ಲ ಅಂತಹ ಶುಭ ಯೋಗದ ದಿನ, ಮುಂದಕ್ಕೆ ಧೈರ್ಯವಾಗಿ ಹೆಜ್ಜೆ ಇಡಿ ಗೆಲುವು ನಿಮ್ಮದೆ.

ಮೀನರಾಶಿ
ಚಂದ್ರ ಗುರು ಸಾರದಲ್ಲಿದ್ದು, ಕೇಂದ್ರದಲ್ಲಿ ಗುರು ಸೂರ್ಯನ ಭಾವದಲ್ಲಿ ರುವುದರಿಂದ ಚೆನ್ನಾಗಿದೆ ಏನಾದರೂ ಕಾಂಪಿಟೇಟಿವ್ ಎಗ್ಸಾಮ್ ಗಳನ್ನು ತೆಗೆದುಕೊಂಡಿದ್ದರೆ ಟೀಚರ್, ಲೆಕ್ಚರರ್, ಪೋಲಿಸ್, ಡಾಕ್ಟರ್ ಆಗಿದ್ದರೆ ಎತ್ತರದ ಸ್ಥಾನಕ್ಕೆ ಹೋಗುವ ಯೋಗವಿದೆ. ಧೈರ್ಯವಾಗಿ ಮುಂದಕ್ಕೆ ಹೆಜ್ಜೆ ಇಡಿ, ವಿನಾಯಕನ ಪೂಜೆ ಮಾಡಿಕೊಳ್ಳಿ.

Comments are closed.