ಮಂಡ್ಯ : ದೇಶಕ್ಕಾಗಿ ಮಡಿದ ವೀರಯೋಧ ಗುರು ಸಾವನ್ನ ಅರಗಿಸಿಕೊಳ್ಳುವುದಕ್ಕೆ ಇಂದಿಗೂ ಸಾಧ್ಯವಾಗುತ್ತಿಲ್ಲ. ಆದರೆ ಗುರು ಕುಟುಂಬದಲ್ಲಿ ಹುಟ್ಟಿಕೊಂಡಿರುವ ಕಲಹ ಇಂದಿಗೂ ತಣ್ಣಗಾಗಿಲ್ಲ. ನಾಳೆ ಯೋಧ ಗುರುವಿನ ಪುಣ್ಯತಿಥಿ, ಆದರೆ ಪತ್ನಿ ಮತ್ತು ತಾಯಿ ಪ್ರತ್ಯೇಕವಾಗಿ ಪೂಜೆ ಸಲ್ಲಿಸಲು ಮುಂದಾಗಿದೆ.

ಪುಲ್ವಾಮಾ ದಾಳಿ ನಡೆದು ಎರಡು ವರ್ಷಗಳು ಕಳೆಯುತ್ತಿವೆ. ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಗುಡಿಗೆರೆಯ ಯೋಧ ಗುರು ಹುತಾತ್ಮರಾಗಿದ್ದರು. ಆ ಕಹಿಘಟನೆಗೆ ದೇಶವೇ ಕಂಬನಿ ಮಿಡಿಯುತ್ತಿದೆ. ಯೋಧ ಗುರು ನಿಧನದ ಬೆನ್ನಲ್ಲೇ ಲಕ್ಷಾಂತರ ರೂಪಾಯಿ ಹಣದ ನೆರವು ಹರಿದು ಬಂದಿತ್ತು. ಇದೇ ವಿಚಾರವಾಗಿ ಪತ್ನಿ ಹಾಗೂ ತಾಯಿಯ ನಡುವೆ ಹುಟ್ಟಿಕೊಂಡಿರುವ ಕಲಹ ಇಂದಿಗೂ ಮುಗಿದಿಲ್ಲ.

ಕಳೆದ ಬಾರಿ ಪುಣ್ಯತಿಥಿಯ ಸಂದರ್ಭದಲ್ಲಿ ಯೋಧ ಗುರು ತಾಯಿ ಹಾಗೂ ಪತ್ನಿ ಪರಸ್ಪರ ಗಂಭೀರ ಆರೋಪಗಳನ್ನು ಮಾಡಿದ್ದರು. ಮಾತ್ರವಲ್ಲ ಪ್ರತ್ಯೇಕವಾಗಿಯೇ ಸಮಾಧಿ ಸ್ಥಳಕ್ಕೆ ಪೂಜೆಯನ್ನೂ ಸಲ್ಲಿಸಿದ್ದಾರೆ. ಈ ಮೂಲಕ ಯೋಧ ಗುರು ಮನೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಜಗಜ್ಜಾಹೀರಾತು ಆಗಿತ್ತು. ಆದರೆ ಕುಟುಂಬ ಕಲಹ ಇಂದಿಗೂ ಕೊನೆಯಾಗಿಲ್ಲ. ಇದೀಗ ನಾಳೆಯೂ ಕೂಡ ಪ್ರತ್ಯೇಕವಾಗಿಯೇ ಸಮಾಧಿ ಪೂಜೆ ನಡೆಸುವ ಸಾಧ್ಯತೆಯಿದೆ.