ಜೂನಿಯರ್ ಚಿರು ಗ್ರ್ಯಾಂಡ್ ಎಂಟ್ರಿ : ನಡುರಾತ್ರಿ ಜಗತ್ತಿಗೆ ಮಗನ ಮುಖ ದರ್ಶನ ಮಾಡಿಸಿದ ಮೇಘನಾ ರಾಜ್

ಚಿರಂಜೀವಿ ಸರ್ಜಾ… ಸ್ಯಾಂಡಲ್ ವುಡ್ ನಟ, ಸರ್ಜಾ ಕುಟುಂಬದ ಕುಡಿ. ಚಿರು ಸರ್ಜಾ ಮಗನ ರೂಪದಲ್ಲಿ ಹುಟ್ಟಿಬಂದಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಜೂನಿಯರ್ ಚಿರುವನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಜನರಿಗೆ ಇದೀಗ ಚಿರು ಪತ್ನಿ ಮೇಘನಾ ರಾಜ್ ಗಿಫ್ಟ್ ಕೊಟ್ಟಿದ್ದಾರೆ.

https://youtu.be/z0SKS_GpF90

ನಡುರಾತ್ರಿ 12 ಗಂಟೆಗೆ ಮೇಘನಾ ರಾಜ್ ಜೂನಿಯರ್ ಚಿರುವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ವಿಭಿನ್ನವಾಗಿರುವ ವಿಡಿಯೋವೊಂದನ್ನು ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಮೇಘನಾ ಜೂನಿಯರ್ ಚಿರುವನ್ನು ಸಿಂಬಾನೆಂದು ವಿಡಿಯೋದಲ್ಲಿ ತೋರಿಸಿ ಎಲ್ಲರಿಗೂ ಪರಿಚಯಿಸಿದ್ದಾರೆ.

ಮೇಘನಾ ರಾಜ್ ಸರ್ಜಾ ಗಂಡು ಮಗುವಿಗೆ ಜನ್ಮ ನೀಡುತ್ತಿದ್ದಂತೆಯೇ ಚಿರಂಜೀವಿ ಸರ್ಜಾ ಮತ್ತೆ ಹುಟ್ಟಿಬಂದಿದ್ದಾರೆ ಅಂತಾ ಅಭಿಮಾನಿಗಳು ಸಂಭ್ರಮಿಸಿದ್ದರು. ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬದವರು ಕೂಡ ಸಂತಸದ ಅಲೆಯಲ್ಲಿ ತೇಲಾಡಿದ್ದರು. ಆದರೂ ಮೂರು ತಿಂಗಳಿನಿಂದಲೂ ಕೂಡ ಜೂನಿಯರ್ ಚಿರು ಮುಖವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ನಡುವಲ್ಲೇ ಮೇಘನಾ ರಾಜ್ ಸಪ್ರೈಸ್ ಕೊಟ್ಟಿದ್ದು, ಫೆ.14ರ ಮಧ್ಯರಾತ್ರಿ ತನ್ನ ಮಗನ ಮುಖದರ್ಶನ ಮಾಡಿಸಿದ್ದಾರೆ.

https://youtu.be/z0SKS_GpF90

ಮೇಘನಾ ಬಿಡುಗಡೆ ಮಾಡಿರುವ ವಿಡಿಯೋ ತುಂಬಾನೆ ವಿಭಿನ್ನವಾಗಿದೆ. ಮೇಘನರಾಜ್ ಸರ್ಜಾ ಚಿರಂಜೀವಿ ಸರ್ಜಾ ಎಂಗೇಜ್ ಮೆಂಟ್ ನಿಂದ ಆರಂಭಗೊಳ್ಳುವ ವಿಡಿಯೋ ಜೂನಿಯರ್ ಚಿರು ಭರ್ಜರ ಎಂಟ್ರಿಯೊಂದಿಗೆ ಕೊನೆಗೊಳ್ಳುತ್ತೆ. ಚಿರು ಇಲ್ಲಾ ಅನ್ನೋ ನೋವು ಕಾಡುವ ಹೊತ್ತಲೇ ಜೂನಿಯರ್ ಎಂಟ್ರಿ ಅಭಿಮಾನಿಗಳಿಗೆ ಖಷಿಕೊಟ್ಟಿದೆ.

ಕೊರೊನಾ ಲಾಕ್ ಡೌನ್ ನಡುವಲ್ಲೇ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಪಯಣಿಸಿದ್ದರು. ಚಿರು ಅಗಲುವಿಕೆಯ ನಡುವಲ್ಲೇ ಮೇಘನಾ ರಾಜ್ ಗುಡ್ ನ್ಯೂಸ್ ಕೊಟ್ಟಿದ್ದು, ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತೊಟ್ಟಿಲು ಶಾಸ್ತ್ರವನ್ನ ಅದ್ದೂರಿಯಾಗಿಯೇ ನಡೆಸಿದ್ದ ಮೇಘನಾ ಸಿನಿಮಾ ರಂಗಕ್ಕೆ ಮತ್ತೆ ಎಂಟ್ರಿಕೊಡುವುದಾಗಿಯೂ ಘೋಷಣೆ ಮಾಡಿದ್ದರು.

https://youtu.be/z0SKS_GpF90

ಮಗನಲ್ಲಿ ಚಿರುವನ್ನು ಕಾಣುತ್ತಿರೋ ಮೇಘನಾ ರಾಜ್ ಹಾಗೂ ಮಗುವಿಗೆ ಒಳಿತಾಗಲಿ ಅಂತಾ ಅಸಂಖ್ಯಾತ ಅಭಿಮಾನಿಗಳು ಹಾರೈಸುತ್ತಿದ್ದಾರೆ.

https://www.instagram.com/p/CLPhPpHFckM/

Comments are closed.