ಬೆಳಗಾವಿ : ಕೇವಲ 24 ಗಂಟೆಗಳ ಅವಧಿಯಲ್ಲಿ 5 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಟಾಪ್ 5 ಸ್ಥಾನದಲ್ಲಿರುವ ಶಾಸಕರೇ ಬಿಜೆಪಿಗೆ ಬರೋದಕ್ಕೆ ರೆಡಿಯಾಗಿದ್ದಾರೆ. ಯಾರೆಲ್ಲಾ ಬಿಜೆಪಿ ಸೇರುತ್ತಾರೆ ಅನ್ನೋದನ್ನು ಕೇಳಿದ್ರೆ ನೀವು ಗಾಬರಿಯಾಗುತ್ತೀರಿ. ನಾನು ಮನಸ್ಸು ಮಾಡಿದ್ರೆ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುತ್ತೇವೆ ಎಂದು ಸಚಿವ ರಮೇಶ್ ಜಾರಕಿಹೊಳಿಎ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ತಾನೂ ಇಂದಿಗೂ ಕಾಂಗ್ರೆಸ್ ಪಕ್ಷದಲ್ಲಿ ಪ್ರಾಬಲ್ಯವನ್ನು ಹೊಂದಿದ್ದೇನೆ. ನಾನು ಮನಸ್ಸು ಮಾಡಿದ್ರೆ ಶಾಸಕರ ರಾಜೀನಾಮೆ ಕೊಡಿಸೋದು ದೊಡ್ಡ ಕೆಲಸವಲ್ಲ. ಕಾಂಗ್ರೆಸ್ ನಲ್ಲಿ ನಾವೆಲ್ಲಾ ಮೂಲೆಗುಂಪಾಗಿದ್ವಿ. ಇದೀಗ 17 ಶಾಸಕರೂ ಒಟ್ಟಾಗಿದ್ದೇವೆ. ಅಲ್ಲದೇ ಬಿಜೆಪಿಯಲ್ಲಿ ಸಂತೋಷವಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಸಿದ್ದರಾಮಯ್ಯ ನಮ್ಮ ನಾಯಕ. ಇಂದಿಗೂ ಸಿದ್ದರಾಮಯ್ಯ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದೇವೆ. ದಿನದಲ್ಲಿ 2 ಬಾರಿ ಕರೆ ಮಾಡಿ ಮಾತನಾಡುತ್ತೇವೆ ಎಂದಿದ್ದಾರೆ.