2ನೇ ಟೆಸ್ಟ್ ಪಂದ್ಯ : ಅಲ್ಪ ಮೊತ್ತಕ್ಕೆ ಮುಗ್ಗಿರಿಸಿದ ಇಂಗ್ಲೆಂಡ್

ಚೆನ್ನೈ : ಭಾರತ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಅಲ್ಪಮೊತ್ತಕ್ಕೆ ಕುಸಿತ ಕಂಡಿದೆ. ಭಾರತ ನೀಡಿದ್ದ 329 ರನ್ ಬೆನ್ನತ್ತಿದ ಇಂಗ್ಲೆಂಡ್ ಕೇವಲ 134 ರನ್ ಗಳಿಗೆ ಸರ್ಪ ಪತನ ಕಂಡಿದೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ರೋಹಿತ್ ಶರ್ಮಾ ಶತಕ ಸಿಡಿಸಿ ನೆರವಾಗಿದ್ದರು. ರೋಹಿತ್ ಶರ್ಮಾ 161, ಅಜ್ಯಂಕೆ ರಹಾನೆ 67 ಹಾಗೂ ವೃಷಬ್ ಪಂತ್ 58 ರನ್ ನೆರವಿನಿಂದ ಭಾರತ 329 ರನ್ ಗಳಿಗೆ ಆಲೌಟಾಗಿತ್ತು. ಇಂಗ್ಲೆಂಡ್ ಪರ ಮೋಯಿನ್ ಆಲಿ 4, ಸ್ಟೋನ್ 3 ಹಾಗೂ ಜಾಕ್ ಲೀಚ್ 2 ವಿಕೆಟ್ ಪಡೆದರು.

ನಂತರ ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ತಂಡಕ್ಕೆ ಇಶಾಂತ್ ಶರ್ಮ ಆರಂಭಿಕ ಆಘಾತ ನೀಡಿದ್ರು. ಆರಂಭಿಕ ರಾಯ್ ಬರ್ನ್ಸ್ ರನ್ನು ಸೊನ್ನೆಗೆ ಎಲ್ ಬಿ ಬಲೆಗೆ ಬೀಳಿಸಿದ್ರೆ, ಡೇನಿಯಲ್ ಲಾವರೆನ್ಸ್ ಗೆ ಅಶ್ವಿನ್ ಪೆವಿಲಿಯನ್ ಹಾದಿ ತೋರಿಸಿದ್ರು. ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಶ್ವಿನ್ ಎರಡನೇ ಟೆಸ್ಟ್ ನಲ್ಲಿಯೂ ಸ್ಪಿನ್ ಮೋಡಿ ಮಾಡಿದ್ದಾರೆ. 23 ಓವರ್ ಗಳ್ಲಿ ಕೇವಲ 43 ರನ್ ನೀಡಿ 5 ವಿಕೆಟ್ ಪಡೆದ್ರೆ, ಇಶಾಂತ್ ಶರ್ಮಾ 5 ಓವರ್ ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದುಕೊಂಡಿದ್ದಾರೆ. ಅಕ್ಷರ್ ಪಟೇಲ್ 20 ಓವರ್ ಗಳಲ್ಲಿ 40 ರನ್ ನೀಡಿ 2 ವಿಕೆಟ್ ಪಡೆದ್ರೆ ಸಿರಾಜ್ 1 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿದ್ದಾರೆ.

ಇಂಗ್ಲೆಂಡ್ ಪರ ಪೋಕ್ಸ್ 42, ಓಲೆ ಪೋಪ್ 22, ಬೆನ್ ಸ್ಟೋಕ್ 18 ಹಾಗೂ ಸಿಬ್ಲಿ 16 ರನ್ ಗಳಿಸಿದ್ದಾರೆ. ಭಾರತ 195 ರನ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಬ್ಯಾಟಿಂಗ್ ನಡೆಸುತ್ತಿದ್ದಾರೆ.

Comments are closed.