ಮುಂಬೈ : Fire At Mumbai High-Rise : ಮುಂಬೈನ 20 ಅಂತಸ್ತಿನ ವಸತಿ ಕಟ್ಟಡದಲ್ಲಿ ಇಂದು ಬೆಳಗ್ಗೆ ಬಹುದೊಡ್ಡ ಅಗ್ನಿ ಅವಘಡ ಸಂಭವಿಸಿದ್ದು ಈ ದುರಂತದಲ್ಲಿ ಕನಿಷ್ಟ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮುಂಬೈನ ತಾರ್ಡಿಯೋ ಪ್ರದೇಶದ ಗೋವಾಲಿಯಾ ಟ್ಯಾಂಕ್ನಲ್ಲಿರುವ ಗಾಂಧಿ ಆಸ್ಪತ್ರೆ ಎದುರಿರುವ ಕಮಲಾ ಕಟ್ಟಡದ 18ನೇ ಮಹಡಿಯಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಉಂಟಾದ ಅಗ್ನಿ ಅವಘಡದಲ್ಲಿ ಆರು ಮಂದಿ ಸಾವನ್ನಪ್ಪಿದ್ದು ಒಂದೆಡೆಯಾದರೆ ಕನಿಷ್ಟ 15 ಮಂದಿ ಈ ದುರಂತದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Yet another fire broke out at a #Mumbai highrise this morning. 2 persons died & 15 are injured.
— Priti Gandhi – प्रीति गांधी (@MrsGandhi) January 22, 2022
As usual, excuses will be made, sketchy reasons given & life will go on.
Strongest political will required if the city has to survive. As a Mumbaikar, the unaccountability pains!! pic.twitter.com/lx95sPqcg2
ಈ ದುರ್ಘಟನೆಯ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ಕಟ್ಟಡದಿಂದ ಹೊರಬಂದ ಹೊಗೆಯು ಮುಗಿಲೆತ್ತರಕ್ಕೆ ವ್ಯಾಪಿಸಿರೋದನ್ನು ಕಾಣಬಹುದಾಗಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಮುಂಬೈನ ಮೇಯರ್ ಕಿಶೋರಿ ಪೆಡ್ನೇಕರ್ ಅವಘಡದಲ್ಲಿ ಗಾಯಗೊಂಡ ಆರು ಮಂದಿ ವೃದ್ಧರಿಗೆ ಕೃತಕ ಆಮ್ಲಜನಕದ ಅವಶ್ಯಕತೆ ಇದೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಿದರು. ಅಲ್ಲದೇ ಅಗ್ನಿಯ ಜ್ವಾಲೆಯು ನಿಯಂತ್ರಣಕ್ಕೆ ಬಂದಿದ್ದು ದಟ್ಟವಾದ ಹೊಗೆ ಎಲ್ಲೆಡೆ ಆವರಿಸಿದೆ . ವಸತಿ ಕಟ್ಟಡದಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ರಿಲಯನ್ಸ್ ಹಾಗೂ ವೊಕಾರ್ಡ್ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರು ಎಂಬ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಶೀಘ್ರದಲ್ಲಿಯೇ ತನಿಖೆ ನಡೆಯಲಿದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದರು.
ಅಗ್ನಿ ಅವಘಡದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. 13 ಅಗ್ನಿಶಾಮಕದಳ ಇಂಜಿನ್ಗಳು ಹಾಗೂ ಏಳು ವಾಟರ್ ಜೆಟ್ಟೀಸ್ನ್ನು ಬೆಂಕಿ ಆರಿಸುವ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
6 Dead, 15 Injured In Huge Fire At Mumbai High-Rise
ಇದನ್ನು ಓದಿ : water price hike : ಬೆಂಗಳೂರಲ್ಲಿ ನೀರಿನ ದರ ಏರಿಕೆ ಶಾಕ್ : ಸರಕಾರಕ್ಕೆ ದರ ಏರಿಕೆ ಪ್ರಸ್ತಾಪ ಸಲ್ಲಿಸಿದ ಜಲಮಂಡಳಿ
ಇದನ್ನೂ ಓದಿ : police corona positive : ಕೊರೋನಾ ಮೂರನೇ ಅಲೆಗೆ ನಲುಗಿದ ಖಾಕಿ ಪಡೆ : ಸಿಲಿಕಾನ್ ಸಿಟಿಯಲ್ಲಿ 1234 ಪೊಲೀಸರಿಗೆ ಸೋಂಕು