covid-19 test : ಬಿಬಿಎಂಪಿ ಟೆಸ್ಟ್ ಮಾಡಿಸಿ ಅನುತ್ತೇ, ಸಚಿವರು ಬೇಡ ಅಂತಾರೆ : ಸರ್ಕಾರದ ಡೊಂಬರಾಟಕ್ಕೆ ಜನರು ಹೈರಾಣ

ಬೆಂಗಳೂರು : ಕೊರೋನಾ ನಿರ್ವಹಣೆ ವಿಚಾರದಲ್ಲಿ ಸರ್ಕಾರ ಎಡವಿದ್ಯಾ ಇಂತಹದೊಂದು ಪ್ರಶ್ನೆಗೆ ಕಾರಣವಾಗಿದೆ ಸರ್ಕಾರದ ನೀತಿ. ಕೊರೋನಾ ಏರುತ್ತಿರುವ ಬೆನ್ನಲ್ಲೇ ನಗರದಲ್ಲಿ ಕರೋನಾ ಸೋಂಕಿತರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸೋದಾಗಿ ಬಿಬಿಎಂಪಿ ಹೇಳಿಕೊಂಡಿದೆ. ಆದರೆ ವಿನಾಕಾರಣ ಪರೀಕ್ಷೆ( covid-19 test ) ನಡೆಸೋದು ಬೇಡ. ಲಕ್ಷಣಗಳಿದ್ದರೇ ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಚಿವ ಸುಧಾಕರ್ ಹೇಳಿದ್ದಾರೆ. ಹೀಗಾಗಿ ಜನಸಾಮಾನ್ಯರಿಗೆ ಕೊರೋನಾ ಹಾಗೂ ಸರ್ಕಾರ ಎರಡೂ ತಲೆನೋವಾಗಿ ಪರಿಣಮಿಸಿದೆ.

ನಗರದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಫಿಸಿಕಲ್ ಟ್ರಯಾಜಿಂಗ್ ಮೂಲಕ ಸೋಂಕಿತರನ್ನು ಪತ್ತೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಪ್ರತಿನಿತ್ಯ ಅಂದಾಜು ಮೂರು ಸಾವಿರ ಜನರ ಫಿಸಿಕಲ್ ಟ್ರಯಾಜಿಂಗ್ ನಡೆಸೋದು ಹಾಗೂ ಅಂಕಿಅಂಶಗಳನ್ನು ದಾಖಲು ಮಾಡೋದು ಅಗತ್ಯ ಇದ್ದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸೋದು ಬಿಬಿಎಂಪಿ ಪ್ಲ್ಯಾನ್.

ಬಿಬಿಎಂಪಿಯ ೧೯೮ ವಾರ್ಡ್ ಗಳಲ್ಲೂ ಫಿಸಿಕಲ್ ಟ್ರಯಾಜಿಂಗ್ ಗೆ ಬಿಬಿಎಂಪಿ ಸಿಬ್ಬಂದಿಯನ್ನು ನೇಮಿಸಲು ಮುಂದಾಗಿದೆ. ಸಾಮಾನ್ಯ ಶೀತಜ್ವರದ ಲಕ್ಷಣಗಳಿರುವವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸುವುದು ಹಾಗೂ ಸೂಕ್ತ ಚಿಕಿತ್ಸೆ ಕೊಡಿಸುವುದು ಟ್ರಯಾಜಿಂಗ್ ಉದ್ದೇಶ. ಆದರೆ ಆರೋಗ್ಯ ಸಚಿವರು ಮಾತ್ರ ಅನಗತ್ಯವಾಗಿ ಕೊರೋನಾ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ. ಸಾಮಾನ್ಯ ಶೀತ ಜ್ವರದಂತಹ ಸಂದರ್ಭದಲ್ಲಿ ಕೊರೋನಾ ಪರೀಕ್ಷೆ‌ಮಾಡಿಸುವುದು ಅಗತ್ಯವಿಲ್ಲ ಎಂದಿದ್ದಾರೆ.

ಅಲ್ಲದೇ ಜನರು ಫ್ಯಾನಿಕ್ ಆಗಬಾರದು ಜವಾಬ್ಧಾರಿಯಿಂದ ನಡೆದುಕೊಳ್ಳಬೇಕು. ಸೋಷಿಯಲ್ ಡಿಸ್ಟನ್ಸ್, ಮಾಸ್ಕ್ ಬಳಸಬೇಕು. ತೀರಾ ಅನಿವಾರ್ಯವಲ್ಲದೇ ಇದ್ದರೇ ಸಭೆ ಸಮಾರಂಭಗಳನ್ನು ಅವಾಯ್ಡ್ ಮಾಡಬೇಕು. ಸದ್ಯ ಕರೋನಾ ಕೇಸ್ ಗಳು ಹೆಚ್ಚಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸರ್ಕಾರ ಕೆಲವು ರೂಲ್ಸ್ ಗಳನ್ನು ಸಡಿಲಗೊಳಿಸಿದೆ‌‌. ಆದರೆ ಒಂದೊಮ್ಮೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದರೇ ಅನಿವಾರ್ಯವಾಗಿ ಕಠಿಣ ನಿಯಮ ಜಾರಿಗೊಳಿಸಬೇಕಾಗುತ್ತದೇ ಎಂದಿದ್ದಾರೆ.

ಒಂದೆಡೆ ಕೇಸ್ ಗಳು ಹೆಚ್ಚಿದ್ದರೂ ಉದ್ದಿಮೆಗಳ ಒತ್ತಡಕ್ಕೆ ಮಣಿದು ವೀಕೆಂಡ್ ಕರ್ಪ್ಯೂ ಸಡಿಲಿಸಿರುವ ಸರ್ಕಾರ ಈಗ ಮತ್ತೆ ಟೆಸ್ಟ್ ವಿಷಯದಲ್ಲೂ ಗೊಂದಲದಲ್ಲಿದ್ದು ಬಿಬಿಎಂಪಿ ಒಂದು ರೀತಿಯ ನಿಯಮ ಜಾರಿಗೆ ತಂದರೇ ಸರ್ಕಾರ ಹಾಗೂ ಸಚಿವರು ಮತ್ತೊಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಈ ದ್ವಂದ್ವ ನೀತಿಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ‌ಸಿಲುಕಿದ್ದು ಸಾಮಾನ್ಯ ಶೀತ ಜ್ವರ ಬಂದರೂ ಹೆದರಿ ನಡುಗುವಂತಾಗಿದೆ.

ಇದನ್ನೂ ಓದಿ : ದೇಶದಲ್ಲಿ ಕೊರೊನಾ ರೌದ್ರಾವತಾರ: ಒಂದೇ ದಿನದಲ್ಲಿ 3.37 ಲಕ್ಷ ಹೊಸ ಪ್ರಕರಣ ವರದಿ

ಇದನ್ನೂ ಓದಿ : Former PM HD Deve Gowda : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆಸ್ಪತ್ರೆಗೆ ದಾಖಲು

(bbmp demand covid-19 test but minister not interested, confusions in people)

Comments are closed.