Priyanka Chopra-Nick Jonas : ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ

Priyanka Chopra-Nick Jonas : ಅಂತಾರಾಷ್ಟ್ರೀಯ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅವರ ಪತಿ ನಿಕ್​ ಜೋನಾಸ್​​​ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ತಮ್ಮ ಕುಟುಂಬಕ್ಕೆ ಬರಮಾಡಿಕೊಂಡಿದ್ದಾರೆ. ಇಂದು ತಮ್ಮ ಇನ್​ಸ್ಟಾಗ್ರಾಂ ಖಾತೆಗಳಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​ ಜೋನಾಸ್​ ದಂಪತಿ ಈ ಗುಡ್​ ನ್ಯೂಸ್​ನ್ನು ಅಭಿಮಾನಿಗಳ ಎದುರು ಹಂಚಿಕೊಂಡಿದ್ದಾರೆ.


‘ಬಾಡಿಗೆ ತಾಯ್ತನದ ಮೂಲಕ ಮಗುವನ್ನು ನಮ್ಮ ಜೀವನಕ್ಕೆ ಬರ ಮಾಡಿಕೊಂಡಿದ್ದೇವೆ ಎಂದು ಹೇಳಲು ಸಂತೋಷವಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ನೀವು ನಮ್ಮ ಖಾಸಗಿತನಕ್ಕೆ ಬೆಲೆ ನೀಡುತ್ತೀರಿ ಎಂಬ ನಂಬಿಕೆಯಿದೆ. ನಾವು ಈಗ ಕುಟುಂಬದ ಕಡೆಗೆ ಹೆಚ್ಚು ಗಮನ ನೀಡಬೇಕು . ಎಲ್ಲರಿಗೂ ಧನ್ಯವಾದಗಳು ಎಂದು ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​ ಜೋನಾಸ್​​ ಬರೆದುಕೊಂಡಿದ್ದಾರೆ. ಅಂದಹಾಗೆ ಇದು ಗಂಡು ಮಗುವೋ ಅಥವಾ ಹೆಣ್ಣು ಮಗುವೋ ಎಂಬುದರ ಬಗ್ಗೆ ಈ ದಂಪತಿ ಯಾವುದೇ ಮಾಹಿತಿಯನ್ನು ಇಲ್ಲಿಯವರೆಗೆ ಬಹಿರಂಗಪಡಿಸಿಲ್ಲ.


ನಿಕ್​ ಜೋನಾಸ್​ ದಂಪತಿ ತಾವು ಪೋಷಕರಾಗುವ ಸುದ್ದಿಯನ್ನು ಘೋಷಿಸುತ್ತಿದ್ದಂತೆಯೇ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ನಟಿ ಲಾರಾ ದತ್ತಾ ದಂಪತಿ ಸೇರಿದಂತೆ ಅನೇಕರು ಕಮೆಂಟ್​ ಮೂಲಕ ಶುಭ ಹಾರೈಸಿದ್ದಾರೆ.


2019ರಲ್ಲಿ ಪ್ರಿಯಾಂಕಾ ತಮಗೆ ಮಗುವನ್ನು ಪಡೆಯಬೇಕು ಎಂಬ ಆಸೆ ಇದೆ ಎಂದು ಹೇಳಿಕೊಂಡಿದ್ದರು. ಮನೆಯನ್ನು ಖರೀದಿಸುವುದು ಹಾಗೂ ಮಗುವನ್ನು ಪಡೆಯುವುದು ನನ್ನ ಬೇಡಿಕೆಯ ಪಟ್ಟಿಯಲ್ಲಿದೆ ಎಂದು ಹೇಳಿಕೊಂಡಿದ್ದರು.

ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​ ಜೋನಾಸ್​ ದಂಪತಿ ಜೋಧಪುರದ ಉಮೈದ್​ ಭವನದಲ್ಲಿ 2018ರ ಡಿಸೆಂಬರ್​ ಒಂದು ಹಾಗೂ ಎರಡರಂದು ಕ್ರಿಶ್ಚಿಯನ್​ ಮತ್ತು ಹಿಂದೂ ಸಂಪ್ರದಾಯಗಳೆರಡರ ಪ್ರಕಾರವೂ ಮದುವೆಯಾಗಿದ್ದರು. ಇದಾದ ಬಳಿಕ ದೆಹಲಿ ಹಾಗೂ ಮುಂಬೈನಲ್ಲಿ ದಂಪತಿ ಎರಡು ರಿಸೆಪ್ಶನ್​ ಕಾರ್ಯಕ್ರಮವನ್ನು ಆಯೋಜಿಸಿತ್ತು.

Priyanka Chopra-Nick Jonas welcome baby via surrogacy: ‘We are overjoyed’

ಇದನ್ನು ಓದಿ : water price hike : ಬೆಂಗಳೂರಲ್ಲಿ ನೀರಿನ ದರ ಏರಿಕೆ ಶಾಕ್‌ : ಸರಕಾರಕ್ಕೆ ದರ ಏರಿಕೆ ಪ್ರಸ್ತಾಪ ಸಲ್ಲಿಸಿದ ಜಲಮಂಡಳಿ

ಇದನ್ನೂ ಓದಿ : police corona positive : ಕೊರೋನಾ ಮೂರನೇ ಅಲೆಗೆ ನಲುಗಿದ ಖಾಕಿ ಪಡೆ : ಸಿಲಿಕಾನ್ ಸಿಟಿಯಲ್ಲಿ 1234 ಪೊಲೀಸರಿಗೆ ಸೋಂಕು

Comments are closed.