ಹಾವೇರಿ : ಸೆವೆನ್ ಅಪ್ ಅಂತ ತಿಳಿದ ಯುವಕನೋರ್ವ ವಿಷ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಕ್ಕ ಮರಳಿಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹನುಮಂತ ಲಮಾಣಿ ಎಂಬಾತನೇ ಮೃತ ದುರ್ದೈವಿ. ಅಲಸಂದೆ ಮತ್ತು ಮೆಕ್ಕೆಜೋಳ ಬೆಳೆಗಳ ಕೀಟ ನಿವಾರಣೆಗಾಗಿ ಹನುಮಂತ ತಂದೆ ಮನೆಗೆ ಕ್ರೀಮಿನಾಶಕ ತಂದು. ಸೆವನ್ ಅಪ್ ಬಾಟಲ್ನಲ್ಲಿ ಶೇಖರಿಸಿಟ್ಟಿದ್ದರು.
ಮನೆಯಲ್ಲಿ ಸೆವೆನ್ ಅಪ್ ಬಾಟಲಿ ಇರುವುದನ್ನು ಗಮನಿಸಿದ ಹನುಮಂತ ಸೆವೆನ್ ಅಪ್ ಎಂದು ಕ್ರಿಮಿನಾಶಕವನ್ನು ಕುಡಿದಿದ್ದಾನೆ. ಕೂಡಲೇ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಹನುಮಂತ ಸಾವನ್ನಪ್ಪಿದ್ದಾನೆ.
ಇತ್ತ ಮನೆ ಮಗನನ್ನು ಕಳೆದುಕೊಂಡಿರುವ ಮನೆಯವರ ಆಕಂಧನ ಮುಗಿಲು ಮುಟ್ಟಿದೆ. ಕಳೆದ ಎರಡು ತಿಂಗಳ ಹಿಂದಷ್ಟೇ ಹನುಮಂತ ತಂದೆಯಾಗಿದ್ದ. ಇದೊಂದು ಆಕಸ್ಮಿಕ ಘಟನೆ ಎನ್ನುವುದಾಗಿ ತಂದೆ ಪೋಲಿಸರಿಗೆ ಹೇಳಿಕೆ ನೀಡಿದ್ದು, ಈ ಕುರಿತು ಸವಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ