ಕೋಳಿ ಅಂಕಕ್ಕೆ ಬಂದ ತನ್ನ ಮಾಲೀಕನನ್ನೇ ಕೊಂದು ಜೈಲು ಸೇರಿದ ಕೋಳಿ..!!!

ಹೈದರಾಬಾದ್ : ಇತ್ತೀಚಿನ ವರ್ಷಗಳಲ್ಲಿ ಕೋಳಿ ಅಂಕಕ್ಕೆ ನಿಷೇಧ ಹೇರಲಾಗಿದೆ. ಅಂತೆಯೇ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಅಂಕದಲ್ಲಿ ಕೋಳಿಯೊಂದು ತನ್ನ ಮಾಲೀಕನನ್ನೇ ಕೊಂದು ಕೋಳಿಯೇ ಜೈಲು ಪಾಲಾಗಿರುವ ಘಟನೆ ತೆಲಂಗಾಣದ ಜಗ್ತಿಯಲ್ ಜಿಲ್ಲೆಯಲ್ಲಿ ನಡೆದಿದೆ.

ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಯಲ್ಲಮ್ಮ ದೇವಸ್ಥಾನದಲ್ಲಿ ಕೋಳಿ ಅಂಕವನ್ನು ಆಯೋಜಿಸಲಾಗಿತ್ತು. ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಸತೀಶ್ (45 ವರ್ಷ) ಎಂಬವರು ತನ್ನ ಕೋಳಿಯೊಂದಿಗೆ ತೆರಳಿದ್ದಾರೆ. ತನ್ನ ಕೋಳಿಗೆ ಜೋಡಿಯಾದ ನಂತರದಲ್ಲಿ ಕೋಳಿಯ ಕಾಲಿಗೆ ಕತ್ತಿ ಕಟ್ಟಿ ಕಾಡಾಟಕ್ಕೆ ಸಜ್ಜುಗೊಳಿಸಿದ್ದರು.

ಕಾದಾಟಕ್ಕೆ ನಿಂತಿದ್ದ ಕೋಳಿ ನೇರವಾಗಿ ಬಂದು ಮಾಲೀಕ ಸತೀಶ್ ತೊಡೆಯ ಮೇಲೆ ನಿಂತುಕೊಂಡು ಕತ್ತಿಯನ್ನು ತೊಡೆಯ ಸಂದಿಗೆ ತಾಕಿಸಿದೆ. ಇದರಿಂದಾಗಿ ಸತೀಶ್ ಗಂಭೀರವಾಗಿ ಗಾಯ ಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸತೀಶ್ ಕೊನೆಯುಸಿರೆಳೆದಿದ್ದಾರೆ.

https://kannada.newsnext.live/7up-missing-poission-son-death/

ಕಾನೂನು ಉಲ್ಲಂಘಿಸಿ ಕೋಳಿ ಅಂಕ ನಡೆಸಿದ ಆಯೋಜಕ ಹಾಗೂ ಸತೀಶ್ ನ ಕೊಲೆಗೆ ಕಾರಣವಾಗಿದ್ದ ಕೋಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಳಿಯನ್ನು ಪೊಲೀಸ್ ಠಾಣೆಯಲ್ಲಿ ಕಟ್ಟಿ ಹಾಕಲಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಕಾನೂನು ಬಾಹಿರವಾಗಿ ಕೋಳಿ ಅಂಕ ನಡೆಸಿದ ತಪ್ಪಿಗೆ ಮಾಲೀಕ ಕಂಬಿ ಹಿಂದೆ ಸೇರಿದ್ರೆ ಕೋಳಿಯೂ ಜೈಲು ಸೇರಿದೆ. ಇದೀಗ ಕೊಲೆಗೆ ಕಾರಣವಾಗಿರುವ ಕೋಳಿಗೆ ಅದ್ಯಾವ ಶಿಕ್ಷೆ ನೀಡುತ್ತಾರೋ ಕಾದು ನೋಡಬೇಕಿದೆ.

Comments are closed.