ನೆಲಮಂಗಲ : ಹಿರಿಯ ನಟಿ ಲೀಲಾವತಿ ಅವರ ತೋಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ಹಸುವಿಗಾಗಿ ಕೂಡಿಟ್ಟಿದ ಮೇವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ತೋಟಕ್ಕೆ ಬೆಂಕಿ ಬಿದ್ದಿರೋದನ್ನು ನೆನೆದು ಹಿರಿಯ ನಟಿ ಲೀಲಾವತಿ ಹಾಗೂ ಅವರ ಪತ್ರ ನಟ ವಿನೋದ್ ರಾಜ್ ಕಣ್ಣೀರಿಟ್ಟಿದ್ದಾರೆ.

ಇಂದು ಮಧ್ಯಾಹ್ನದ ಹೊತ್ತಲ್ಲಿ ತೋಟಕ್ಕೆ ಬೆಂಕಿ ಬಿದ್ದಿರುವುದನ್ನು ಅರಿತ ವಿನೋದ್ ರಾಜ್ ಕೂಲಿಯಾಳುಗಳ ಸಹಾಯದಿಂದ ಮರದ ಕೊಂಬೆ, ಎಲೆಯನ್ನು ಬಳಸಿ ಬೆಂಕಿ ನಂದಿಸೋದಕ್ಕೆ ಮುಂದಾಗಿದ್ದಾರೆ.

ಆದರೆ ತೋಟದಲ್ಲಿದ್ದ ಹುಲ್ಲು, ಗಿಡಗಳು ಬಿಸಿಲಿಗೆ ಒಣಗಿದ್ದರಿಂದ ಬೆಂಕಿಯ ಆರ್ಭಟ ಜೋರಾಗಿತ್ತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂಧಿ ಬರುವ ಹೊತ್ತಿಗೆ ಬಹುತೇಕ ತೋಟಕ್ಕೆ ಬೆಂಕಿ ವ್ಯಾಪಿಸಿದೆ.

ಕೊನೆಗೂ ಅಗ್ನಿಶಾಮಕ ಸಿಬ್ಬಂಧಿ ಬೆಂಕಿ ನಂದಿಸಿದ್ದಾರೆ. ಆದರೆ ಹಸುವಿಗಾಗಿ ಕೂಡಿಟ್ಟಿದ್ದ ಮೇವು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಕಿಡಿಗೇಡಿಗಳು ಸಿಗರೇಟ್ ಸೇಡಿ ಬಿಸಾಡಿದ್ದಾರೆ. ಇದರಿಂದಲೇ ಈ ಘಟನೆ ನಡೆದಿದೆ ಅಂತಾ ವಿನೋದ್ ರಾಜ್ ಆರೋಪಿಸಿದ್ದಾರೆ. ಆದರೆ ಬೇಕು ಅಂತಾನೇ ಮಾಡಿದ್ರಾ ಇಲ್ಲಾ ತಪ್ಪಿ ಬೆಂಕಿ ಬಿದ್ದಿದೆಯಾ ಅನ್ನೊದು ಗೊತ್ತಾಗಿಲ್ಲ.

ನಟಿ ಲೀಲಾವತಿ ಅವರ ನೆಲಮಂಗಲದ ತೋಟಕ್ಕೆ ಬೆಂಕಿ ಬಿದ್ದಿರುವುದು ಇದೇ ಮೊದಲೇನಲ್ಲಾ. ಈ ಹಿಂದೆ ಕೂಡ ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ರು. ಇದರಿಂದ ತೋಟ ಬಹುತೇಕ ಸುಟ್ಟು ಕರಕಲಾಗಿತ್ತು. ಇದೀಗ ಮತ್ತೆ ತೋಟಕ್ಕೆ ಬೆಂಕಿ ಬಿದ್ದಿದೆ.