ವಾಹನ ಸವಾರರಿಗೆ ಗುಡ್ ನ್ಯೂಸ್ : ಎಪ್ರೀಲ್ 1ರಿಂದ ಸಿಗುತ್ತೆ ವಿಶ್ವದರ್ಜೆಯ ಶುದ್ದ ತೈಲ

0

ನವದೆಹಲಿ : ವಾಹನ ಸವಾರರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ನೀಡಿದೆ. ಎಪ್ರೀಲ್ 1ರಿಂದ ದೇಶದಾದ್ಯಂತ ವಿಶ್ವದರ್ಜೆಯ ಸ್ವಚ್ಚ ಪೆಟ್ರೋಲ್ ಮತ್ತು ಡೀಸೆಲ್‌ ಲಭ್ಯವಾಗಲಿದೆ. ಪ್ರಸ್ತುತ ಜಾರಿಯಲ್ಲಿರುವ ಯುರೋ-IV ಗ್ರೇಡ್ ನೌನಿಂದ ಯುರೋ -VIಎಮಿಷನ್ ಕಂಪ್ಲೈಂಟ್ ಇಂಧನಕ್ಕೆ ಬದಲಾಗಲಿದೆ.

Bs6
ವಾಹನ ಸವಾರರಿಗೆ ಗುಡ್ ನ್ಯೂಸ್ : ಎಪ್ರೀಲ್ 1ರಿಂದ ಸಿಗುತ್ತೆ ವಿಶ್ವದರ್ಜೆಯ ಶುದ್ದ ತೈಲ 3

ಏಪ್ರಿಲ್ 1 ರಿಂದಲೇ ಬಿಎಸ್-VIಇಂಧನವನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಓಸಿ) ಸಿದ್ದತೆಗಳನ್ನು ಮಾಡಿಕೊಂಡಿದ್ದು, ಬಿಎಸ್ -VIಇಂಧನ ಈಗಾಗಲೇ ಸಂಗ್ರಹಾಗಾರವನ್ನು ತಲುಪಿದೆ. ಹೀಗಾಗಿ ಭಾರತೀಯ ಪ್ರಯಾಣಿಕರಿಗೆ ಇನ್ಮುಂದೆ ವಿಶ್ವದರ್ಜೆಯ ತೈಲ ಲಭ್ಯವಾಗಲಿದೆ.

Bs6 1
ವಾಹನ ಸವಾರರಿಗೆ ಗುಡ್ ನ್ಯೂಸ್ : ಎಪ್ರೀಲ್ 1ರಿಂದ ಸಿಗುತ್ತೆ ವಿಶ್ವದರ್ಜೆಯ ಶುದ್ದ ತೈಲ 4

ದೇಶ ಈ ಹಿಂದೆ ಬಳಸುತ್ತಿದ್ದ 350 ಪಿಪಿಎಂ ಸಲ್ಫರ್ ಅಂಶದೊಂದಿಗೆ ಯುರೋ -3 ಸಮಾನ (ಅಥವಾ ಇಂಡಿಯಾ ಸ್ಟೇಜ್ -3) ಇಂಧನವನ್ನು 2010ರಲ್ಲಿ ಅಳವಡಿಸಿಕೊಂಡಿತ್ತು. ನಂತರ 50 ಪಿಪಿಎಂ ಗಂಧಕದ ಅಂಶವನ್ನು ಹೊಂದಿರುವ ಬಿಎಸ್ IV ಗೆ ಬದಲಾಗಲು ಏಳು ವರ್ಷಗಳನ್ನು ತೆಗೆದುಕೊಂಡಿದೆ. ಆದರೆ ಬಿಎಸ್-IVನಿಂದ ಬಿಎಸ್- VIಗೆ ಬದಲಾಗಲು ದೇಶ ತೆಗೆದುಕೊಂಡಿದ್ದು ಕೇವಲ 3 ವರ್ಷ. ವಿಶ್ವದ ಯಾವುದೇ ದೇಶವೂ ಕೂಡ ಇಂತಹ ಬದಲಾವಣೆಯನ್ನು ಕಂಡಿಲ್ಲ.

Leave A Reply

Your email address will not be published.