ಗೋವನ್ನು ತಬ್ಬಿಕೊಳ್ಳಿ ಒತ್ತಡದಿಂದ ಹೊರಬನ್ನಿ….! ಅಮೇರಿಕಾದಲ್ಲಿ ಸದ್ದುಮಾಡ್ತಿದೆ ಹೊಸ ಟ್ರೆಂಡ್…!!

ಬೆಂಗಳೂರು: ಭಾರತದಲ್ಲಿ ಗೋವಿಗೆ ಪವಿತ್ರವಾದ ಸ್ಥಾನವಿದೆ. ಅಷ್ಟೇ ಅಲ್ಲ ಕಾಮಧೇನು ಎಂದು ಕರೆಯಲ್ಪಡುವ ಗೋವಿನ ಮೂತ್ರ ಹಾಗೂ ಸಗತಿ ಕರೋನಾಗೆ ಚಿಕಿತ್ಸೆಗೂ ಪ್ರಯೋಜನಕಾರಿ ಎನ್ನಲಾಗುತ್ತಿದೆ. ಈ ಮಧ್ಯೆ ಒತ್ತಡ ನಿವಾರಣೆಗೂ ಗೋವು ಪರಿಣಾಮಕಾರಿ ಎನ್ನಲಾಗಿದ್ದು, ಅಮೇರಿಕಾದಲ್ಲಿ ಗಂಟೆಗೆ 200 ಡಾಲರ್ ಕೊಟ್ಟು ಗೋವನ್ನು ತಬ್ಬಿಕೊಳ್ಳುವ ಟ್ರೆಂಡ್ ಆರಂಭವಾಗಿದೆ.

ಗೋವನ್ನು ತಬ್ಬಿಕೊಳ್ಳುವುದರಿಂದ ಮನುಷ್ಯನ ಮಾನಸಿಕ ಒತ್ತಡ ನಿವಾರಣೆಯಾಗಲಿದೆ ಎಂಬ ಅಂಶ ಅಧ್ಯಯನದಿಂದ ಸಾಬಿತಾಗಿದೆ. ಹೀಗಾಗಿ ಅಮೇರಿಕಾದಲ್ಲಿ ಈಗ ಗೋಮಾತೆಯನ್ನು ತಬ್ಬಿಕೊಳ್ಳುವುದು ಒಂದು ಚಿಕಿತ್ಸಾ ವಿಧಾನದಂತೆ ಬಳಕೆಯಾಗುತ್ತಿದೆಯಂತೆ.koe knuffelenಒತ್ತಡ ನಿವಾರಣೆಗೆ ಇದು ಹೊಸ ಚಿಕಿತ್ಸಾ ವಿಧಾನವೆಂದು ಪರಿಚಿತವಾಗುತ್ತಿದೆ.

https://kannada.newsnext.live/corona-virus-vaccine-for-children-the-covaccine-trial-from-june/

ಗಂಟೆಗೆ 200 ಡಾಲರ್ ನೀಡಿ ಜನರು ಗೋವನ್ನು ತಬ್ಬಿಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರಂತೆ. ಈ ವಿಚಾರವನ್ನು ಕಾಂಗ್ರೆಸ್ ನಾಯಕ ಮಿಲಿಂದಾ ದಿರೋರಾ ಕೂಡ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

https://kannada.newsnext.live/ramesh-jarakiholi-cd-case-big-twist/

ಭಾರತದಲ್ಲಿ ಸದಾ ಗೋವು ಪೂಜನೀಯ ಸ್ಥಾನದಲ್ಲಿದ್ದು, ಗೋವಿನ ಉತ್ಪನ್ನಗಳನ್ನು ಪೂಜನೀಯವಾಗಿ ನೋಡಲಾಗುತ್ತಿದೆ. ಅಷ್ಟೇ ಅಲ್ಲ ಈಗಾಗಲೇ ಗೋ ಮೂತ್ರ ಹಾಗೂ ಸಗಣಿಯನ್ನು ವಿವಿಧ ಚಿಕಿತ್ಸೆಗೂ ಬಳಸಲಾಗುತ್ತದೆ.

ಇದೀಗ ಮನುಷ್ಯನ ಒತ್ತಡಕ್ಕೂ ಗೋ ಮಾತೆ ಉತ್ತರ ಎನ್ನಲಾಗುತ್ತಿದ್ದು ಒಂದೊಮ್ಮೆ ಭಾರತದಲ್ಲಿಯೂ ಈ ಚಿಕಿತ್ಸಾ ವಿಧಾನ ಪ್ರಚಲಿತವಾದರೇ ರೈತರಿಗೆ ಗೋವುಗಳು ಇನ್ನಷ್ಟು ಲಾಭ ತಂದುಕೊಡಲಿದೆ.

Comments are closed.