ಸಕ್ಕರೆ ಖಾಯಿಲೆ ಹತೋಟಿಗೆ ತರುತ್ತೆ ಮೆಂತ್ಯ ಕಾಳು – ಎದೆ ಹಾಲು ಹೆಚ್ಚಿಸೋಕೆ ಇದು ಉತ್ತಮ ಔಷಧ

Kannada Health tips Fenugreek seeds : ಮೆಂತ್ಯ, ನಮ್ಮ ಸಾಂಬಾರ ಡಬ್ಬಿಯಲ್ಲಿ ನಾವು ನೋಡಿಯೇ ಇರುತ್ತೇವೆ . ದೋಸೆಗೆ ಉಪಯೋಗಿಸಿ ಹಲವರು ಕುರು ಕರು ದೋಸೆಯನ್ನು ತಿನ್ನೋಕೆ ಇಷ್ಟಪಡುತ್ತಾರೆ .

Kannada Health tips Fenugreek seeds : ಮೆಂತ್ಯ, ನಮ್ಮ ಸಾಂಬಾರ ಡಬ್ಬಿಯಲ್ಲಿ ನಾವು ನೋಡಿಯೇ ಇರುತ್ತೇವೆ . ದೋಸೆಗೆ ಉಪಯೋಗಿಸಿ ಹಲವರು ಕುರು ಕರು ದೋಸೆಯನ್ನು ತಿನ್ನೋಕೆ ಇಷ್ಟಪಡುತ್ತಾರೆ . ಆದ್ರೆ ಮೆಂತ್ಯ ಚಟ್ನಿ ಪುಡಿ ಕೂಡಾ ಉತ್ತರ ಕರ್ನಾಟಕ ದ ಆಹಾರ ಪದ್ದತಿಯಲ್ಲಿ ಕಾಣ ಸಿಗುತ್ತೆ. ಆದ್ರೆ ಅದನ್ನು ತಿನ್ನೋಕೆ ಸಾಮಾನ್ಯವಾಗಿ ಹೆಚ್ಚಿನ ಜನರು ಇಷ್ಟ ಪಡೋದಿಲ್ಲ . ಕಾರಣ ಮೆಂತ್ಯದಲ್ಲಿರೋ ಕಹಿಗುಣ . ಆದರೆ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅನ್ನೋದೇ ಆದ್ರೆ ನೀವು ದಿನಾಲೂ ಮೆಂತ್ಯವನ್ನು ನಿಮ್ಮ ಆಹಾರದಲ್ಲಿ ಬಳಸಲೇ ಬೇಕು.


ಮೆಂತೆ ಉಷ್ಣ ಗುಣ ಉಳ್ಳ ಒಂದು ಕಾಳು . ಇದರಲ್ಲಿ ರಿಚ್ ಫೈಬರ್ ಅಂದ್ರೆ ನಾರಿನಂಶ ಹಾಗೂ ಆಂಟಿ ಆಕ್ಸಿಡೆಂಟ್ ಗುಣವನ್ನು ಈ ಮೆಂತ್ಯಾ ಕಾಳು ಹೊಂದಿದೆ . ಹೀಗಾಗಿ ಇದರಲ್ಲಿ ಕಫ ವಾತ ಪಿತ್ತವನ್ನು ಕಡಿಮೆ ಮಾಡೋ ಶಕ್ತಿ ಇದೆ. ಅಂತಾರೆ ವೈದ್ಯರು. ಇದರ ಜೊತೆಯಲ್ಲೇ ದೇಹದಲ್ಲಿರೋ ಹೆಚ್ಚಿನ ಸಕ್ಕರೆ ಅಂಶವನ್ನು ಕರಗಿಸೋದ್ರಲ್ಲಿ ಇದು ಮೊದಲ ಪಾತ್ರವಹಿಸುತ್ತೆ ಅಂದ್ರೆ ತಪ್ಪಾಗಲ್ಲ ಇನ್ನು ತಾಯಿಯಾದ ಬಾಳಾಂತಿಯರ ಪಾಲಿಗಂತು ಇದು ದಿವ್ಯ ಔಷಧ.

ಇದಕ್ಕೆ ಹಾಲು ಹೆಚ್ಚು ಮಾಡು ಶಕ್ತಿ ಇದೆ ಅಂತಾರೆ ವೈದ್ಯರು . ಜೊತೆಗೆ ಮಕ್ಕಳಾದನಂತರದ ದೇಹ ತೂಕದ ಹೆಚ್ಚಳ. ಜೀರ್ಣಶಕ್ತಿಯ ತೊಂದರೆ ಸೇರಿದಂತೆ ಅನೇಕ ರೋಗಗಳಿಗೆ ಇದು ರಾಮ ಬಾಣ . ಇನ್ನು ಈ ಮೆಂತ್ಯ ಚರ್ಮದ ಖಾಯಿಯನ್ನು ಸರಿಪಡಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತೆ
ಬಳಕೆ ಹೇಗೆ

ಇದನ್ನೂ ಓದಿ : ಸರ್ವರೋಗಗಳಿಗೂ ರಾಮಬಾಣ ಬೂದುಕುಂಬಳಕಾಯಿ – ಈ ರೀತಿ ಸೇವಿಸದ್ರೆ ಕ್ಯಾನ್ಸರ್ ಬರೋದೇ ಇಲ್ಲ

• ಈ ಮೆಂತ್ಯ ಕಾಳನ್ನು ರಾತ್ರೆ ನೆನೆ ಹಾಕಿ , ಬೆಳಗ್ಗೆ ನೀರಿಂದ ತೆಗೆದು ಮೊಳಕೆ ಬರಿಸಿ ಹಸಿ ಹೊಟ್ಟೆಗೆ ತಿನ್ನಬೇಕು
• ಮಂತ್ಯವನ್ನು ಬಿಸಿಲಲ್ಲಿ ಒಣಗಿಸಿ ಪುಡಿ ಮಾಡಿ .ಚಟ್ನಿಯ ರೂಪದಲ್ಲಿ ಸೇವಿಸಬಹುದು
• ಬಾಳಾಂತಿಯರಿಗೆ ಲೇಹದ ರೀತಿಯಲ್ಲೂ ಇದನ್ನು ನೀಡಲಾಗುತ್ತೆ .

ಇದನ್ನೂ ಓದಿ : ಮೊಬೈಲ್‌ನಲ್ಲಿ ಹೆಚ್ಚು ರೀಲ್ಸ್‌ ನೋಡೋ ಅಭ್ಯಾಸವಿದೆಯಾ ? ಹಾಗಾದ್ರೆ ನಿಮ್ಮ ಕಣ್ಣನ್ನೂ ಕಾಡಬಹುದು ಮೆಳ್ಳೆಗಣ್ಣಿನ ಸಮಸ್ಯೆ

ಮಾಡುವ ವಿಧಾನ : ನೀರಿನಲ್ಲಿ ನೆನೆಹಾಕಿದ ಮೆಂತ್ಯವನ್ನು ರುಬ್ಬಿಕೊಳ್ಳಬೇಕು ಅದಕ್ಕೆ ಅಷ್ಟೇ ಬೆಲ್ಲ ಹಾಕಿ ಪಾಕ ಬರುವವರೆಗೆ ಕುದಿಸಿ . ಅದಕ್ಕೆ ಅಷ್ಟೇ ಪ್ರಮಾಣದ ತುಪ್ಪ ಹಾಕಿ ಶೇಖರಿಸಿಟ್ಟು, ದಿನಾ ಬೆಳಗ್ಗೆ 1 ಚಮಚ ಹಾಲಿನೊಂದಿಗೆ ತೆಗೆದುಕೊಂಡರೆ ಬಾಳಾಂತಿ ಆರೋಗ್ಯಕ್ಕೆ ಉತ್ತಮ
• ಇನ್ನು ತಲೆ ಹೊಟ್ಟು ಸಮಸ್ಯೆ ಇದ್ದರೂ ಮೆಂತ್ಯವನ್ನು ರುಬ್ಬಿ ತಲೆಗೆ ಹಚ್ಚಿಕೊಳ್ಳೋದರಿಂದ ತಲೆ ಹೊಟ್ಟು ಕಡಿಮೆ ಯಾಗುತ್ತೆ .

ಇದನ್ನೂ ಓದಿ : ಮಾಂಸಾಹಾರ ಊಟದ ಜೊತೆ ಹಾಲು ಕುಡಿದ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಾ !

ಆದರೆ ಇದನ್ನು ಗರ್ಭಿಣಿಯರು ಯಾವತ್ತು ಹೆಚ್ಚಾಗಿ ಸೇವಿಸ ಬಾರದು . ಏಕೆಂದರೆ ಇದರಲ್ಲಿ ಉಷ್ಣ ಗುಣ ಹೆಚ್ಚಾಗಿ ಇರೋದ್ರಿಂದ ಮಗುವಿನ ಬೆಳವಣಿಗೆಗೆ ತೊಂದರೆ ಯಾಗುವ ಸಾಧ್ಯತೆ ಇದೆ. ಒಟ್ಟಾರೆ ಮೆಂತ್ಯ ಒಳ್ಳೆ ಆಹಾರ ಅನ್ನೋದ್ರಲ್ಲಿ ಎರಡು ಮಾತಿಲ್ಲ ,
Kannada Health tips Fenugreek seeds control sugar disease – this is a good medicine to increase breast milk

Comments are closed.