ಅಮರಾವತಿ: ಅಭಿಮಾನ ಅನ್ನೋದು ಸಕಾರಾತ್ಮಕವಾಗಿದ್ದಾಗ ಮಾಡಿದ್ದೆಲ್ಲವೂ ಸಾಧನೆಯಾಗುತ್ತೆ ಅನ್ನೋದಕ್ಕೆ ಆಂಧ್ರಪ್ರದೇಶದ ಆಡಳಿತ ಪಕ್ಷದ ಕಾರ್ಯಕರ್ತರು ಸಾಕ್ಷಿಯಾಗಿದ್ದಾರೆ. ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬಕ್ಕೆ ರಕ್ತದಾನದ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.

ಆಂಧ್ರಪ್ರದೇಶದ ಯುವ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒಂದೇ ದಿನ 35,723 ಸಾವಿರ ಯೂನಿಟ್ ರಕ್ತದಾನ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಆಂಧ್ರಪ್ರದೇಶದ ಹಳ್ಳಿಹಳ್ಳಿಯಲ್ಲೂನೂರಾರು ಕಾರ್ಯಕರ್ತರು ರಕ್ತದಾನದಲ್ಲಿ ಪಾಲ್ಗೊಂಡಿದ್ದು ಪಕ್ಷದ ನಾಯಕರ ಕರೆಗೆ ಓಗೊಟ್ಟು ರಕ್ತದಾನದಲ್ಲಿತೊಡಗಿಸಿಕೊಂಡಿದ್ದಾರೆ.ಸಧ್ಯ ಈ ದಾಖಲೆ ಇಂಟರ್‌ನ್ಯಾಷನಲ್ ವಂಡರ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದ್ದು ಸಧ್ಯದಲ್ಲೇ ವರ್ಲ್ಡ್ ರೆಕಾರ್ಡ್ ಪಟ್ಟಿ ಸೇರಲಿದೆ.

ಇಂಡಿಯನ್ ರೆಡ್‌ಕ್ರಾಸ್‌ಸೊಸೈಟಿ ಒಂದೇ ದಿನ 10 ಸಾವಿರ ಯೂನಿಟ್ ರಕ್ತ ದಾನ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿತ್ತು. ಈ ದಾಖಲೆಯನ್ನು ವೈಎಸ್ ಆರ್ ಕಾಂಗ್ರೆಸ್ ಕಾರ್ಯಕರ್ತರುಮುರಿದಿದ್ದು ಹೊಸ ದಾಖಲೆನಿರ್ಮಿಸಿದ್ದಾರೆ.