Ayodhya Rama mandir : ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಗೊಂಡಿದೆ. ಬಾಲರಾಮ ಪ್ರಾಣ ಪ್ರತಿಷ್ಠೆಯ ಬೆನ್ನಲ್ಲೇ ಅಯೋಧ್ಯೆಗೆ ರಾಮಭಕ್ತರ ದಂಡೇ ಹರಿದು ಬರುತ್ತಿದೆ. ಭಕ್ತರ ಸಂಖ್ಯೆ, ವಾರ್ಷಿಕ ಆದಾಯದಲ್ಲಿ ಅಯೋಧ್ಯೆ ತಿರುಪತಿಯನ್ನೇ ಮೀರಿಸುತ್ತೇ ಅನ್ನೋ ಲೆಕ್ಕಾಚಾರ ಹೊರಬಿದ್ದಿದೆ. ಅಯೋಧ್ಯೆಯ ವಾರ್ಷಿಕ ಆದಾಯದ ಲೆಕ್ಕಾಚಾರ ನೋಡಿದ್ರೆ ತಲೆ ತಿರುಗೋದು ಖಚಿತ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯನ್ನು ನೆರವೇರಿಸಲಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮನ ಭವ್ಯ ಮಂದಿರ ಇದೀಗ ವಿಶ್ವದ ಗಮನ ಸೆಳೆದಿದೆ. ಅದ್ರಲ್ಲೂ ಕಳೆದ ಎರಡು ದಿನಗಳಿಂದಲೂ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಭಕ್ತರು ಪ್ರಭು ಶ್ರೀರಾಮನ ದರ್ಶನವನ್ನು ಪಡೆದಿದ್ದಾರೆ.

ರಾಮಮಂದಿರದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ದೊರೆಯುತ್ತಿದ್ದಂತೆಯೇ 5 ಲಕ್ಷಕ್ಕೂ ಅಧಿಕ ಮಂದಿ ಶ್ರೀರಾಮನ ದರ್ಶನಕ್ಕಾಗಿ ಕಾದುಕುಳಿತಿದ್ದರು. ಒಮ್ಮೆಲೆ ಲಕ್ಷಾಂತರ ಮಂದಿ ಭಕ್ತರು ಶ್ರೀರಾಮನ ದರ್ಶನಕ್ಕೆ ಮುಂದಾಗುತ್ತಿದ್ದಂತೆಯೇ ನೂಕುನುಗ್ಗಲು ಉಂಟಾಗಿತ್ತು. ಆದರೆ ರಾಮಭಕ್ತರಿಗೆ ದರ್ಶನಕ್ಕೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಅಯೋಧ್ಯೆಯಲ್ಲಿ ಬುಧವಾರ ಭಕ್ತರ ಅನುಕೂಲಕ್ಕಾಗಿ ಹಲವು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀರಾಮನ ದರ್ಶನವನ್ನು ಪಡೆಯುತ್ತಿದ್ದಾರೆ. ಭಕ್ತರ ಆಗಮನ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೂರನೇ ದಿನ ಭಕ್ತರು ಸುಲಭ ವಾಗಿಯೇ ಶ್ರೀರಾಮನ ದರ್ಶನ ಪಡೆದಿದ್ದರೂ ಕೂಡ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಮುಂಜಾನೆಯಿಂದಲೇ ಭಕ್ತರು ಶ್ರೀರಾಮನ ದರ್ಶನಕ್ಕಾಗಿ ಕಾದು ಕುಳಿತಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ದಿನಗಳಲ್ಲೇ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಭಕ್ತರು ಅಯೋಧ್ಯೆಗೆ ಆಗಮಿಸಿ ಬಾಲರಾಮನ ದರ್ಶನವನ್ನು ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ತಿರುಪತಿಗೆ 2.5 ಕೋಟಿ ಅಯೋಧ್ಯೆಗೆ 5 ಕೋಟಿ ಭಕ್ತರು !
ದೇಶದಲ್ಲಿಯೇ ತಿಮ್ಮಪ್ಪನ ಕ್ಷೇತ್ರ ತಿರುಪತಿಗೆ ಅತೀ ಹೆಚ್ಚು ಭಕ್ತರು ಆಗಮಿಸುತ್ತಾರೆ. ವಾರ್ಷಿಕ ಲೆಕ್ಕಾಚಾರಗಳನ್ನು ನೋಡಿದ್ರೆ ವಾರ್ಷಿಕವಾಗಿ 2.5 ಕೋಟಿ ಮಂದಿ ಭಕ್ತರು ತಿರುಪತಿಗೆ ಆಗಮಿಸುತ್ತಾರೆ. ಇದರಿಂದಾಗಿ ವಾರ್ಷಿಕವಾಗಿ ಬರೋಬ್ಬರಿ 1,200 ಕೋಟಿ ರೂಪಾಯಿ ಆದಾಯ ಹರಿದು ಬರುತ್ತಿದೆ. ಇದೇ ಕಾರಣಕ್ಕೆ ತಿರುಪತಿಯನ್ನು ಭಾರತ ಅತ್ಯಂತ ಶ್ರೀಮಂತ ದೇಗುಲ ಎಂದು ಕರೆಯಲಾಗುತ್ತದೆ,
ಇನ್ನು ತಿರುಪತಿಯ ನಂತರದಲ್ಲಿ ಭಾರತದ ಕಾಶ್ಮೀರದಲ್ಲಿರುವ ವೈಷ್ಣೋದೇವಿ ದೇವಸ್ಥಾನಕ್ಕೆ ವಾರ್ಷಿಕವಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ವೈಷೋದೇವಿಗೆ ವಾರ್ಷಿಕ 80 ಲಕ್ಷ ಭಕ್ತರು ಆಗಮಿಸುತ್ತಿದ್ದು, ವಾರ್ಷಿಕ 500 ಕೋಟಿ ರೂಪಾಯಿ ಆದಾಯ ಹರಿದು ಬರುತ್ತಿದೆ. ಇನ್ನು ಆಗ್ರಾದ ತಾಜ್ ಮಹಲ್‌ಗೆ 70 ಲಕ್ಷ ಭಕ್ತರು ಆಗಮಿಸುತ್ತಿದ್ದು, 100 ಕೋಟಿ ಆದಾಯ ಲಭಿಸುತ್ತಿದೆ.
ಇದನ್ನೂ ಓದಿ : ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ: ರಾಮ ನಡೆದ ಹಾದಿ ಇಂದಿಗೂ ಜೀವಂತ, ದೇಶದ ಹಲವೆಡೆ ಇದೆ ರಾಮನ ಕುರುಹು
ಮೆಕ್ಕಾ, ವ್ಯಾಟಿಕನ್ ಸಿಟಿಯನ್ನೂ ಹಿಂದಿಕ್ಕಲಿದೆ ಅಯೋಧ್ಯೆ !
ಇನ್ನು ವಿಶ್ವದ ಲೆಕ್ಕಾಚಾರವನ್ನು ನೋಡೋದಾದ್ರೆ ಮುಸ್ಲೀಮರ ಪವಿತ್ರ ಕ್ಷೇತ್ರ ಸೌದಿಯ ಮೆಕ್ಕಾಕ್ಕೆ ವಾರ್ಷಿಕ 2 ಕೋಟಿ ಭಕ್ತರು ಆಗಮಿಸುತ್ತಿದ್ದು 99 ಸಾವಿರ ಕೋಟಿ ಆದಾಯ ದೊರೆಯುತ್ತಿದ್ರೆ, ವ್ಯಾಟಿಕನ್ ಸಿಟಿಗೆ 90 ಲಕ್ಷ ಭಕ್ತರ ಆಗಮನದಿಂದ 2,600 ಕೋಟಿ ರೂಪಾಯಿ ಆದಾಯ ಲಭಿಸುತ್ತಿದೆ. ಸದ್ಯ ವಿಶ್ವದಲ್ಲಿಯೇ ಮೆಕ್ಕಾ ಅತೀ ಹೆಚ್ಚು ಆದಾಯವನ್ನು ಪಡೆಯುತ್ತಿರುವ ಪುಣ್ಯಕ್ಷೇತ್ರ ಎನಿಸಿಕೊಂಡಿದೆ.

ಆದರೆ ಇದೀಗ ವಿಶ್ವದ ಎಲ್ಲಾ ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರದ ಆದಾಯವನ್ನು ಮೀರಿಸುವ ನಿಟ್ಟಿನಲ್ಲಿ ಅಯೋಧ್ಯೆ ಹೆಜ್ಜೆ ಇರಿಸಿದೆ. ಭಾರತ ಪ್ರಮುಖ ಬ್ಯಾಂಕ್ ಎನಿಸಿಕೊಂಡಿರುವ ಎಸ್‌ಬಿಐ ನಡೆಸಿರುವ ಸಮೀಕ್ಷೆಯ ಪ್ರಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬೆನ್ನಲ್ಲೇ ಯುಪಿಗೆ ಒಟ್ಟು 4 ಲಕ್ಷ ಕೋಟಿ ರೂಪಾಯಿ ಆದಾಯ ಹರಿದು ಬರುವ ನಿರೀಕ್ಷೆಯಿದೆ.
ಇದನ್ನೂ ಓದಿ : ಅಯೋಧ್ಯೆಯಲ್ಲಿ ರಾಮನಿಗಾಗಿ ಸಾಲು ಸಾಲು ಉಡುಗೊರೆ : ಏನೆಲ್ಲಾ ಉಡುಗೊರೆ ಭಕ್ತರಿಂದ ಬಂತು ಗೊತ್ತಾ ?
ಅಯೋಧ್ಯೆಗೆ ವಾರ್ಷಿಕವಾಗಿ 5 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಭಕ್ತರ ಸಂಖ್ಯೆಯಲ್ಲಿ ಶ್ರೀರಾಮ ತಿರುಪತಿಯ ತಿಮ್ಮಪ್ಪನನ್ನೇ ಮೀರಿಸುವ ಸಾಧ್ಯತೆಯಿದೆ. ಅಯೋಧ್ಯೆಗೆ ಭಕ್ತರ ಆಗಮನದಿಂದಾಗಿ ಉತ್ತರ ಪ್ರದೇಶದಲ್ಲಿನ ಪ್ರವಾಸೋಧ್ಯಮ, ಆಧ್ಯಾತ್ಮಿಕ ಸ್ಥಳಗಳಿಗೆ ಪ್ರವಾಸಿಗರು ಹಾಗೂ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ.

ಅಯೋಧ್ಯೆಯ ಭದ್ರತೆಗೆ 8 ಸಾವಿರ ಸಿಬ್ಬಂದಿ
ಮರ್ಯಾದ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳವಾಗಿರುವ ಅಯೋಧ್ಯೆಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಇದೇ ಕಾರಣಕ್ಕೆ ಯುಪಿ ಸರಕಾರ ಅಯೋಧ್ಯೆಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದೆ. ಅದ್ರಲ್ಲೂ ಸದ್ಯ ಅಯೋಧ್ಯೆಯ ಭದ್ರತೆಗೆ ವಿಶೇಷ ತಂಡಗಳು ಒಳಗೊಂಡಂತೆ ಒಟ್ಟು 8 ಸಾವಿರ ಸಿಬ್ಬಂಧಿಗಳನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ : ರಾಮನ ದರ್ಶನಕ್ಕಾಗಿ ಕಾಯುತ್ತವೆ ಪ್ರೇತಾತ್ಮಗಳು : ರಾಮನಿಗೂ ಲಕ್ಷ್ಮಣ ನಿಗೂ ಇಲ್ಲಿ ಭಿನ್ನ ಪೂಜೆ
ಬಾಲರಾಮನ ದರ್ಶನಕ್ಕೆ ಈ ವಸ್ತುಗಳು ನಿ಼ಷಿದ್ದ
ಅಯೋಧ್ಯೆಯಲ್ಲಿರುವ ಬಾಲರಾಮನ ದರ್ಶನ ಪಡೆಯಬೇಕಾದ್ರೆ ಭಕ್ತರು ಮೊಬೈಲ್, ವಾಚ್, ಲೋಹದ ವಸ್ತು, ಲೆದರ್ ಬ್ಯಾಗ್, ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ನಿ಼ಷೇಧ ಹೇರಲಾಗಿದೆ. ಭದ್ರತೆಯ ವಿಚಾರದಲ್ಲಿ ಉತ್ತರ ಪ್ರದೇಶ ಸರಕಾರ ಹೆಚ್ಚಿನ ಆಧ್ಯತೆಯನ್ನು ನೀಡಿದೆ.

ಉತ್ತರ ಪ್ರದೇಶದ ಆರ್ಥಿಕತೆಯನ್ನೇ ಹೆಚ್ಚಿಸುತ್ತೆ ಅಯೋಧ್ಯೆ !
ಹೌದು, ಉತ್ತರ ಪ್ರದೇಶ ಸರಕಾರಕ್ಕೆ ಆಯೋಧ್ಯೆ ಹೆಚ್ಚಿನ ಆರ್ಥಿಕ ಬಲವನ್ನು ನೀಡುವುದು ಖಚಿತ. ರಾಮನ ಜನ್ಮಭೂಮಿಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರವನ್ನು ಕಣ್ತುಂಬಿಕೊಳ್ಳಲು ಬರುವ ಭಕ್ತರಿಂದಾಗಿ ಉತ್ತರ ಪ್ರದೇಶದಲ್ಲಿನ ಆಧ್ಯಾತ್ಮಿಕ ಪ್ರವಾಸೋಧ್ಯಮ ಅಭಿವೃದ್ದಿಯಾಗಲಿದೆ. ಅಯೋಧ್ಯೆಯ ಜೊತೆ ಜೊತೆಗೆ ಮಥುರಾ ಹಾಗೂ ಕಾಶಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆಯಿದೆ.
ವಾರ್ಷಿಕವಾಗಿ 4 ಲಕ್ಷ ಕೋಟಿ ರೂಪಾಯಿ ಆದಾಯ ಅಯೋಧ್ಯೆಗೆ ಹರಿದು ಬರುವ ಸಾಧ್ಯತೆಯಿದೆ ಎಂಬ ಕುರಿತು ಲೆಕ್ಕಾಚಾರ ನಡೆಯುತ್ತಿದೆ. ಒಂದೊಮ್ಮೆ ಈ ಲೆಕ್ಕಾಚಾರ ಪಕ್ಕಾ ಆದ್ರೆ ಅಯೋಧ್ಯೆ ವಿಶ್ವದಲ್ಲಿಯೇ ಭಕ್ತರ ಸಂಖ್ಯೆ, ಆದಾಯದ ಲೆಕ್ಕಾಚಾರದಲ್ಲಿ ನಂ 1 ಆಗುವುದು ಪಕ್ಕಾ.
Annual income of 4 lakh crores for Ayodhya Rama mandir: Ramjanmabhoomi Ayodhya surpasses Thimpappa’s Tirupati!