ಬೆಂಗಳೂರು: ಆತನ ಬಳಿ ಇದ್ದಿದ್ದು ಸುಜುಕಿ ಆಕ್ಸೆಸ್ ದ್ವಿಚಕ್ರ ವಾಹನ. ಅದರ ಬೆಲೆಯೇ ಅಂದಾಜು 90 ಸಾವಿರ. ಆದರೆ ಟೂ ವೀಲ್ಹರ್ ಕೊಂಡು ಹತ್ತಾರು ಓಡಿಸಿದ ಪೊಲೀಸರಿಗೆ ಸಿಕ್ಕಿಬಿದ್ದಾಗ ಕಟ್ಟಿದ್ದು ಮಾತ್ರ ಬರೋಬ್ಬರಿ 12,500 ರೂಪಾಯಿ ದಂಡ.

ಹೌದು ಒಂದಲ್ಲ, ಎರಡಲ್ಲ33 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದ ಆತ ಪೊಲೀಸರ ಕೈಗೆ ಸಿಕ್ಕಿಬೀಳದೇ ಜಾಣತನದಿಂದ ಓಡಾಡುತ್ತಿದ್ದ. ಆದರೆ ಇಂದು ಆತನ ಗ್ರಹಚಾರ ಕೆಟ್ಟಿತ್ತು ಅನ್ಸುತ್ತೆ ಹೀಗಾಗಿ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಆತನ ವಾಹನದ ಟ್ರಾಫಿಕ್ ರೂಲ್ಸ್ ಬ್ರೇಕ್ ಲಿಸ್ಟ್ ಚೆಕ್ ಮಾಡಿದ ಸಂಚಾರಿ ಪೊಲೀಸರು ಎಚ್ಚರ ತಪ್ಪಿ ಬೀಳೋದೊಂದು ಬಾಕಿ.
ಒಂದಲ್ಲ- ಎರಡಲ್ಲ 33 ಬಾರಿ ಹೆಲ್ಮೆಟ್ ಕಡ್ಡಾಯ ಸೇರಿದಂತೆ ಹಲವು ನಿಯಮ ಉಲ್ಲಂಘಿಸಿದ್ದ ಈ ಟೂ ವೀಲ್ಹರ್ ಚಾಲಕನ ವಿರುದ್ಧ ಇಂದು ಎಚ್.ಎ.ಎಲ್.ಏರ್ಪೋರ್ಟ್ ವಿಭಾಗದ ಪೊಲೀಸ್ ಇನ್ಸಪೆಕ್ಟರ್ ಚನ್ನಪ್ಪನವರು ಪ್ರಕರಣ ದಾಖಲಿಸಿಕೊಂಡಿದ್ದು ಒಟ್ಟು 12,500 ದಂಡ ವಿಧಿಸಿದ್ದಾರೆ.
ಈ ಹಿಂದೆಯೂ ಹಲವಾರು ಟೂ ವೀಲ್ಹರ್ ಗಳು ಈ ರೀತಿ ದುಬಾರಿ ದಂಡಕಟ್ಟಿ ಸುದ್ದಿಯಾಗಿದ್ದರು. ಟ್ರಾಫಿಕ್ ಪೂರ್ವ ವಿಭಾಗದ ಡಿಸಿಪಿ ಈ ವಿಚಾರವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಈತ ಮಾತ್ರವಲ್ಲದೇ ಇನ್ನು ಮೂವರು ಅಂದಾಜು 13 ಸಾವಿರ ರೂಪಾಯಿ ದಂಡ ಪಾವತಿಸಿದ್ದು, ಕಳೆದ ಒಂದು ತಿಂಗಳಿನಲ್ಲಿ ಬೆಂಗಳೂರಿನ ಸಂಚಾರಿ ಪೊಲೀಸರು ಅಂದಾಜು 4 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದು ನಿಯಮ ಉಲ್ಲಂಘಿಸುವ ಚಾಲಕರಿಗೆ ಎಚ್ಚರಿಕೆ ರವಾನಿಸಿದ್ದಾರೆ.