ಜೀವನ್ಮರಣ ಹೋರಾಟದಲ್ಲಿ ಕಂಠೀರವ ಬೆಡಗಿ..! ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿರುವ ಸ್ಯಾಂಡಲ್ ವುಡ್ ನಟಿ …!

0

ಬೆಂಗಳೂರು: ಸ್ಯಾಂಡಲ್ ವುಡ್ ನ ಡ್ರಗ್ ದಂಧೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದರೇ ಅತ್ತ ಸ್ಯಾಂಡಲ್ ವುಡ್ ನ ನಟಿಮಣಿಯೊಬ್ಬರು  ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಹೌದು ಕನ್ನಡದ ಕಂಠೀರವ ಖ್ಯಾತಿಯ ನಟಿ ರಿಷಿಕಾ ಸಿಂಗ್ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾರೆ.

ಕಳೆದ ಎರಡೂವರೆ ತಿಂಗಳ ಹಿಂದೆ ರಿಷಿಕಾ ಸಿಂಗ್ ಅಪಘಾತದಲ್ಲಿ ಗಾಯಗೊಂಡಿದ್ದರು. ಬಳಿಕ ಅವರನ್ನು ನಗರ ಸಕ್ರಾ ವರ್ಲ್ಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರಿಷಿಕಾ ಆರೋಗ್ಯದಲ್ಲಿ  ಚೇತರಿಕೆ ಕಂಡು ಬರದ ಹಿನ್ನೆಲೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಆದರೆ ರಿಷಿಕಾ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಜುಲೈನಲ್ಲಿ ಯಲಹಂಕದ ಮಾವಳ್ಳಿ ಬಳಿ ರಿಷಿಕಾ ಸಿಂಗ್ ಪ್ರಯಾಣಿಸುತ್ತಿದ್ದ ಕಾರು ಅತಿವೇಗದಿಂದ ಬಂದು ಮರಕ್ಕೆ ಅಪ್ಪಳಿಸಿತ್ತು. ಪರಿಣಾಮ ರಿಷಿಕಾ ಗಂಭೀರವಾಗಿ ಗಾಯಗೊಂಡಿದ್ದರು. ಎರಡೂವರೆ ತಿಂಗಳಿನಿಂದ ರಿಷಿಕಾ ಆಸ್ಪತ್ರೆಯಲ್ಲಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರದ ಹಿನ್ನೆಲೆಯಲ್ಲಿ ಪೋಷಕರು ಆತಂಕಿತರಾಗಿದ್ದಾರೆ. ರಿಷಿಕಾ ಸಿಂಗ್ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ. ಈಕೆ ಸಹೋದರ ಆದಿತ್ಯ ಕೂಡ ಹಲವು ಚಿತ್ರದಲ್ಲಿ ನಟಿಸಿದಾರೆ.

ಕನ್ನಡ ಸಿನಿಮಾ ರಂಗದಲ್ಲಿ 2011 ರಲ್ಲಿ ಕಂಠೀರವ ಸಿನಿಮಾದ ಮೂಲಕ ನಾಯಕಿಯಾಗಿ ತೆರೆಗೆ ಬಂದ ರಿಷಿಕಾ ಸಿಂಗ್ ಇದುವರೆಗೂ ಮೂರು ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸಿದ್ದರೇ, ಎರಡು ಚಿತ್ರಗಳಲ್ಲಿ ಗೆಸ್ಟ್ ಅಫಿಯರೆನ್ಸ್ ನೀಡಿದ್ದಾರೆ.

2012 ರಲ್ಲಿ ಸಂದೀಪ್ ಎಂಬ ಬೆಂಗಳೂರು ಉದ್ಯಮಿಯೊಂದಿಗೆ ರಿಷಿಕಾ ಸಿಂಗ್ ವಿವಾಹ ನಿಶ್ಚಿತಾರ್ಥವಾಗಿತ್ತು. ಬಳಿಕ ಮದುವೆ ರದ್ದಾಗಿತ್ತು. ಇದರಿಂದ ಮಾನಸಿಕ ಆಘಾತಕ್ಕಿಡಾಗಿದ್ದ ರಿಷಿಕಾ ಸಿಂಗ್ 2013 ರಲ್ಲಿ ಕೆಲಕಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

Leave A Reply

Your email address will not be published.