ಮಂಗಳವಾರ, ಏಪ್ರಿಲ್ 29, 2025
HomeBreakingಅರಿಶಿನ ನಿಮ್ಮ ಸೌಂದರ್ಯವನ್ನು ಹೇಗೆಲ್ಲಾ ಕಾಪಾಡುತ್ತೆ ಗೊತ್ತಾ ?

ಅರಿಶಿನ ನಿಮ್ಮ ಸೌಂದರ್ಯವನ್ನು ಹೇಗೆಲ್ಲಾ ಕಾಪಾಡುತ್ತೆ ಗೊತ್ತಾ ?

- Advertisement -

ಅರಿಶಿನವು ಕೇವಲ ಅಡುಗೆ ಮನೆಯಲ್ಲಿ ಮಾತ್ರ ಪ್ರಮುಖ ಪಾತ್ರವನ್ನು ಹೊಂದಿರುವುದು ಮಾತ್ರವಲ್ಲ. ಅರಿಶಿನವು ಧಾರ್ಮಿಕ ಕಾರ್ಯಗಳಲ್ಲಿ ಮತ್ತು ವಾಸ್ತು ಶಾಸ್ತ್ರದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವುದರೊಂದಿಗೆ ಆರೋಗ್ಯದ ದೃಷ್ಟಿಯಲ್ಲೂ ಅರಿಶಿನ ಬಹು ಉಪಕಾರಿ. ಅರಿಶಿನವಿಲ್ಲದೆ ಯಾವುದೇ ಧಾರ್ಮಿಕ ಆಚರಣೆ ಪೂರ್ಣಗೊಳ್ಳುವುದಿಲ್ಲ.

ಅರಿಶಿನ ಗುರು ಗ್ರಹಕ್ಕೆ ಸಂಬಂಧಿಸಿದೆ. ಅರಿಶಿನವು ಅಡುಗೆ ಮನೆಯಲ್ಲಿ ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಉತ್ತರ ಭಾರತದ ಕೆಲವೊಂದು ಹಳ್ಳಿಗಳಲ್ಲಿ ಈಗಲೂ ಕೂಡ ಪ್ರತಿ ದಿನ ಸ್ನಾನ ಮಾಡುವ ಸಂದರ್ಭದಲ್ಲಿ ಅರಿಶಿನ ಕಸ್ತೂರಿಯ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಹಾಗೂ ಮೈ – ಕೈಗೆ ಹಚ್ಚಿಕೊಂಡು ಸ್ನಾನ ಮಾಡುವ ಪದ್ಧತಿ ಇದೆ.

ಇದನ್ನೂ ಓದಿ: Bed Tea : ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಅಭ್ಯಾಸವಿದ್ಯಾ ? ಹಾಗಾದ್ರೆ ಹುಷಾರಾಗಿರಿ !

ನಿಮ್ಮ ತ್ವಚೆಯ ಬಹುತೇಕ ಎಲ್ಲ ಸಮಸ್ಯೆಗಳಿಗೆ ಅತ್ಯುತ್ತಮ ಹಾಗೂ ಏಕೈಕ ಪರಿಹಾರವೆಂದರೆ ಅರಿಶಿನ. ಇದನ್ನು ನಿಯಮಿತವಾಗಿ ಬಳಸುವುದರಿಂದ ಮೊಡವೆ, ಕಲೆ, ಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ತಡೆಯಬಹುದು. ಅರಿಶಿನ ಕೊಂಬನ್ನು ತೇದು ಮುಖಕ್ಕೆ ಹಚ್ಚಿ ತಣ್ಣೀರಿನಿಂದ ತೊಳೆಯುವುದರಿಂದ ಮೊಡವೆ ಸಮಸ್ಯೆಯಿಂದ ದೂರವಿರಬಹುದು. ಆದರೆ ಅರಿಶಿನ ಮುಖಕ್ಕೆ ಹಚ್ಚಿದ ಬಳಿಕ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ.

ಇದನ್ನೂ ಓದಿ: ಗುಲಾಬಿ ಚಹಾ : ತೂಕ ಇಳಿಸುವುದರ ಜೊತೆಗೆ ಇದೆ ಹಲವು ಲಾಭಗಳು

ಅರಿಶಿನದೊಂದಿಗೆ ನಾಲ್ಕು ಚಮಚ ಮೊಸರು ಬೆರೆಸಿ ಹಚ್ಚಿಕೊಳ್ಳುವುದರಿಂದ ತ್ವಚೆ ಒಣಗುವುದನ್ನು ತಪ್ಪಿಸಬಹುದು. ಅರಿಶಿನಕ್ಕೆ ಎರಡು ಚಮಚ ಲಿಂಬೆ ರಸ ಬೆರೆಸಿ ಹಚ್ಚಿಕೊಂಡರೆ ತ್ವಚೆ ಸ್ವಚ್ಛವಾಗುತ್ತದೆ. ವಾರಕ್ಕೊಮ್ಮೆ ಕಡಲೆ ಹಿಟ್ಟಿಗೆ ತುಸು ಅರಿಶಿನ ಹಾಕಿ ಪೇಸ್ಟ್ ತಯಾರಿಸಿ ಹಚ್ಚಿಕೊಂಡರೆ ಮುಖ ಕಾಂತಿಯತವಾಗುತ್ತದೆ. ಇದು ಫೇಸ್ ಪ್ಯಾಕ್ ನಂತೆ ಕೆಲಸ ಮಾಡುತ್ತದೆ. ಅರಿಶಿನಕ್ಕೆ ಜೇನು ಬೆರೆಸಿ ಹಚ್ಚಿಕೊಳ್ಳುವುದರಿಂದಲೂ ನಿಮ್ಮ ತ್ವಚೆ ಆಕರ್ಷಣೀಯವಾಗಿ ಕಾಣಿಸಿಕೊಳ್ಳುತ್ತದೆ.

(You know how turmeric protects your beauty)

RELATED ARTICLES

Most Popular