ಮದುವೆಯಲ್ಲಿ ಬೋಳಿಸುತ್ತಾರೆ ವಧುವಿನ ಕೂದಲು ! ಇಲ್ಲಿನ ಜನರದ್ದು ವಿಚಿತ್ರ ಸಂಪ್ರದಾಯ

ಮದುವೆಯನ್ನು ಪವಿತ್ರ ಬಂಧನವೆಂದು ಪರಿಗಣಿಸಲಾಗುತ್ತದೆ. ಜನರು ತಮ್ಮದೆ ಆದ ನಂಬಿಕೆ ಮತ್ತು ಆಚರಣೆಗಳ ಪ್ರಕಾರ ಆಚರಿಸುತ್ತಾರೆ. ಮದುವೆಯಾಗುವ ಮೊದಲು ಹುಡುಗಿಯರು ತಮ್ಮ ಕೂದಲಿನ ಆರೈಕೆ ಮಾಡ್ತಾರೆ. ಆದ್ರೆ ಇಲ್ಲೊಂದು ದೇಶದಲ್ಲಿ ಮದುವೆಗೆ ಮುನ್ನ ಹುಡುಗಿಯರು ತಮ್ಮ ಕೂದಲನ್ನು ಕತ್ತರಿಸಿಕೊಳ್ತಾರೆ.

ಈ ವಿಚಿತ್ರ ಸಂಪ್ರದಾಯವನ್ನು ಬೋರಾನ ಬುಡಕಟ್ಟು ಜನಾಂಗದಲ್ಲಿ ಆಚರಿಸಿಕೊಂಡು ಬರುತ್ತಿದೆ. ಸುಮಾರು 500 ಸಾವಿರ ಜನರ ಈ ಬುಡಕಟ್ಟು ದಕ್ಷಿಣ ಆಫ್ರಿಕಾದ ಇಥಿಯೋಪಿಯಾ ಮತ್ತು ಸೊಮಾಲಿಯಾ ಮಧ್ಯದಲ್ಲಿ ವಾಸಿಸುತ್ತಿದೆ. ಹಳ್ಳಿ ಮತ್ತು ಪ್ರಾಣಿಗಳ ಕಾಳಜಿಯನ್ನು ಪುರುಷರು ನೋಡಿಕೊಳ್ತಾರೆ. ಮನೆಯ ಅಲಂಕಾರ ಮತ್ತು ಎಲ್ಲಾ ಸಂಪ್ರದಾಯಗಳನ್ನು ನಿರ್ವಹಿಸುವ ಜವಾಬ್ದಾರಿ ಮಹಿಳೆಯರದ್ದು.

ಇದನ್ನೂ ಓದಿ: ಮದುವೆಗೂ ಮುನ್ನವೇ ಮಕ್ಕಳನ್ನು ಪಡೆಯುತ್ತಿದ್ದಾರೆ ಯುವತಿಯರು ! ಅಧ್ಯಯನದಿಂದ ಬಯಲಾಯ್ತು ಶಾಕಿಂಗ್‌ ವಿಚಾರ

ಅಚ್ಚರಿಯ ವಿಷಯವೆಂದರೆ ಬೋರಾನಾ ಬುಡಕಟ್ಟಿನ ಹುಡುಗಿಯರಿಗೆ ಮದುವೆಯ ಮೊದಲು ಕೂದಲು ಬೆಳೆಸುವ ಸಂಪೂರ್ಣ ಅಧಿಕಾರವಿದೆ. ಮದುವೆ ಸಂದರ್ಭದಲ್ಲಿ ಹುಡುಗಿಯರ ಕೂದಲನ್ನು ಬೋಳಿಸಲಾಗುತ್ತದೆ. ಕೂದಲು ತೆಗೆದ ಹುಡುಗಿಗೆ ಒಳ್ಳೆಯ ಪತಿ ಸಿಗ್ತಾನೆಂಬ ನಂಬಿಕೆಯಿದೆ. ಫೋಟೋ ತೆಗೆಯುವುದು ಕೂಡ ಇಲ್ಲಿ ನಿಶಿದ್ಧ.

ಇದನ್ನೂ ಓದಿ: ಸಾವಿನ ನಂತ್ರ ಹಲ್ಲು ಕಿತ್ತಿಟ್ಟುಕೊಳ್ತಾರೆ ಸಂಬಂಧಿಕರು ! ಇಲ್ಲಿನ ಜನರ ಆಚರಣೆಯೇ ವಿಚಿತ್ರ

ಇದ್ರಿಂದ ದೇಹದಲ್ಲಿ ರಕ್ತದ ಕೊರತೆ ಎದುರಾಗುತ್ತದೆ ಎಂದು ನಂಬಲಾಗಿದೆ. ಇಲ್ಲಿನ ಹುಡುಗರು ಉದ್ದದ ಕೂದಲು ಬಿಡ್ತಾರೆ. ಹೆಣ್ಣು ಮಕ್ಕಳಂತೆ ಕಾಣುವ ಹುಡುಗರಿಗೆ, ಹೆಚ್ಚಿನ ಗೌರವ ಸಿಗುತ್ತದೆ. ಅವರನ್ನು ಅದೃಷ್ಟದ ಹುಡುಗ ಎಂದು ನಂಬಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು, ಹಳ್ಳಿ ಬಿಟ್ಟು ಪಟ್ಟಣಗಳಿಗೆ ತೆರಳುತ್ತಿದ್ದಾರೆ. ಶಿಕ್ಷಣ ಸಿಗ್ತಿದೆ. ಹಾಗಾಗಿ ಈ ಸಂಪ್ರದಾಯಗಳನ್ನು ಪಾಲಿಸುವವರ ಸಂಖ್ಯೆ ಕಡಿಮೆಯಾಗ್ತಿದೆ

(Bridal hair shaved at the wedding! People here have a strange tradition)

Comments are closed.