ಪ್ರಪಂಚದಲ್ಲಿವೆ ವಿಚಿತ್ರ ನಗರಗಳು ! ಅಚ್ಚರಿಯಾಗುತ್ತೆ ಇಲ್ಲಿನ ವಿಚಿತ್ರ ಸಂಗತಿ

ದೇಶ ಸುತ್ತು, ಕೋಶ ಓದು ಎನ್ನುವ ಗಾದೆಯಿದೆ. ಕೊರೊನಾ ಸಂದರ್ಭದಲ್ಲಿ ದೇಶ ಸುತ್ತೋದು ಕಷ್ಟ. ಪ್ರಪಂಚದಲ್ಲಿ ವಿಚಿತ್ರ ನಗರಗಳಿವೆ. ಅದ್ರ ಬಗ್ಗೆ ಮಾಹಿತಿ ಇಲ್ಲಿದೆ. ಮನೆಯಲ್ಲಿದ್ದೇ ಈ ಮಾಹಿತಿಯನ್ನು ತಿಳಿದುಕೊಳ್ಳಿ.

ಗಿಥಾರ್ನ್ : ನೆದರ್‌ಲ್ಯಾಂಡ್ ನ ಈ ನಗರವನ್ನು ಉತ್ತರದ ವೆನಿಸ್ ಎಂದೂ ಕರೆಯುತ್ತಾರೆ. ಇಲ್ಲಿ ನಗರದಾದ್ಯಂತ ಕಾಲುವೆಗಳು ಹರಿಯುತ್ತವೆ. ಹಾಗಾಗಿ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ದೋಣಿ ಮೂಲಕ ಹೋಗುತ್ತಾರೆ. ಇಲ್ಲಿ ಒಂದೇ ಒಂದು ರಸ್ತೆಯೂ ಇಲ್ಲ. ಪ್ರಸ್ತುತ ಇದು ಜನಪ್ರಿಯ ಪ್ರವಾಸಿ ತಾಣವಾಗಿದೆ.

ಇದನ್ನೂ ಓದಿ: Montreal ಸೌಂದರ್ಯಕ್ಕೆ ಮನಸೋಲದವರೇ ಇಲ್ಲ : ಹೇಗೆ ಗೊತ್ತಾ ನಿಸರ್ಗ ತಾಣ

ಡಾಂಗ್ಗುವಾನ್ : ಈ ನಗರ ತುಂಬಾ ವಿಚಿತ್ರವಾಗಿದೆ. ಚೀನಾದ ಪೂರ್ವ ಪ್ರದೇಶ ಮತ್ತು ಹಾಂಗ್ ಕಾಂಗ್ ಬಳಿ ಇರುವ ಡೊಂಗ್ಗುವಾನ್ ನಗರದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರಿದ್ದಾರೆ. ಇಲ್ಲಿನ ಪುರುಷರು ಅನೇಕ ಮಹಿಳೆಯರ ಜೊತೆ ಒಟ್ಟಿಗೆ ಡೇಟಿಂಗ್ ಮಾಡುತ್ತಾರೆ. ಈ ನಗರ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇಲ್ಲಿ ಕೆಲಸ ಪಡೆಯುವುದಕ್ಕಿಂತ ಗೆಳತಿಯನ್ನು ಪಡೆಯುವುದು ಸುಲಭ.

ಕಾಮಿಕತ್ಸು : ಜಪಾನ್‌ನ ಕಾಮಿಕಾತ್ಸು ನಗರವು ಶೂನ್ಯ ತ್ಯಾಜ್ಯ ಪುರಸಭೆಯಾಗುವ ಹಾದಿಯಲ್ಲಿದೆ. ಈ ನಗರವು ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಈ ನಗರದಲ್ಲಿ, ತ್ಯಾಜ್ಯವನ್ನು 45 ರೀತಿಯಲ್ಲಿ ವಿಂಗಡಿಸಲಾಗಿದೆ. ಇಲ್ಲಿಯವರೆಗೆ ಇಲ್ಲಿ ಶೂನ್ಯ ತ್ಯಾಜ್ಯ ಕಾರ್ಯಕ್ರಮವು ತುಂಬಾ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: ಸಾವಿನ ನಂತ್ರ ಹಲ್ಲು ಕಿತ್ತಿಟ್ಟುಕೊಳ್ತಾರೆ ಸಂಬಂಧಿಕರು ! ಇಲ್ಲಿನ ಜನರ ಆಚರಣೆಯೇ ವಿಚಿತ್ರ

ಮೊನಾವಿ ಮತ್ತು ಗ್ರಾಸ್ : ಈ ನಗರಗಳು ಯುಎಸ್ ರಾಜ್ಯದ ನೆಬ್ರಸ್ಕಾದಲ್ಲಿದೆ. ಮೊನೊವಿ ನಗರದಲ್ಲಿ ಒಬ್ಬೇ ಒಬ್ಬ ವಾಸಿಸುತ್ತಿದ್ದಾನೆ. ಗ್ರಾಸ್ ಸಿಟಿಯಲ್ಲೂ ಇದೇ ಪರಿಸ್ಥಿತಿ ಇದೆ. ಈ ನಗರದಲ್ಲಿ ಕೇವಲ ಇಬ್ಬರು ಮಾತ್ರ ವಾಸಿಸುತ್ತಿದ್ದಾರೆ.

ಬೆಂಗಕಾಲಾ : ಇಂಡೋನೇಷ್ಯಾದ ಬಾಲಿಯಲ್ಲಿರುವ ಒಂದು ಸಣ್ಣ ಪಟ್ಟಣ. ಈ ಪಟ್ಟಣದಲ್ಲಿ ಜನರು ಕಾಟ ಕೋಲೋಕ್ ಹೆಸರಿನ ವಿಚಿತ್ರ ಭಾಷೆಯನ್ನು ಮಾತನಾಡುತ್ತಾರೆ. ಕಿವುಡರ ಭಾಷೆ ಎಂಬುದು ಇದರ ಅರ್ಥ. ಈ ಪಟ್ಟಣದಲ್ಲಿ ಕೇವಲ 44 ಜನರು ವಾಸಿಸುತ್ತಿದ್ದಾರೆ. ಕಳೆದ ಆರು ತಲೆಮಾರುಗಳಿಂದ ಇಲ್ಲಿ ಹೆಚ್ಚಿನ ಮಕ್ಕಳು ಕಿವುಡರಾಗಿ ಜನಿಸುತ್ತಿದ್ದಾರೆ. ಅದಕ್ಕಾಗಿಯೇ ಜನರು ಈ ವಿಚಿತ್ರ ಭಾಷೆಯನ್ನು ಬಳಸುತ್ತಿದ್ದಾರೆ.

(Strange cities in the world)

Comments are closed.