ಸೋಮವಾರ, ಏಪ್ರಿಲ್ 28, 2025
HomeBreakingಒಂಟಿ ಮನೆಯಲ್ಲಿ ಮುತ್ತಿನ ಸದ್ದು...! ದಿವ್ಯ-ಮಂಜು ನಡುವೆ ಜೋರಾಯಿತು ಕುಚ್ ಕುಚ್‌...!!

ಒಂಟಿ ಮನೆಯಲ್ಲಿ ಮುತ್ತಿನ ಸದ್ದು…! ದಿವ್ಯ-ಮಂಜು ನಡುವೆ ಜೋರಾಯಿತು ಕುಚ್ ಕುಚ್‌…!!

- Advertisement -

ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಪ್ರೀತಿ-ಪ್ರೇಮದ ಅಮಲು ಜೋರಾಗಿದೆ. ದಿವ್ಯ ಉರುಡುಗ ಹಾಗೂ ಅರವಿಂದ್ ಬಳಿಕ ಈಗ ದಿವ್ಯ ಸುರೇಶ್ ಹಾಗೂ ಮಂಜು ನಡುವೆ ಕುಚ್‌ ಕುಚ್ ಹೋತಾ ಹೇ ನಡೆದಿದೆ.

ದಿವ್ಯ ಮತ್ತು ಅರವಿಂದ್ ಜೋಡಿ ಪ್ರೇಕ್ಷಕರ ಮನಸೆಳೆದ‌ ಬೆನ್ನಲ್ಲೇ ಈಗ ಮಂಜು ಮತ್ತು ದಿವ್ಯ ಸುರೇಶ್ ಸರದಿ. ದಿವ್ಯ ಮತ್ತು ಅರವಿಂದ್ ಜೋಡಿಗೆ ಸೆಡ್ಡು ಹೊಡೆಯುವಂತೆ ಮುಂದುವರಿದಿದ್ದು ಕಿಸ್ಸಿಂಗ್ ಮೂಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಬಿಗ್ ಬಾಸ್ ಈ ಭಾರಿಯ ಎಲಿಮಿನೇಶನ್ ಪ್ರಕ್ರಿಯೆಯ ಭಾಗವಾಗಿ ಪ್ರಿಂಟರ್‌ವೊಂದನ್ನು ಇಡಲಾಗಿತ್ತು. ಅದರಲ್ಲಿ ಯಾರ ಪೋಟೋ ಸೇಫ್ ಎಂದು ಪ್ರಿಂಟ್ ಆಗುತ್ತೋ ಅವರು ಸೇಫ್ ಎಂದು ಹೇಳಿದ್ದರು.

ಈ ವೇಳೆ ದಿವ್ಯ ಸುರೇಶ್ ಸೇಫ್ ಎಂದು ಪೋಟೋ ಬಂದಾಗ ಮಂಜು ಆಹಾ ಎಷ್ಟು ಸುಂದರವಾಗಿ ಕಾಣುತ್ತಿದ್ದೀಯಾ ಎಂದು ದಿವ್ಯ ಪೋಟೋ ಕ್ಕೆ ಮುತ್ತಿಕ್ಕಿದ್ದಾನೆ.

ಬೇರೆ ಸಂದರ್ಭವಾದರೇ ಇದು ದೊಡ್ಡ ವಿಚಾರವಾಗುತ್ತಿತ್ತೇನೋ.ಆದರೆ ಎಲ್ಲರೂ ಅವರವರ ಎಲಿಮಿನೇಶನ್ ತಲೆಬಿಸಿಯಲ್ಲಿ ಇದ್ದಿದ್ದರಿಂದ ಯಾರು ಗಮನಿಸಿಲ್ಲ.

ಅದರೆ ಬಿಗ್ ಬಾಸ್ ಕ್ಯಾಮರಾದಲ್ಲಿ ಎಲ್ಲವೂ ರೆಕಾರ್ಡ್ ಆಗಿದ್ದು ಈ ಮುತ್ತಿನಾಟ ನೋಡಿ ಪ್ರೇಕ್ಷಕರು ಕಂಗಾಲಾಗಿದ್ದಾರೆ.

RELATED ARTICLES

Most Popular