ರಕ್ಷಿತ್ ಜೊತೆ ಸಪ್ತಪದಿ ತುಳಿತಾರಾ ರಮ್ಯ…? ಅಭಿಮಾನಿಗಳ ಕುತೂಹಲಕ್ಕೆ ಸ್ಯಾಂಡಲ್ ವುಡ್ ಕ್ವೀನ್ ಏನಂದ್ರು ಗೊತ್ತಾ…?!

ರಾಜಕೀಯ ಹಾಗೂ ಸಿನಿಮಾ ದಿಂದ ಸುರಕ್ಷಿತ ಅಂತರ ಕಾಪಾಡಿಕೊಂಡಿರೋ ಒಂದು ಕಾಲದ ಸ್ಯಾಂಡಲ್ ಕ್ವೀನ್ ಹಾಗೂ ಮಾಜಿ ಸಂಸದೆ ರಮ್ಯ ಸೋಷಿಯಲ್ ಮೀಡಿಯಾ ದಲ್ಲಿ ಒಂದಿಷ್ಟು ಆಸಕ್ತಿಕರ ಪ್ರಶ್ನೆಗಳಿಗೆ ಉತ್ತರಿಸಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ನೀವ್ಯಾಕೆ ರಕ್ಷಿತ್ ಶೆಟ್ಟಿ ಯನ್ನು ಮದುವೆ ಆಗಬಾರದು ಎಂಬುದಕ್ಕೂ ಉತ್ತರಿಸಿದ್ದಾರೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಅಕ್ಟಿವ್ ಆಗಿರೋ ನಟಿ ಹಾಗೂ ಮಾಜಿ ಸಂಸದೆ ರಮ್ಯ ಅಲ್ಲೇ ಒಂದಿಷ್ಟು ಇಂಟ್ರಸ್ಟಿಂಗ್ ಪ್ರಶ್ನೋತ್ತರದ ಭಾಗವಾಗಿ ಅಭಿಮಾನಿಗಳ ಕುತೂಹಲಕ್ಕೆ ತಾಳ್ಮೆಯಿಂದ ಉತ್ತರಿಸಿದ್ದಾರೆ. ಸ್ಯಾಂಡಲ್ ವುಡ್ ಸೇರಿದಂತೆ ಚಿತ್ರರಂಗ ಹಾಗೂ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ರಮ್ಯ ಮತ್ತೆ ಚಿತ್ರರಂಗಕ್ಕೆ ಬರ್ತಾರಾ ಅನ್ನೋದು.‌ಆದರೆ‌ಇದಕ್ಕೆ ಸ್ಪಷ್ಟವಾದ ಉತ್ತರವೇ ಸಿಕ್ಕಿರಲಿಲ್ಲ.

http://bit.ly/3aEVDWt

ಇದೀಗ ಸೋಷಿಯಲ್ ಮೀಡಿಯಾದಲ್ಲಿ ರಮ್ಯ ಅಭಿಮಾನಿಗಳ ಈ ಕುತೂಹಲಕ್ಕೆ ಉತ್ತರ ನೀಡಿದ್ದು, ಬಣ್ಣದ ಬದುಕು ಇನ್ನು ಮುಳುಗಿದ ಹಡಗು ಎಂದಿದ್ದಾರೆ. ಅಲ್ಲದೇ ರಾಜಕೀಯದಿಂದಲೂ ದೂರ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.

http://bit.ly/3xqH3eU

ನೀವು ರಕ್ಷಿತ್ ಶೆಟ್ಟಿಯನ್ನು ಮದುವೆಯಾಗಿ ಎಂದು ಅಭಿಮಾನಿಗಳ ಒತ್ತಾಯಕ್ಕೆ ನಗುವಿನ ಇಮೋಜಿ ಜೊತೆ ಉತ್ತರಿಸಿದ ರಮ್ಯ, ಯಾಕೆ ಎಲ್ಲರೂ ಮದುವೆಯ ಬಗ್ಗೆಯೇ ಮಾತನಾಡುತ್ತೀರಾ. ಮದುವೆಯಾದರೇ ಖುಷಿಯಾಗಿರೋಕೆ ಅಗಲ್ಲ ಗೊತ್ತಾ ಎಂದು ಪ್ರಶ್ನಿಸಿದ್ದಾರೆ.

ಹೀಗಾಗಿ ಸ್ಯಾಂಡಲ್ ವುಡ್ ಕ್ವೀನ್ ಆಗಿದ್ದ ರಮ್ಯ ಇಂದಲ್ಲ ನಾಳೆ ಮತ್ತೆ ಬಣ್ಣ ಹಚ್ಚುತ್ತಾರೆ ಎಂದು ಕಾದಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟುಮಾಡಿದೆ.

http://bit.ly/2PrH29o

ರಮ್ಯ ರಕ್ಷಿತ್ ರನ್ನು‌ ಮದುವೆಯಾಗಬೇಕು ಎಂಬ ಅಭಿಮಾನಿಗಳ ಮಾತಿಗೆ ರಮ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಕ್ಷಿತ್ ಶೆಟ್ಟಿ ನಾನು ರಮ್ಯ ಅಭಿಮಾನಿ ಎಂದಿದ್ದಲ್ಲದೇ‌ ನನ್ನ ಮೊದಲ‌ ಮತ್ತು ಕೊನೆಯ ಸೆಲಿಬ್ರೆಟಿ ಕ್ರಶ್ ರಮ್ಯ ಎಂದಿದ್ದರು.ಈ ಹಿಂದೆ ರಮ್ಯ ಶ್ರೀಮನ್ನಾರಾಯಣ ಟ್ರೇಲರ್ ನೋಡಿ ಹೊಗಳಿದ್ದರು.

Comments are closed.