ತಂದೆಯ ತೋಳಲ್ಲಾಡಬೇಕಿದ್ದ ಮಗ ಪೋಟೋ ಜೊತೆ ಆಡಿದ….! ಮೇಘನಾ ಹಂಚಿಕೊಂಡ್ರು ಕಣ್ಣೀರು ತರಿಸುವ ವಿಡಿಯೋ…!!

ಸ್ಯಾಂಡಲ್ ವುಡ್ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಿಧನರಾಗಿ ಇನ್ನೇನು ಒಂದು ವರ್ಷವಾಗಲಿದೆ. ಈ ಮಧ್ಯೆ ತಂದೆಯ ಮುಖವನ್ನೇ ನೋಡದೇ ದಿನಕಳೆಯುತ್ತಿರುವ ಜ್ಯೂನಿಯರ್ ಚಿರು ತಂದೆಯ ಪೋಟೋದೊಂದಿಗೆ ಆಟ ಆಡುವ ವಿಡಿಯೋವನ್ನು ಮೇಘನಾ ಶೇರ್ ಮಾಡಿದ್ದು, ಕಲ್ಲುಹೃದಯವನ್ನು ಕಲಕುವಂತಿದೆ ಈ ದೃಶ್ಯ.

ಮೊನ್ನೆ ಮೊನ್ನೆಯಷ್ಟೇ ಮೊದಲ ಬಾರಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ಜ್ಯೂನಿಯರ್ ಚಿರು ಪೋಟೋ ಹಂಚಿಕೊಂಡು ಮಗ ಅರ್ಧ ವರ್ಷ ಪೊರೈಸಿದ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು ಮೇಘನಾ.

ಇದೀಗ ತಮ್ಮ ವೆಡ್ಡಿಂಗ್ ಆನ್ಯಿವರ್ಸರಿಯಂದು ಅಭಿಮಾನಿಗಳು ಕಣ್ಣೀರಿಡುವಂತಹ ಭಾವುಕ ದೃಶ್ಯವೊಂದರ ವಿಡಿಯೋ ಹಂಚಿಕೊಂಡಿದ್ದಾರೆ. ಪುಟಾಣಿ ಚಿರುವನ್ನು ಮೇಘನಾ ಚಿರಂಜೀವಿ ಸರ್ಜಾ ಪೋಟೋದ ಎದುರು ಹಿಡಿದುಕೊಂಡಿದ್ದಾರೆ.

ಅಷ್ಟೇ ಅಲ್ಲ ಅಪ್ಪನ ಪೋಟೋ ತೋರಿಸಿ ನೋಡು ಅಪ್ಪ ಎಂದು ಹೇಳುತ್ತಾರೆ. ಆಗ ತಂದೆಯ ಪೋಟೋವನ್ನು ಕಣ್ಣುಮಿಟುಕಿಸದೇ ನೋಡುವ ಜ್ಯೂನಿಯರ್ ಬಳಿಕ ಪೋಟೋವನ್ನು ಮುಟ್ಟಿ ಮುಟ್ಟಿ‌ನೋಡಿ ತನ್ನ ಬಾಲಭಾಷೆಯಲ್ಲೇ ಏನೋ ಹೇಳಲು ಪ್ರಯತ್ನಿಸುತ್ತಾನೆ.

ಈ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರೋ ಮೇಘನಾ ನಮ್ಮ ಚಮತ್ಕಾರ. ಎಂದಿಗೂ ಮತ್ತು ಯಾವಾಗಲೂ ಎಂಬ ತಲೆಬರಹದೊಂದಿಗೆ ಹಾರ್ಟ್ ಇಮೋಜಿ ಬಳಸಿದ್ದಾರೆ.

ಈ ವಿಡಿಯೋಗೆ ಮೇಘನಾ‌ ಹಾಗೂ ಚಿರು ಸ್ನೇಹಿತರಾದ ಪ್ರಜ್ವಲ್,ರಾಗಿಣಿ,ಪನ್ನಗಾಭರಣ,ಶ್ವೇತಾ ಚೆಂಗಪ್ಪ್ ಸೇರಿದಂತೆ ಹಲವು ಕಮೆಂಟ್ ಮಾಡಿದ್ದಾರೆ.

https://www.instagram.com/p/COX8mliFuXY/?igshid=18r8gx1v28ea9

ಇನ್ನು ಎಲ್ಲ ಅಂದುಕೊಂಡಂತೆ ಆಗಿದ್ದರೇ ಅಪ್ಪನ‌ ತೋಳಲ್ಲಿ ಮುದ್ದಾಗಿ ಆಟವಾಡಿ ಕೊಂಡಬೇಕಿದ್ದ ಮಗು ಹೀಗೆ ತಂದೆಯನ್ನು ಪೋಟೋದಲ್ಲಿ ನೋಡಿ ಸಂಭ್ರಮಿಸುವಂತಹ ಸ್ಥಿತಿ ಬಂದಿರೋದಿಕ್ಕೆ ಅಭಿಮಾನಿಗಳು ಕಣ್ಣೀರಿಟ್ಟಿದ್ದು, ಮೇಘನಾ ಪೋಸ್ಟ್ ಗೆ ಕಮೆಂಟ್ ಮಾಡೋ‌ ಮೂಲಕ ಜನರು ತಮ್ಮ ದುಃಖ ತೋಡಿಕೊಂಡಿದ್ದಾರೆ.

Comments are closed.