ಭಾನುವಾರ, ಏಪ್ರಿಲ್ 27, 2025
HomeBreakingಉಪಚುನಾವಣೆ ಎದುರಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ…! ಆರೋಗ್ಯ ಸಚಿವ ರ ವಿರುದ್ಧ ಕಿಕ್ ಬ್ಯಾಕ್ ಆರೋಪ..!!

ಉಪಚುನಾವಣೆ ಎದುರಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ…! ಆರೋಗ್ಯ ಸಚಿವ ರ ವಿರುದ್ಧ ಕಿಕ್ ಬ್ಯಾಕ್ ಆರೋಪ..!!

- Advertisement -

ರಾಜ್ಯದಲ್ಲಿ ಕೊರೋನಾ ಹಾಗೂ ಉಪಚುನಾವಣೆ ಎರಡು ಕಾವೇರುತ್ತಿರುವಾಗಲೇ ರಾಜ್ಯ ಆರೋಗ್ಯ ಸಚಿವರ ವಿರುದ್ಧ ಕಿಕ್ ಬ್ಯಾಕ್ ಆರೋಪ ಕೇಳಿಬಂದಿದೆ. ಆಮ್ ಆದ್ಮಿ ಪಕ್ಷ ಡಾ.ಸುಧಾಕರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆಗೊಳಿಸಿದೆ.

ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳಿಗೆ ಬ್ಲಡ್ ಟೆಸ್ಟ್ ಖರೀದಿ ಮಾಡುವಲ್ಲಿ ಅಕ್ರಮ ನಡೆದಿದ್ದು, ಆರೋಗ್ಯ ಸಚಿವರು ಕೋಟ್ಯಾಂತರ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆಯ ಟೆಂಡರ್ ನಲ್ಲಿ ಗೋಲ್ಮಾಲ್ ನಡೆದಿದೆ. ರಾಜ್ಯದಾದ್ಯಂತದ ಸರ್ಕಾರಿ ಆಸ್ಪತ್ರೆಗಳಿಗೆ ಬ್ಲಡ್ ಟೆಸ್ಟ್ ಕಿಟ್ ಪೊರೈಸುವ ಟೆಂಡರ್ ನಲ್ಲಿ ಅಂದಾಜು 20 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಆಮ್ ಆದ್ಮಿ ಪಕ್ಷದ ಮೋಹನ್ ದಾಸರಿ ಆರೋಪಿಸಿದ್ದಾರೆ.

ಟೆಂಡರ್ ನಲ್ಲಿ ಬೇರೆ ಯಾರಿಗೂ ಪಾಲ್ಗೊಳ್ಳಲು ಬಿಡದೆ ಅತ್ಯಂತ ಹೆಚ್ಚಿನ ದರಕ್ಕೆ ಬಿಡ್ ಮಾಡಿದವರಿಗೆ ಟೆಂಡರ್ ನೀಡಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿನ ದರ ನೀಡಿ ಕಿಟ್ ಖರೀದಿಸಲಾಗಿದೆ ಎಂದಿರುವ ಮೋಹನ್ ದಾಸರಿ, ಇದಕ್ಕೆ ಪೂರಕವಾಗಿ ಕರ್ನಾಟಕ ಹಾಗೂ ಕೇರಳದ ಬ್ಲಡ್ ಟೆಸ್ಟ್ ಕಿಟ್ ದರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಕರ್ನಾಟಕ ಡ್ರಗ್  ಆಂಡ್ ಲಾಜಿಸ್ಟಿಕ್ ವೇರ್ ಹೌಸಿಂಗ್ ಸೊಸೈಟಿಯಲ್ಲಿ 39 ಕೋಟಿ ಹಗರಣವಾಗಿದೆ. ಆರೋಗ್ಯ ಸಚಿವ ಡಾ.ಸುಧಾಕರ್ 20 ಕೋಟಿ ಕಿಕ್ ಬ್ಯಾಕ್ ಪಡೆದು ತಮ್ಮ ಆಪ್ತರ ಕಂಪನಿಗೆ ಸಿಂಗಲ್ ಬಿಡ್ ನಲ್ಲಿ ಟೆಂಡರ್ ನೀಡಿದ್ದಾರೆ ಎಂದಿದ್ದಾರೆ. ಅಲ್ಲದೇ ಟೆಂಡರ್ ಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆಗೊಳಿಸಿದ್ದಾರೆ.

ಒಂದೆಡೆ ಈಶ್ವರಪ್ಪ ಹಾಗೂ ಸಿಎಂ ನಡುವೆ ವಾರ್ ನಡೆದಿದ್ದು, ಪತ್ರದ ಮೂಲಕ ರಾಜ್ಯಪಾಲರ ಅಂಗಳ ತಲುಪಿದ್ದರೇ ಇತ್ತ ಡಾ.ಸುಧಾಕರ್ ವಿರುದ್ಧ ಕಿಕ್ ಬ್ಯಾಕ್ ಆರೋಪ ಕೇಳಿಬಂದಿದೆ. ಇದು ಉಪಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಗೆ ಅಸ್ತ್ರವಾಗಲಿದೆ ಅನ್ನೋ ಮಾತು ಕೇಳಿಬಂದಿದೆ.

RELATED ARTICLES

Most Popular